ಆರ್ಟ್ ಗ್ಯಾಲರಿಯಲ್ಲ ಈ ಬಂಗಲೆ, ಬದಲಾಗಿ ಬಾಲಿವುಡ್ ಕಪಲ್ ಮನೆ!
First Published | Apr 22, 2020, 6:01 PM ISTಬಾಲಿವುಡ್‌ನ ಫೇಮಸ್ ಸ್ಟಾರ್ ಜೋಡಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ ಕೂಡ ಸೇರುತ್ತಾರೆ. ಅಕ್ಷಯ್ ಕುಮಾರ್ ಇನ್ನೂ ಹಿಟ್ ಚಿತ್ರಗಳನ್ನು ನೀಡುತ್ತಾ ಫಿಲ್ಮಂಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಪತ್ನಿ ಟ್ವಿಂಕಲ್ ಕೂಡ ಬಾಲಿವುಡ್‌ನ ಸ್ಟಾರ್ ನಟಿಗಳಲ್ಲಿ ಒಬ್ಬರು. ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ ಇವರು ಈಗ ನಟನೆಯಿಂದ ನಿವೃತ್ತಿ ತೆಗೆದುಕೊಂಡಿದ್ದಾರೆ. ಮುಂಬೈನಲ್ಲಿರುವ ಇವರ ಮನೆ ಯಾವ ಆರ್ಟ್ ಗ್ಯಾಲರಿಗೂ ಕಡಿಮೆ ಇಲ್ಲ. ಮುಂಬೈನ ಜುಹುನಲ್ಲಿ ಅರೇಬಿಯನ್ ಸಮುದ್ರಕ್ಕೆ ಮುಖ ಮಾಡಿರುವ ಕಲಾತ್ಮಕ ಡ್ಯುಪ್ಲೆಕ್ಸ್ ಮನೆಯಲ್ಲಿ ವಾಸಿಸುತ್ತಿದ್ದಾರೆ ಈ ಸ್ಟಾರ್ ದಂಪತಿ. ಸ್ವತಃ ಇಂಟಿರೀಯರ್ ಡೆಕೊರೇಟರ್ ಆಗಿರುವ ಟ್ವಿಂಕಲ್‌ರ ಕೈಚಳಕ ಮನೆಯಲ್ಲಿ ಎದ್ದು ಕಾಣುತ್ತದೆ.