ಸೂಪರ್‌ಹಿಟ್ ಆಶಿಕಿ ಸಿನಿಮಾದ ನಂತರ ರಾಹುಲ್ ರಾಯ್ ಸ್ಟಾರ್‌ಡಮ್ ವೇಗವಾಗಿ ಮೇಲೇರಿತು. ಬಾಲಿವುಡ್‌ನ ಹಲವು ನಟಿಯರ ಜೊತೆ ಇವರ ಹೆಸರು ಕೇಳಿ ಬರಲಾರಂಭಿಸಿತು.
undefined
ಮೊಟ್ಟ ಮೊದಲಿಗೆ ರಾಹುಲ್ ರಾಯ್ ಆಫೇರ್ ಆಲಿಯಾ ಭಟ್‌ರ ಅಕ್ಕ ಪೂಜಾ ಭಟ್ ಜೊತೆ ಆಯಿತು. ಇಬ್ಬರು ಜೊತೆಯಾಗಿ ಜಾನಮ್, ಜೂನೂನ್ ಮತ್ತು 'ಫಿರ್ ತೇರಿ ಖಹಾನಿ ಯಾದ್ ಆಯಿ'ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಶೂಟಿಂಗ್ ಸಮಯದಲ್ಲಿ ರಾಹುಲ್ ಹಾಗೂ ಪೂಜಾ ಕ್ಲೋಸ್ ಆದರು.
undefined
ಈ ಕಪಲ್ ಒಟ್ಟಿಗೆ ಹಲವು ಸಂದರ್ಭಗಳಲ್ಲಿ ಮತ್ತು ಡಿನ್ನರ್ ಡೇಟ್‌ಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಆದರೆ ನಂತರ ತಮ್ಮ ಕೆರಿಯರ್ ಹಾಗೂ ಬ್ಯುಸಿ ಶೂಟಿಂಗ್ ಕಾರಣದಿಂದ ಇಬ್ಬರ ಭೇಟಿ ಕಡಿಮೆಯಾಯಿತು ಮತ್ತು ನಿಧಾನವಾಗಿ ಬೇರೆಯಾದರು.
undefined
ಪೂಜಾರ ನಂತರ ರಾಹುಲ್ ಜೀವನದಲ್ಲಿ ಮೊನಿಷಾ ಕೊಯಿರಾಲ ಬಂದರು. ಮಜಾದರ್ ಮತ್ತು ಅಚಾನಕ್ ಸಿನಿಮಾಗಳಲ್ಲಿ ರಾಹುಲ್ ರಾಯ್ ಜೊತೆ ಕೆಲಸ ಮಾಡಿದ ಮೊನಿಷಾ ರಾಹುಲ್ ರಾಯ್‌ಗೆ ಮನಸೋತರು.
undefined
ರಾಹುಲ್ ರಾಯ್ ಕೆರಿಯರ್ ಗ್ರಾಫ್ ಮೇಲೆ ಏರುತ್ತಿತ್ತು.ಬಾಲಿವುಡ್‌ನಲ್ಲಿ ನೆಲೆವೂರಲು ನಟ ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ ಮೊನಿಷಾರಿಗಿಂತ ರಾಹುಲ್‌ಗೆ ಕೆರಿಯರ್ ಮುಖ್ಯವಾಗಿತ್ತು. ಅವರ ಹೆಚ್ಚಿನ ಸಮಯ ಸ್ಕ್ರೀನಿಂಗ್,ಅಡಿಷನ್, ಎಡಿಟಿಂಗ್‌ನಲ್ಲಿ ಕಳೆದು ಹೋಗುತ್ತಿದ್ದರಿಂದ ಕೊಯಿರಾಲಗೆ ಸಮಯ ನೀಡಲಾಗುತ್ತಿರಲಿಲ್ಲ. ಅಂತಿಮವಾಗಿ ಇಬ್ಬರ ಸಂಬಂಧ ಮುರಿಯಿತು.
undefined
ನಂತರ ಸುಮನ್ ರಂಗನಾಥ್ ಆಶಿಕಿ ನಟನ ಲೈಫ್‌ಗೆ ಎಂಟ್ರಿ ಕೊಟ್ಟರು. ಕಾಮನ್ ಫ್ರೆಂಡ್ ಮೂಲಕ ಆದ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿತು. ಸುಮನ್‌ಮುಂಬೈನಲ್ಲಿ ರಾಹುಲ್ ಫ್ಲಾಟ್‌ನಲ್ಲಿ ವಾಸಿಸಲುಪ್ರಾರಂಭಿಸಿದರು. ವಿಕ್ರಮ್ ಭಟ್‌ರ ಫರೇಬ್ ಸಿನಿಮಾದಲ್ಲಿ ಸುಮನ್‌ಗೆ ರಾಹುಲ್ ಚಾನ್ಸ್ ಕೊಡಿಸಿದ್ದರು ಎಂದು ಹೇಳಲಾಗುತ್ತದೆ. ನಂತರ ಸುಮನ್ ಸೌತ್ ಸಿನಿಮಾದಲ್ಲಿ ಬ್ಯುಸಿಯಾದರು.
undefined
ಇದರ ನಡುವೆ ಈ ಕಪಲ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದವು. ಮೂರು ವರ್ಷಗಳ ಅವರ ಸಂಬಂಧ ಅಚಾನಕ್ ಆಗಿ ಬ್ರೇಕ್ ಆಯಿತು.
undefined
ಮೂರು ನಟಿಯರ ಜೊತೆ ರಿಕೆಷನ್‌ಶಿಪ್ ನಂತರ ಅಂತಿಮವಾಗಿ ರಾಜಲಕ್ಷ್ಮಿ ಖಾನ್ವಿಲ್ಕರ್ ಎಂಬ ಮಾಡೆಲ್ ಅನ್ನು ರಾಹುಲ್ ಒಂದು ಪಾರ್ಟಿಯಲ್ಲಿ ಭೇಟಿಯಾದರು.
undefined
ಇದಕ್ಕೂ ಮೊದಲು ರಾಜಲಕ್ಷ್ಮಿ ನಟ ಸಮೀರ್ ಸೋನಿಯಿಂದ ಡಿವೋರ್ಸ್ ಪಡೆದಿದ್ದರು. ಕೆಲವು ವರ್ಷಗಳ ಕಾಲ ಡೇಟ್ ಮಾಡಿದ ರಾಜಲಕ್ಷ್ಮಿ 1998ರಲ್ಲಿ ರಾಹುಲ್ ಮಮದುವೆಯಾದರು.
undefined
ಮದುವೆಯ ಕೆಲವು ವರ್ಷಗಳ ನಂತರ ಶುರುವಾದ ಇಬ್ಬರ ನಡುವಿನ ಮನಸ್ತಾಪ 14 ವರ್ಷಗಳ ವೈವಾಹಿಕ ಜೀವನವನ್ನು 2012ರಲ್ಲಿ ಡಿವೋರ್ಸ್‌ನಲ್ಲಿ ಕೊನೆಯಾಯಿತು.
undefined
'ಇಬ್ಬರು ಪರಸ್ಟರ ಒಪ್ಪಿಗೆ ಮೇಲೆ ಡಿವೋರ್ಸ್‌ಗೆಅರ್ಜಿ ಸಲ್ಲಿಸಿದ್ದೇವೆ. ರಾಜಲಕ್ಷ್ಮಿ ನನ್ನ ಜೀವನದ ಅವಿಭಾಜ್ಯ ಅಂಗ.ಅವಳು ಈ ಭಾವನೆಯನ್ನು ಹಂಚಿ ಕೊಂಡಿದ್ದಾಳೆ. ಅವಳ ಫ್ಯಾಮಿಲಿ, ಈಗಲೂ ನನ್ನ ಫ್ಯಾಮಿಲಿ ಮತ್ತು ಯಾವಾಗಲೂ ನಾನು ಅವಳ ಜೊತೆ ನಿಲ್ಲುತ್ತೇನೆ,' ಎಂದು ರಾಹುಲ್ ಹೇಳಿದ್ದರು.
undefined
ಇದರ ನಂತರ 2016ರಲ್ಲಿ ರಾಹುಲ್ ರಾಯ್ ಭೇಟಿ ಮಾಡೆಲ್ ಸಾಧನರೊಂದಿಗೆ ಆಯಿತು. ಇಬ್ಬರು ಡೇಟಿಂಗ್ ಶುರು ಮಾಡಿದರು. ಅವಳು ಬಹಳ ವರ್ಷಗಳಿಂದ ನನಗೆ ಪರಿಚಯ ಎಂದು ನನಗೆ ಅನಿಸುತ್ತಿದೆ.ಅವಳು ತುಂಬಾ ಒಳ್ಳೆಯವಳು' ಎಂದು ಸಾಧನರ ಬಗ್ಗೆ ರಾಹುಲ್ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು.
undefined