ಮೊದಲು ಅನುಷ್ಕಾ ಶೆಟ್ಟಿ ಡಾಕ್ಟರ್ ಆಗಬೇಕು ಅಂತಿದ್ರಂತೆ. ಆದ್ರೆ ಆಕಸ್ಮಿಕವಾಗಿ ಜಿಯಾಗ್ರಫಿ ಸಬ್ಜೆಕ್ಟ್ ತಗೊಂಡು ಜಿಯಾಗ್ರಫಿ ಟೀಚರ್ ಆಗಿ ಕೆಲಸ ಮಾಡಿದ್ರಂತೆ. ಕೆಲವು ದಿನ ಟೀಚಿಂಗ್ ಕೂಡ ಮಾಡಿದ್ರಂತೆ. ಡಿಗ್ರಿ ಮಾಡುವಾಗ ಟೀಚಿಂಗ್ ಮಾಡ್ತಿದ್ರಂತೆ. ಆಗ ಯೋಗ ಗುರು ಭರತ್ ಠಾಕೂರ್ ಭೇಟಿಯಾದ್ರಂತೆ. ಅವರ ಪರಿಚಯ ಯೋಗದ ಕಡೆಗೆ ಕರೆದುಕೊಂಡು ಹೋಯ್ತು ಅಂತ ಹೇಳಿದ್ದಾರೆ.
ಯೋಗ ಕ್ಲಾಸ್ ಗೆ ಹೋಗುವಾಗ ಇದೇ ನನಗೆ ಬೇಕಾಗಿರೋದು ಅಂತ ಅನಿಸ್ತು, ಯೋಗ ಮಾಡುವಾಗ ಖುಷಿ ಆಗ್ತಿತ್ತು, ಇದೇ ನನ್ನ ಲೈಫ್ ಅಂತ ಫಿಕ್ಸ್ ಆದೆ. ಆದ್ರೆ ಮನೆಯಲ್ಲಿ ಹೇಳಿದಾಗ ಪೇರೆಂಟ್ಸ್ ಶಾಕ್ ಆದ್ರಂತೆ. ಅಪ್ಪ ಯೋಗ ಏಕೆ ಅಂತ ಶಾಕ್ ಆದ್ರಂತೆ.