17.5 ಕೋಟಿ ರೂ ಮನೆ ಬಾಡಿಗೆ ಕೊಟ್ಟ ನಟ ಕಾರ್ತಿಕ್ ಆರ್ಯನ್, ತಿಂಗಳ ಬಾಡಿಗೆ ಇಷ್ಟೊಂದಾ?

First Published | Aug 30, 2024, 9:16 AM IST

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮ್ಮ 17.5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಬಾಡಿಗೆ ನೀಡಿದ್ದಾರೆ. ಇದೀಗ ಕಾರ್ತಿಕ್ ಆರ್ಯನ್ ಮನೆಯಲ್ಲೇ ಕುಳಿತು ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟ ಕಾರ್ತಿಕ್ ಆರ್ಯನ್ ಇದೀಗ ಭೂಲ್ ಭೂಲಯ್ಯ3 ಚಿತ್ರದ ಬಿಡುಗಡೆ ತಯಾರಿಯಲ್ಲಿದ್ದಾರೆ. ದೀಪಾವಳಿ ಹಬ್ಬಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಇದರ ನಡುವೆ ಕಾರ್ತಿಕ್ ಆರ್ಯನ್ ಆದಾಯದ ಮೂಲ ಹೆಚ್ಚಾಗಿದೆ. 
 

ಮುಂಬೈನ ಜುಹುವಿನಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಕಾರ್ತಿಕ್ ಆರ್ಯನ್ ಇದೀಗ ಬಾಡಿಗೆ ನೀಡಿದ್ದಾರೆ. ಈ ಮನಗೆ ಪ್ರತಿ ತಿಂಗಳಿಗೆ 4.5 ಲಕ್ಷ ರೂಪಾಯಿಗೆ ಬಾಡಿಗೆ ನೀಡಲಾಗಿದೆ. 
 

Tap to resize

ಸಿದ್ಧಿವಿನಾಯಕ ಪ್ರೆಸಿಡೆನ್ಸಿ ಕೋ ಆಪರೇಟೀವ್ ಸೊಸೈಟಿ ಬಳಿ ಇರುವ ಈ ಫ್ಲಾಟ್ ಮೂಲಕ ಕಾರ್ತಿಕ್ ಆರ್ಯನ್ ಲಕ್ಷ ಲಕ್ಷ ರೂಪಾಯಿ ಆದಾಯ ಎಣಿಸುತ್ತಿದ್ದಾರೆ. ಬಾಡಿಗೆ ನೀಡುವ ಪ್ರಕ್ರಿಯೆಯಲ್ಲಿ ಈ ಮನೆಗೆ 42,500 ರೂಪಾಯಿ ಸ್ಟಾಂಪ್ ಡ್ಯೂಟಿ ಚಾರ್ಜ್ ಮಾಡಲಾಗಿದೆ.
 

1,912 ಚದರ ಅಡಿ ವಿಸ್ತೀರ್ಣದ ಮನೆಯನ್ನು ಕಾರ್ತಿಕ್ ಆರ್ಯನ್ ಜೂನ್ 30, 2024ರಲ್ಲಿ ಖರೀದಿಸಿದ್ದರು. ಕಾರ್ತಿಕ್ ಆರ್ಯನ್ ಹಾಗೂ ತಾಯಿ ಮಲಾ ತಿವಾರಿ ಜಂಟಿಯಾಗಿ ಈ ಮನೆಯ ಮಾಲೀಕತ್ವ ಹೊಂದಿದ್ದಾರೆ.
 

17.5 ಕೋಟಿ ರೂಪಾಯಿಗೆ ಈ ಮನೆ ಖರೀದಿಸಿದ್ದ ಕಾರ್ತಿಕ್ ಆರ್ಯನ್ ಸ್ಟಾಂಪ್ ಡ್ಯೂಟಿ ಸುಂಕವಾಗಿ 1.05 ಕೋಟಿ ರೂಪಾಯಿ ನೀಡಿದ್ದರು. ಇನ್ನು ರಿಜಿಸ್ಟ್ರೇಶನ್ ಶುಲ್ಕವಾಗಿ 30,000 ರೂಪಾಯಿ ನೀಡಿದ್ದರು.

2023ರಲ್ಲಿ ಇದೇ ಅಪಾರ್ಟ್‌ಮೆಂಟ್ ಕಟ್ಟಡದ 8ನೇ ಮಹಡಿಯಲ್ಲಿ ಕಾರ್ತಿಕ್ ಆರ್ಯನ್ ಪೋಷಕರು 16.5 ಕೋಟಿ ರೂಪಾಯಿ ನೀಡಿ ಮನೆ ಖರೀದಿಸಿದ್ದಾರೆ.
 

ಪ್ಯಾರ್ ಕಾ ಪಂಚಮಾ, ಸೋನು ಕೆ ಟಿಟು ಕಿ ಸ್ವೀಟಿ, ಭೂಲ್ ಭೂಲಯ್ಯ 2 ಚಿತ್ರಗಳು ಕಾರ್ತಿಕ್ ಆರ್ಯನ್‌ಗೆ ಭಾರಿ ಜನಪ್ರಿಯತೆ ತಂದುಕೊಟ್ಟಿದೆ. ಜೊತೆಗೆ ಸೂಪರ್ ಹಿಟ್ ಆಗಿ ಉತ್ತಮ ಗಳಿಕೆ ಮಾಡಿತ್ತು.

ಚಂದು ಚಾಂಪಿಯನ್ ಬಯೋಗ್ರಫಿ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕಾರ್ತಿಕ್ ನಟನೆ, ಚಿತ್ರಕ್ಕಾಗಿ ಮಾಡಿದ ಮಾರ್ಪಾಡುಗಳು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು.

Latest Videos

click me!