ಅವಳು ಎಲ್ಲರನ್ನೂ ಗೌರವಿಸುತ್ತಾಳೆ ಮತ್ತು ಮೌಲ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾಳೆ ಎಂದು ಜಯಾ ಬಚ್ಚನ್ ಕೆಲವು ವರ್ಷಗಳ ಹಿಂದೆ ಸೊಸೆ ಐಶ್ವರ್ಯಾ ಅವರನ್ನು ಹೊಗಳಿದ್ದರು.
ಅದೇ ಸಮಯದಲ್ಲಿ, ಸಂದರ್ಶನವೊಂದರಲ್ಲಿ ಅಭಿಷೇಕ್ ಜಯ ಬಚ್ಚನ್ ಮತ್ತು ಐಶ್ವರ್ಯಾ ರೈ ನಡುವಿನ ಬಾಂಡಿಂಗ್ ಬಗ್ಗೆ ಬಹಿರಂಗಪಡಿಸಿದ್ದಾರೆ.
ತಾಯಿ ಮತ್ತು ಐಶ್ವರ್ಯಾ ನನ್ನ ವಿರುದ್ಧ ಪಿತೂರಿ ನಡೆಸುತ್ತಾರೆ. ಇಬ್ಬರೂ ಬಂಗಾಳಿ ಭಾಷೆಯಲ್ಲಿ ಮಾತನಾಡುತ್ತಲೇ ಇರುತ್ತಾರೆ, ಎಂದು ಅಭಿಷೇಕ್ ಹೇಳಿದರು.
ನನ್ನ ತಾಯಿಗೆ ಬಂಗಾಳಿ ಚೆನ್ನಾಗಿ ತಿಳಿದಿದೆ ಮತ್ತು ಐಶ್ವರ್ಯ ರಿತುಪರ್ಣೋ ಘೋಷ್ ಅವರ ಚೋಖರ್ ಬಾಲಿ ಸಿನಿಮಾದಲ್ಲಿ ಕೆಲಸ ಮಾಡುವಾಗ ಆ ಭಾಷೆ ಕಲಿತ್ತಿದ್ದಾಳೆ. ಆದ್ದರಿಂದ ಅವರು ನನ್ನ ವಿರುದ್ಧ ಏನಾದರೂ ಮಾಡಬೇಕಾದಾಗ, ಇಬ್ಬರೂ ಬಂಗಾಳಿ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ಅಭಿಷೇಕ್ ಬಹಿರೊಂಗ ಪಡಿಸಿದ್ದರು.
ಜಯಾ ಬಚ್ಚನ್ ಯಾವಾಗಲೂ ತನ್ನ ಸೊಸೆ ಐಶ್ವರ್ಯಾಳ ಪರವಾಗಿರುತ್ತಾರೆ. ಸೊಸೆಯ ವಿರುದ್ಧ ಮಾತು ಕೇಳುವುದು ಅವರಿಗೆ ಇಷ್ಟವಿಲ್ಲ.
ಒಮ್ಮೆ ಪಾರ್ಟಿಯಲ್ಲಿ ಐಶ್ವರ್ಯಾರಿಗೆ ಆಶ್ ಆಶ್ ಎಂದು ಛಾಯಾಗ್ರಾಹಕ ಕರೆದಾಗ ಬಗ್ಗೆ ಜಯಾ ಅವರ ಮೇಲೆ ಕೋಪಗೊಂಡಿದ್ದರು. 'ಆಶ್-ಐಶ್ ಕರೆಯಬೇಡಿ, ಐಶ್ವರ್ಯಾ ಜಿ ಅಥವಾ ಶ್ರೀಮತಿ ಬಚ್ಚನ್ ಎಂದು ಹೇಳಿ,' ಎಂದು ಹೇಳಿದ್ದರು.
ಐಶ್ವರ್ಯ ಮತ್ತು ಅಭಿಷೇಕ್ ಮೊದಲ ಬಾರಿಗೆ 1997 ರಲ್ಲಿ ಸಿನಿಮಾದ ಸೆಟ್‌ಗಳಲ್ಲಿ ಭೇಟಿಯಾದರು. ನಂತರ 2000 ರಲ್ಲಿ ಡಾಯಿ ಅಕ್ಷರ್ ಪ್ರೇಮ್ ಮತ್ತು ನಂತರ 2003 ರಲ್ಲಿ ಕುಚ್ ನಾ ಕಹೋದಲ್ಲಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದರು.
ಆದರೆ, ಆ ಸಮಯದಲ್ಲಿ ಐಶ್ವರ್ಯ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ಅಭಿಷೇಕ್ ಕರಿಷ್ಮಾ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು .
2005 ರಲ್ಲಿ, ಬಂಟಿ ಔರ್ ಬಾಬ್ಲಿಯ ಫೇಮಸ್ ಹಾಡು ಕಜ್ರಾ ರೇ ಶೂಟಿಂಗ್ ಸಮಯದಲ್ಲಿ ಪರಸ್ಪರ ಪರಿಚಯವಾದ ಇಬ್ಬರೂ 2004 ರಲ್ಲಿ ಧೂಮ್ ಚಿತ್ರೀಕರಣದ ವೇಳೆಗೆ ಕ್ಲೋಸ್ ಆದರು.
ಪ್ರೀಮಿಯಮ್ ಶೋ ಸಂದರ್ಭದಲ್ಲಿ ನ್ಯೂಯಾರ್ಕ್ ಹೋಟೆಲ್‌ನ ಬಾಲ್ಕನಿಯಲ್ಲಿ ಅಭಿಷೇಕ್ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು. ಮದುವೆಯಾದ 4 ವರ್ಷಗಳ ನಂತರ, ಐಶ್ವರ್ಯಾ ಅವರು ನವೆಂಬರ್ 16, 2011 ರಂದು ಮಗಳು ಆರಾಧ್ಯ ಅವರಿಗೆ ಜನ್ಮ ನೀಡಿದರು.
ಈ ಜೋಡಿ ಡಾಯಿ ಅಕ್ಷರ್ ಪ್ರೇಮ್ ಕೆ, ಕುಚ್ ನಾ ಕಹೋ, ಬಂಟಿ ಔರ್ ಬಬ್ಲಿ, ಉಮರಾವ್ ಜಾನ್, ಧೂಮ್ 2 ಮತ್ತು ಗುರು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ಅದೇ ಸಮಯದಲ್ಲಿ, ಮದುವೆಯ ನಂತರ, ಅವರ ಎರಡೂ ಚಿತ್ರಗಳಾದ 'ಸರ್ಕಾರ್ ರಾಜ್' (2008) ಮತ್ತು 'ರಾವನ್' (2010) ಬಿಡುಗಡೆಯಾದವು.
ಪ್ರಸ್ತುತ, ಅಭಿಷೇಕ್ ಬಚ್ಚನ್ ಬಾಬ್ ಬಿಸ್ವಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫ್ಯಾನಿ ಖಾನ್ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಐಶ್ವರ್ಯಾ ಪ್ರಸ್ತುತ, ಅವರು ಯಾವುದೇ ಬಾಲಿವುಡ್ ಪ್ರಾಜೆಕ್ಟ್ ಹೊಂದಿಲ್ಲ.
ಆದರೆ ಮಣಿರತ್ನಂ ನಿರ್ದೇಶನದ 500 ಕೋಟಿ ಬಜೆಟ್‌ನ ತಮಿಳು ಸಿನಿಮಾ ಪೊನ್ನಿಯಿನ್ ಸೆಲ್ವನ್ ನಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.