ತಂದೆ ಜತೆ ಮಗಳು ಚಿಟ್ ಚಾಟ್ ನಡೆಸಿದ್ದಾಳೆ.
ಈ ವೇಳೆ ಆಲಿಯಾ ತಂದೆಯನ್ನು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾಳೆ.
ನಾನು ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಬೋಲ್ಡ್ ಆಗಿ ಕೇಳಿದ್ದಾಳೆ.
ಇದಕ್ಕೆ ಅನುರಾಗ್ ಕಶ್ಯಪ್ ಇದೆಂತಹ ಪ್ರಶ್ನೆ ಅಂತ ಕೇಳುತ್ತೀಯಾ? 80ರ ದಶಕದ ಪ್ರಶ್ನೆ ಇದು ಎಂದಿದ್ದಾರೆ.
ಅದು ಅವರ ಆಯ್ಕೆಗೆ ಬಿಟ್ಟಿದ್ದು, ಇಂಥ ಕೆಲಸಗಳಿಂದ ಸಮಸ್ಯೆಗೆ ಸಿಲುಕಿಕೊಳ್ಳಬಾರದು ಎಂದಿದ್ದಾರೆ.
ಈಗ ಸಮಾಜ ಸಾಕಷ್ಟು ಬದಲಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಈ ಪ್ರಶ್ನೆ ದೊಡ್ಡ ಮಹತ್ವವಿಲ್ಲ ಎಂದು ತಂದೆ ಉತ್ತರಿಸಿದ್ದಾರೆ.
ಆಲಿಯಾ ಕಶ್ಯಪ್ ಗೆಳೆಯ ಶೆನ್ ಗ್ರಗೊಯರ್ ಜೊತೆ ಮುಂಬೈಗೆ ವಾಪಸಾಗಿದ್ದಾಳೆ.
ಪಿರಿಯಡ್ಸ್, ಒನ್ ನೈಟ್ ಸ್ಟಾಂಡ್, ಪೋರ್ನ್ ನೋಡುವುದರ ಬಗ್ಗೆ ಉತ್ತಮ ಪೋಷಕರು ಅಂದರೆ ಹೇಗಿರಬೇಕು? ಎಂಬ ಪ್ರಶ್ನೆಗಳನ್ನು ಕೇಳಿದ್ದಾಳೆ.
ಅನುರಾಗ್ ಕಶ್ಯಪ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಆಧುನಿಕ ಜಗತ್ತಿನ ಬದಲಾವಣೆಗಳ ಬಗ್ಗೆಯೂ ಮಾತನಾಡಿದ್ದಾರೆ.
ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಹಿಂದೆ ಮೀಟೂ ಆರೋಪಗಳು ಕೇಳಿ ಬಂದಿದ್ದವು.