ಅಂದ್ರೆ ಪ್ರಭಾಸ್ ಈ ವರ್ಷ 3 ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸಬೇಕು. ಪ್ರಭಾಸ್‌ಗೆ ಇದು ಅಂದುಕೊಂಡಿರದ ಶಾಕ್. ಮೂರು ಪ್ಯಾನ್ ಇಂಡಿಯಾ ಸಿನಿಮಾಗಳನ್ನ ಮ್ಯಾನೇಜ್ ಮಾಡೋದು ಸುಲಭ ಅಲ್ಲ. ಇತ್ತೀಚೆಗೆ ಪ್ರಭಾಸ್ ಈ ವರ್ಷನೇ ಮದುವೆ ಆಗ್ತಾರೆ, ಗಣಪವರದ ಹುಡುಗಿ ಜೊತೆ ಫಿಕ್ಸ್ ಆಗಿದೆ ಅಂತ ಸುದ್ದಿ ಬಂದಿತ್ತು. 3 ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ ಇದ್ರೆ ಮದುವೆಗೆ ಯಾವಾಗ ಟೈಮ್ ಸಿಗುತ್ತೆ ಅಂತ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾ ಇದ್ದಾರೆ. ಒಟ್ಟಿನಲ್ಲಿ ಅಶ್ವಿನಿ ದತ್ ಪ್ರಭಾಸ್‌ಗೆ ಒಂದು ನಿಮಿಷ ಫ್ರೀ ಟೈಮ್ ಕೊಡದೆ ಟೆನ್ಷನ್ ಕೊಡ್ತಾ ಇದ್ದಾರೆ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಾ ಇದ್ದಾರೆ.