ನೆಟ್‌ಫ್ಲಿಕ್ಸ್‌ನ ಸ್ಟೆಪ್‌ಸನ್ಸ್‌ ವೆಬ್‌ ಸೀರೀಸ್‌ನಲ್ಲಿ ಅನಂತ್ ನಾಗ್‌ ನಟನೆ: ಮಹತ್ತರ ಪಾತ್ರವೇ?

Published : Jul 18, 2025, 11:47 AM IST

ಯಾವುದೇ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದ ಅನಂತ್ ನಾಗ್‌ ಅವರು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಹುಭಾಷೆಯಲ್ಲಿ ಪ್ರಸಾರವಾಗಲಿರುವ ‘ಸ್ಟೆಪ್‌ಸನ್ಸ್‌’ ವೆಬ್‌ಸೀರೀಸ್‌ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

PREV
18

ಬಹಳ ಸಮಯದಿಂದ ಯಾವುದೇ ಸಿನಿಮಾದಲ್ಲಿ ನಟಿಸಲು ಒಪ್ಪದೇ ಇದ್ದ ಅನಂತ್ ನಾಗ್‌ ಅವರು ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಹುಭಾಷೆಯಲ್ಲಿ ಪ್ರಸಾರವಾಗಲಿರುವ ‘ಸ್ಟೆಪ್‌ಸನ್ಸ್‌’ ವೆಬ್‌ಸೀರೀಸ್‌ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

28

ಇಂಗ್ಲಿಷ್‌ ಭಾಷೆಯಲ್ಲಿ ತಯಾರಾಗುತ್ತಿರುವ ಈ ಸರಣಿ ಹಲವು ಭಾಷೆಗಳಲ್ಲಿ ಪ್ರಸಾರವಾಗಲಿದೆ. ಈ ಸೀರೀಸನ್ನು ‘ಸ್ಕ್ಯಾಮ್‌ 1992’ ಖ್ಯಾತಿಯ ಸೂಪರ್‌ಹಿಟ್‌ ನಿರ್ದೇಶಕ ಹನ್ಸಲ್‌ ಮೆಹ್ತಾ ನಿರ್ದೇಶನ ಮಾಡುತ್ತಿದ್ದಾರೆ.

38

ವಿಶೇಷವೆಂದರೆ ಈ ವೆಬ್‌ ಸೀರೀಸಿನ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಿಲ್‌ ಕಪೂರ್‌ ನಟಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಈ ವೆಬ್‌ಸೀರೀಸ್‌ಗೆ ಶ್ರೀಲಂಕಾದಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

48

ಅನಂತ್ ನಾಗ್‌ ಅವರು ಹಲವು ತಿಂಗಳುಗಳಿಂದ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಹಲವಾರು ಭಾಷೆಗಳಿಂದ ಆಫರ್‌ ಬಂದಿದ್ದರೂ ಸ್ಕ್ರಿಪ್ಟ್‌ ಒಪ್ಪಿಗೆಯಾಗದಿದ್ದುದರಿಂದ ನಟಿಸುವ ಮನಸ್ಸು ಮಾಡಿರಲಿಲ್ಲ. ಆದರೆ ಇದೀಗ ಅವರು ‘ಸ್ಟೆಪ್‌ಸನ್ಸ್‌’ ವೆಬ್‌ ಸರಣಿಯಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

58

ಈ ವೆಬ್‌ ಸರಣಿಯ ಸ್ಕ್ರಿಪ್ಟ್‌ ಚೆನ್ನಾಗಿರುವುದರ ಜೊತೆಗೆ ತಂಡವು ಅನಂತ ನಾಗ್‌ ಅವರಿಗೆ ಬಹಳ ಪ್ರಮುಖ ಪಾತ್ರವನ್ನೇ ನೀಡಿದೆ ಎನ್ನಲಾಗಿದೆ. ಒಂದು ಬಹಳ ದೊಡ್ಡ ಕಾರ್ಪೋರೇಟ್‌ ಕುಟುಂಬದಲ್ಲಿನ ಗರುಡಗಂಭದಂತಿರುವ ವ್ಯಕ್ತಿಯ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ.

68

ಅದರಲ್ಲೂ ವಿಶೇಷವಾಗಿ ಹನ್ಸಲ್‌ ಮೆಹ್ತಾ ಅವರ ತಂಡವು ಬಹಳ ಸಮಯ ಕಾದು, ಅನಂತ್‌ ನಾಗ್‌ ಅವರೇ ಈ ಪಾತ್ರವನ್ನು ನಿರ್ವಹಿಸಬೇಕು ಎಂಬ ಕಾರಣಕ್ಕೆ ಚಿತ್ರೀಕರಣವನ್ನೂ ಮುಂದೂಡಿತ್ತು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

78

ಹನ್ಸಲ್‌ ಮೆಹ್ತಾ ಅವರು ಬಹಳ ಜನಪ್ರಿಯ ನಿರ್ದೇಶಕರಾಗಿದ್ದು, ಅವರ ಸಿನಿಮಾ, ವೆಬ್‌ ಸೀರೀಸ್‌ಗಳು ವ್ಯಾಪಕ ಜನಪ್ರಿಯತೆ ಗಳಿಸಿವೆ. ಇದೀಗ ಅವರ ವೆಬ್‌ ಸರಣಿಯಲ್ಲಿ ಅನಂತ್‌ ನಾಗ್‌ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ನಿರೀಕ್ಷೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

88

ಈ ಹೊಸ ವೆಬ್‌ ಸೀರೀಸ್‌ ಹನ್ಸಲ್‌ ಮೆಹ್ತಾ ಅವರ ಈ ಹಿಂದಿನ ವೆಬ್‌ ಸೀರೀಸ್‌ಗಳಿಗಿಂತ ಅದ್ದೂರಿ ಬಜೆಟ್‌ನಲ್ಲಿ ಮೂಡಿಬರಲಿದ್ದು, ವಿದೇಶದ ಹಲವು ಕಡೆಗಳಲ್ಲಿ ಮತ್ತು ಮುಂಬೈನಲ್ಲಿ ಚಿತ್ರೀಕರಣ ನಡೆಯಲಿದೆ.

Read more Photos on
click me!

Recommended Stories