ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ, ಸಂಧ್ಯಾ ಥಿಯೇಟರ್ ಘಟನೆ ದೇಶಾದ್ಯಂತ ಎಂಥ ಸಂಚಲನ ಮೂಡಿಸಿದೆ ಎಂಬುದು ತಿಳಿದೇ ಇದೆ. ರೇವತಿ ಎಂಬ ಮಹಿಳೆ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡರು. ಆಕೆಯ ಮಗ ಚಿಂತಾಜನಕ ಸ್ಥಿತಿಯಲ್ಲಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲು ಅರ್ಜುನ್‌ರನ್ನು ಸಂಧ್ಯಾ ಥಿಯೇಟರ್ ಘಟನೆಯಲ್ಲಿ ಪೊಲೀಸರು 11ನೇ ಆರೋಪಿಯನ್ನಾಗಿ ಮಾಡಿದ್ದಾರೆ. ಬಳಿಕ ಅಲ್ಲು ಅರ್ಜುನ್ ಬಂಧನವಾಗುವುದರೊಂದಿಗೆ ವಿಷಯ ಇನ್ನಷ್ಟು ಗಂಭೀರವಾಯಿತು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಬಂಡಾಯಗಾರ ಅಲ್ಲು ಅರವಿಂದ್: ಅಲ್ಲು ಅರ್ಜುನ್ ಈಗ 42 ವರ್ಷದವರು. ಅಲ್ಲು ಅರವಿಂದ್ ಅವರು 40ರ ಹರೆಯದಲ್ಲಿದ್ದಾಗ ಥಿಯೇಟರ್ ಬಳಿ ನಡೆದ ಗಲಾಟೆಯೊಂದರಲ್ಲಿ ಬಂಧಿತರಾಗಿದ್ದರಂತೆ. ಈ ವಿಷಯವನ್ನು ಅಲ್ಲು ಅರವಿಂದ್ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಆ ವಿಷಯಗಳು ಈಗ ವೈರಲ್ ಆಗುತ್ತಿವೆ. ಯೌವನದಲ್ಲಿದ್ದಾಗ ತಾನು ಬಂಡಾಯಗಾರನಾಗಿದ್ದೆ ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಯಾರಾದರೂ ತಪ್ಪು ಮಾಡಿದರೆ ಸಹಿಸುತ್ತಿರಲಿಲ್ಲ ಎಂದಿದ್ದಾರೆ.
ಬಸ್ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ: ಚೆನ್ನೈನಲ್ಲಿ ಕಾಲೇಜಿನಲ್ಲಿದ್ದಾಗ ನಾನು ಮತ್ತು ನನ್ನ ಸ್ನೇಹಿತರು ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ಅದು ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಇದ್ದ ವಿಶೇಷ ಬಸ್. ನಿರ್ವಾಹಕ ಮತ್ತು ನಮ್ಮ ಸ್ನೇಹಿತರ ನಡುವೆ ಗಲಾಟೆಯಾಯಿತು. ತಕ್ಷಣ ನಾವೆಲ್ಲರೂ ಸೇರಿ ಬಸ್ ನಿಲ್ಲಿಸಿ ನಿರ್ವಾಹಕ ಮತ್ತು ಚಾಲಕನನ್ನು ಥಳಿಸಿ ಕೆಳಗಿಳಿಸಿದೆವು. ಬಸ್ ಅನ್ನು ನಾವೇ ಚಲಾಯಿಸಿಕೊಂಡು ವಿದ್ಯಾರ್ಥಿಗಳನ್ನು ಅವರವರ ಪ್ರದೇಶಗಳಲ್ಲಿ ಇಳಿಸಿದೆವು. ಬಳಿಕ ಪೊಲೀಸರು ನಮ್ಮ ಮನೆಗೆ ಬಂದು ಬಂಧಿಸಿದರು.
ಎಂಜಿಆರ್ ಬಳಿಗೆ ಅಲ್ಲು ರಾಮಲಿಂಗಯ್ಯ: ಇದರಿಂದ ಅಲ್ಲು ಅರವಿಂದ್ ಅವರ ತಂದೆ ದಿಗ್ಗಜ ಅಲ್ಲು ರಾಮಲಿಂಗಯ್ಯ ಕ್ಷೇತ್ರಕ್ಕಿಳಿದರಂತೆ. ಆಗಿನ ಮುಖ್ಯಮಂತ್ರಿ ಎಂಜಿಆರ್ ಜೊತೆ ಮಾತನಾಡಿ ಜಾಮೀನು ತಂದರಂತೆ. ಪ್ರಕರಣ ಕೆಲವು ದಿನಗಳು ನಡೆಯಿತು. ಅಲ್ಲು ರಾಮಲಿಂಗಯ್ಯ ಎಂಜಿಆರ್ ಜೊತೆ ಮಾತನಾಡಿದ್ದರಿಂದ ಪೊಲೀಸರು ಅಲ್ಲು ಅರವಿಂದ್‌ಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಕೈಬಿಟ್ಟರಂತೆ. ನಾನು ವಿದ್ಯಾರ್ಥಿಯಾಗಿದ್ದರಿಂದ ಎಚ್ಚರಿಕೆಯೊಂದಿಗೆ ಬಿಟ್ಟರು ಎಂದು ಅಲ್ಲು ಅರವಿಂದ್ ನಗುತ್ತಾ ಹೇಳಿದರು. ಕೆಲವು ದಿನಗಳು ಆ ಸುದ್ದಿ ಪತ್ರಿಕೆಗಳಲ್ಲಿ ಚರ್ಚೆಯ ವಿಷಯವಾಗಿತ್ತು.
ಥಿಯೇಟರ್ ಬಳಿ ಮತ್ತೊಂದು ಘಟನೆ: ಮತ್ತೊಂದು ಘಟನೆ ನನಗೆ 40 ವರ್ಷ ದಾಟಿದ ಬಳಿಕ ನಡೆಯಿತು. ಚೆನ್ನೈನಲ್ಲಿ ದೇವಿ, ಶ್ರೀದೇವಿ ಎಂಬ ಥಿಯೇಟರ್‌ಗಳಿದ್ದವು. ಆ ಥಿಯೇಟರ್‌ಗಳಲ್ಲಿ ಅಲ್ಲು ಅರವಿಂದ್ ಪಾಲುದಾರರಾಗಿದ್ದರು. ಒಬ್ಬ ದೊಡ್ಡ ನಿರ್ಮಾಣ ವ್ಯವಸ್ಥಾಪಕರಿದ್ದರು. ಅವರ ಹೆಸರನ್ನು ಹೇಳುವುದಿಲ್ಲ. ನಮ್ಮ ತಂದೆಯವರ ಕಾಲ್‌ಶೀಟ್, ಚಿರಂಜೀವಿ, ಶ್ರೀದೇವಿ ಹೀಗೆ ಕೆಲವು ತಾರೆಯರ ಕಾಲ್‌ಶೀಟ್‌ಗಳನ್ನು ಅವರು ನಿರ್ವಹಿಸುತ್ತಿದ್ದರು. ಚಿರಂಜೀವಿ ಆಗ ಅವರಿಗೆ ಕಾಲ್‌ಶೀಟ್‌ಗಳನ್ನು ನೀಡಿದ್ದರು. ಅವರು ಬಹಳ ಪ್ರತಿಭಾವಂತರಾಗಿದ್ದರು, ಆದರೆ ಒಂದು ಸಮಸ್ಯೆ ಇತ್ತು.
ಕುಡಿದು ಚಿರಂಜೀವಿ ಬಗ್ಗೆ ಅವಾಚ್ಯ ಶಬ್ದಗಳು: ಅವರಿಗೆ ಕುಡಿಯುವ ಚಟ ಹೆಚ್ಚಿತ್ತು. ಕುಡಿದರೆ ಮನುಷ್ಯನಾಗಿರುತ್ತಿರಲಿಲ್ಲ. ಈಗಾಗಲೇ ಕೆಲವು ಬಾರಿ ಅವರು ಕುಡಿದು ಚಿರಂಜೀವಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ನಾನು ಎಚ್ಚರಿಕೆ ನೀಡಿ ಬಿಟ್ಟಿದ್ದೆ. ಇನ್ನು ಮುಂದೆ ಚಿರಂಜೀವಿ ಕಾಲ್‌ಶೀಟ್‌ಗಳ ವಿಷ್ಯಕ್ಕ ಹೋಗಬೇಡ ಎಂದು ಎಚ್ಚರಿಕೆ ನೀಡಿದ್ದೆ. ಇದೆಲ್ಲ ಚಿರಂಜೀವಿ ಅವರಿಗೆ ತಿಳಿಯದಂತೆ ನಿರ್ವಹಿಸಿದ್ದೆ. ಒಮ್ಮೆ ಅವರ ಬಗ್ಗೆ ಚಿರಂಜೀವಿ ಅವರಿಗೂ ತಿಳಿಯಿತು. ಅವನನ್ನು ಒಮ್ಮೆ ನನ್ನ ಬಳಿಗೆ ಕರೆದುಕೊಂಡು ಬಾ.. ಬುದ್ಧಿ ಹೇಳುತ್ತೇನೆ ಎಂದು ಚಿರಂಜೀವಿ ಹೇಳಿದರು.
ನಾನು ಮತ್ತು ನನ್ನ ಕೆಲವು ಸ್ನೇಹಿತರು ಒಂದು ದಿನ ಶ್ರೀದೇವಿ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದೆವು. ಅಲ್ಲಿಗೆ ಅವರು ಕಂಠಪೂರ್ತಿ ಕುಡಿದು ಬಂದರು. ಚಿರಂಜೀವಿ ಎಲ್ಲಿದ್ದಾರೆ, ಹೊರಗೆ ಬರಲಿ ಎಂದು ಎಣ್ಣೆ ಮತ್ತಿನಲ್ಲಿ ಅವಾಚ್ಯವಾಗಿ ಮಾತನಾಡುತ್ತಿದ್ದರು. ನೀನು ಇಲ್ಲಿಂದ ಹೋಗು. ಗಲಾಟೆ ಮಾಡುವುದು ಒಳ್ಳೆಯದಲ್ಲ ಎಂದು ಕಾರಿನಲ್ಲಿ ಕೂರಿಸಲು ಹೋದಾಗ. ನನ್ನನ್ನು ಕೆಳಗೆ ತಳ್ಳಿದರು. ಚಿರಂಜೀವಿಯವರನ್ನು ನಿಂದಿಸುವುದನ್ನು ನಿಲ್ಲಿಸಲಿಲ್ಲ. ಅವರು ಮಾತನಾಡುತ್ತಿದ್ದ ರೀತಿ ಕೇಳಿ ನನಗೆ ತುಂಬಾ ಕೋಪ ಬಂತು.
ಕಾಲರ್ ಹಿಡಿದು ಥಳಿಸಿದ ಅಲ್ಲು ಅರವಿಂದ್: ತಕ್ಷಣ ನನ್ನ ಗಡಿಯಾರ, ಕನ್ನಡಕವನ್ನು ಪಕ್ಕಕ್ಕಿಟ್ಟು ಕಾಲರ್ ಹಿಡಿದು ಥಳಿಸಿದೆ. ಅಲ್ಲು ಅರವಿಂದ್ ಹೊಡೆದದ್ದರಿಂದ ಅವರಿಗೆ 13 ಹೊಲಿಗೆ ಬಿದ್ದವಂತೆ. ಚಿರಂಜೀವಿ ಕೂಡ ಥಿಯೇಟರ್‌ನಲ್ಲೇ ಇದ್ದರು. ಚಿರಂಜೀವಿ ಆ ಅವಾಚ್ಯ ಶಬ್ದಗಳನ್ನು ಕೇಳಿದ್ದರೆ ಅವರಿಗೆ ಇನ್ನೂ ಕೋಪ ಬರುತ್ತಿತ್ತು. ಒಂದು ವೇಳೆ ಚಿರಂಜೀವಿ ಆ ಗಲಾಟೆಯಲ್ಲಿ ಭಾಗಿಯಾಗಿದ್ದರೆ ಎಷ್ಟು ದೊಡ್ಡ ಸಮಸ್ಯೆಯಾಗುತ್ತಿತ್ತೋ ಊಹಿಸಿಕೊಳ್ಳಿ ಎಂದು ಅಲ್ಲು ಅರವಿಂದ್ ಹೇಳಿದರು. ಚಿರಂಜೀವಿಯವರನ್ನು ಯಾರಾದರೂ ಏನಾದರೂ ಅಂದರೆ ಸುಮ್ಮನಿರುತ್ತಿರಲಿಲ್ಲ ಎಂದು ಅಲ್ಲು ಅರವಿಂದ್ ಹೇಳಿದರು.