ತಮಿಳು, ತೆಲುಗು ಚಿತ್ರರಂಗದಲ್ಲಿ ತುಂಬಾ ಫೇಮಸ್ ಆಗಿರುವ ನ್ಯಾಚುರಲ್ ಬ್ಯೂಟಿ ಐಶ್ವರ್ಯಾ ರಾಜೇಶ್‌ಗೆ ಕನ್ನಡದಲ್ಲಿಯೂ ಬೇಡಿಕೆ ಬಂದಿದೆ. ಡಾಲಿ ಧನಂಜಯ ಅವರ ನಟನೆಯ 'ಉತ್ತರಕಾಂಡ' ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾಗೆ ಐಶ್ವರ್ಯಾ ರಾಜೇಶ್ ನಾಯಕಿ ಆಗಿದ್ದಾರೆ. ಈ ಸಿನಿಮಾವನ್ನು 2022ರಲ್ಲಿಯೇ ಘೋಷಣೆ ಮಾಡಲಾಗಿದ್ದು, 2024ರ ಏಪ್ರಿಲ್‌ನಿಂದ ಚಿತ್ರೀಕರಣ ಆರಂಭಿಸಲಾಗಿದೆ. ಆದರೆ, ಇದೀಗ ನಟಿ ಐಶ್ವರ್ಯಾ ತೆಲುಗು, ತಮಿಳುನಲ್ಲಿ ಭಾರೀ ಯಶಸ್ವಿಯಾದ ಬೆನ್ನಲ್ಲಿಯೇ ತಮ್ಮ ಸಂಭಾವನೆಯನ್ನು ಭಾರೀ ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿಕೊಂಡಿದ್ದಾರೆ. ಅದು ಎಷ್ಟೆಂದರೆ ಹಿಂದಿನಕ್ಕಿಂತ ಶೇ.300 ಹೆಚ್ಚಳ ಮಾಡಿಕೊಂಡಿದ್ದಾರೆ.