ಏಷಿಯಾದ ದುಬಾರಿ ನಟರಲ್ಲಿ ನಂ 1 ಸ್ಥಾನ ಪಡೆದ ಬೆಂಗಳೂರಿನ ಕನ್ನಡಿಗ! ಯಾರದು?

Published : May 09, 2025, 08:29 PM ISTUpdated : May 12, 2025, 12:36 PM IST

ಭಾರತೀಯ ಚಿತ್ರರಂಗದಲ್ಲಿ ಕೆಲವರು ಪ್ರಕಾಶಮಾನವಾಗಿ ಹೊಳೆಯುತ್ತಾರೆ, ಇನ್ನು ಕೆಲವರು ಯಶಸ್ಸು ಸಾಧಿಸಲಾಗದೆ ಮರೆಯಾಗುತ್ತಾರೆ. ಈಗ ಬೆಂಗಳೂರಿನ ಮೂಲದ ವ್ಯಕ್ತಿ ಏಷಿಯಾದ ದುಬಾರಿ ನಟ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. 

PREV
15
ಏಷಿಯಾದ ದುಬಾರಿ ನಟರಲ್ಲಿ ನಂ 1 ಸ್ಥಾನ ಪಡೆದ ಬೆಂಗಳೂರಿನ ಕನ್ನಡಿಗ! ಯಾರದು?

ಚಿತ್ರರಂಗದಲ್ಲಿ ಹೆಸರುವಾಸಿಯಾದವರಲ್ಲಿ ಕೆಲವರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಇಂದು 72 ವರ್ಷ ವಯಸ್ಸಿನ ಒಬ್ಬ ನಟ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.
 

25

ಏಷ್ಯಾದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರೇ ಮೇಲುಗೈ ಸಾಧಿಸಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಅನೇಕ ನಟರು ಒಂದು ಸಿನಿಮಾಕ್ಕೆ ನೂರು ಕೋಟಿ ರೂಪಾಯಿಗೂ ಅಧಿಕ ಹಣ ಪಡೆಯುತ್ತಾರೆ.
 

35

ತಲೈವಾ ಎಂದು ಕರೆಯಲ್ಪಡುವ ರಜನಿಕಾಂತ್ ಅವರು ನಂ 1 ನಟ ಆಗಿದ್ದಾರೆ. ನಟನೆ, ಸರಳತೆ ಮೂಲಕ ರಜನಿಯನ್ನು ಸಾಕಷ್ಟು ಜನರು ಇಷ್ಟಪಡ್ತಿದ್ದಾರೆ. 1950 ಡಿಸೆಂಬರ್ 12ರಂದು ರಜನಿ ಜನಿಸಿದರು. ಇವರಿಗೆ ಮೊದಲು ಶಿವಾಜಿ ರಾವ್ ಗಾಯಕ್ವಾಡ್ ಎಂಬ ಹೆಸರಿತ್ತು. ಬಸ್ ಕಂಡಕ್ಟರ್ ಜೊತೆಗೆ ಸಣ್ಣ ಸಣ್ಣ ಕೆಲಸ ಮಾಡಿದ್ದ ರಜನಿ ಇಂದು ಭಾರತೀಯ ಚಿತ್ರರಂಗದ ದಂತಕಥೆ ಆಗಿದ್ದಾರೆ. 
 

45

1975 ರಲ್ಲಿ ರಜನಿಕಾಂತ್ ಅವರು ತಮಿಳು ಸಿನಿಮಾ ʼಅಪೂರ್ವ ರಾಗಂಗಲ್ʼ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟರು. ಆಮೇಲೆ ʼಬಾಷಾʼ, ʼರೋಬೋಟ್ʼ, ʼಶಿವಾಜಿ: ದಿ ಬಾಸ್ʼ, ʼರೋಬೋಟ್ 2.0ʼ, ʼಜೈಲರ್ʼ ಸೇರಿದಂತೆ ಮುಂತಾದ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್, ಪ್ರಭಾಸ್, ಕಮಲ್ ಹಾಸನ್, ರಜನಿಕಾಂತ್, ಜಾಕಿ ಚಾನ್ ಅವರನ್ನು ಹಿಂದಿಕ್ಕಿ ಭಾರತದ ಅತಿ ಹೆಚ್ಚು ಹಣ ಪಡೆಯುವ ನಟರಾಗಿದ್ದಾರೆ.
 

55

ಏಷ್ಯಾದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆ ರಜನಿಕಾಂತ್‌ಗೆ ಸೇರಿದೆ. ರಜನಿ ಅವರು 171ನೇ ಸಿನಿಮಾ ʼಕೂಲಿʼ ಯಲ್ಲಿ ಹೀರೋ ಆಗಿದ್ದಾರೆ. ಇದಕ್ಕಾಗಿ ಅವರು 280 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ. ರಜನಿಕಾಂತ್ ಅವರ ʼವೆಟ್ಟೈಯನ್ʼ ಸಿನಿಮಾಕ್ಕೆ 125 ಕೋಟಿ ರೂಪಾಯಿಗಳನ್ನು, ʼಜೈಲರ್ʼ ಸಿನಿಮಾಕ್ಕೆ 110 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಫೋರ್ಬ್ಸ್ ಪಟ್ಟಿ ಪ್ರಕಾರ ಸುಮಾರು ರಜನಿ ಅವರು, 430 ಕೋಟಿ ರೂಪಾಯಿಗಳ ಅಂದಾಜು ಆಸ್ತಿ ಹೊಂದಿದ್ದಾರೆ. 
 

Read more Photos on
click me!

Recommended Stories