ಪದ್ಮಭೂಷಣ ಅನಂತ್ ನಾಗ್‌ಗೆ ಶುಭ ಕೋರಿದ ಅಲ್ಲು ಅರ್ಜುನ್; ಆದ್ರೆ ಬಾಲಕೃಷ್ಣಗೆ ಹೇಳಿದ್ದೇನು?

Published : Jan 27, 2025, 03:13 PM IST

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ ನಾಗ್ ಹಾಗೂ ತೆಲುಗಿನ ನಟ ನಂದಮೂರಿ ಬಾಲಕೃಷ್ಣ ಸೇರಿ ಅನೇಗ ಗಣ್ಯರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಅನೇಕರು ತಮ್ಮ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್  ಸ್ವತಃ ಕನ್ನಡ ಚಿತ್ರರಂಗದ ನಟ ಅನಂತ ನಾಗ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

PREV
15
ಪದ್ಮಭೂಷಣ ಅನಂತ್ ನಾಗ್‌ಗೆ ಶುಭ ಕೋರಿದ ಅಲ್ಲು ಅರ್ಜುನ್; ಆದ್ರೆ ಬಾಲಕೃಷ್ಣಗೆ ಹೇಳಿದ್ದೇನು?

ಕನ್ನಡದ ನಟ ಅನಂತ ನಾಗ್ ಹಾಗೂ ತೆಲುಗಿನ ನಟ ನಂದಮೂರಿ ಬಾಲಕೃಷ್ಣರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಇವರಿಬ್ಬರೂ ತಮ್ಮ ತಮ್ಮ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಆದರೆ, ಇದಕ್ಕೆ ಸ್ವತಃ ಅನಂತ ನಾಗ್ ಅವರಿಗೆ ಅಲ್ಲು ಅರ್ಜುನ್ ಶುಭಾಶಯ ತಿಳಿಸಿದ್ದಾರೆ.

25

ನಂದಮೂರಿ ಬಾಲಕೃಷ್ಣರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ತೆಲುಗು ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿ ಇದಾಗಿದೆ.

35

ಬಾಲಯ್ಯಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ, ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮದೇ ಶೈಲಿಯಲ್ಲಿ ಬಾಲಯ್ಯಗೆ ಶುಭಾಶಯ ಕೋರಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಪಡೆದ ನಂದಮೂರಿ ಬಾಲಕೃಷ್ಣರಿಗೆ ಹೃತ್ಪೂರ್ವಕ ಅಭಿನಂದನೆಗಳು. ತೆಲುಗು ಚಿತ್ರರಂಗಕ್ಕೆ ನೀಡಿರುವ ಕೊಡುಗೆಗೆ ನೀವು ಈ ಪ್ರಶಸ್ತಿಗೆ ಸಂಪೂರ್ಣ ಅರ್ಹರು ಎಂದು ಅಲ್ಲು ಅರ್ಜುನ್ ಬಾಲಯ್ಯ ಅವರನ್ನು ಶ್ಲಾಘಿಸಿದ್ದಾರೆ.

45

ಅದೇ ರೀತಿ ಪದ್ಮಭೂಷಣ ಪಡೆದ ಅಜಿತ್ ಕುಮಾರ್ ಅವರಿಗೂ ಅಲ್ಲು ಅರ್ಜುನ್ ಶುಭಾಶಯ ಕೋರಿದ್ದಾರೆ. ಅನಂತ್ ನಾಗ್, ಶೋಭನಾ, ಶೇಖರ್ ಕಪೂರ್ ಕೂಡ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅವರಿಗೂ ಅಲ್ಲು ಅರ್ಜುನ್ ಶುಭಾಶಯ ತಿಳಿಸಿದ್ದಾರೆ. ಇಲ್ಲಿ ಭಾಷಾ ತಾರತಮ್ಯವನ್ನು ಮಾಡದೇ ಕನ್ನಡ ಚಿತ್ರರಂಗದ ಅನಂತ ನಾಗ್ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ.

 

55

ಅಲ್ಲು ಅರ್ಜುನ್ ಮತ್ತು ಬಾಲಕೃಷ್ಣ ನಡುವೆ ಉತ್ತಮ ಒಡನಾಟವಿದೆ. ಬಾಲಯ್ಯನವರ 'ಅಖಂಡ' ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಅತಿಥಿಯಾಗಿ ಆಗಮಿಸಿದ್ದರು. ಅಲ್ಲು ಅರ್ಜುನ್ ಅವರ 'ಆಹಾ' ಒಟಿಟಿಯಲ್ಲಿ ಬಾಲಯ್ಯ 'ಅನ್‌ಸ್ಟಾಪಬಲ್' ಶೋಗೆ ನಿಂಬಾನ್ಯರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories