ಸೈಫ್,‌ ಶಾಹಿದ್‌ ನಂತರ ಪೆಟರ್ನಿಟಿ ಲೀವ್‌ ತೆಗೆದುಕೊಳ್ಳುತ್ತಿದ್ದಾರೆ ಕೊಹ್ಲಿ!

First Published Dec 1, 2020, 5:42 PM IST

ಆಸ್ಟ್ರೇಲಿಯಾ ಟೂರ್‌ನಲ್ಲಿರುವ ಟೀಮ್‌ ಇಂಡಿಯಾದ ಆರಂಭ ಅತ್ಯಂತ ಕಳಪೆಯಾಗಿದ್ದು, ಮೂರು ಏಕ ದಿನಗಳ ಸರಣಿಯನ್ನು ಸೋತಿದೆ. ವಿರಾಟ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಭಾರತಕ್ಕೆ ಮರಳಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಕಠಿಣ ಸವಾಲನ್ನು ಹೇಗೆ ಎದುರಿಸುತ್ತದೆ ಎಂದು ನಾಯಕ ವಿರಾಟ್ ಕೊಹ್ಲಿಯನ್ನು ಈಗಾಗಲೇ ಪ್ರಶ್ನಿಸಲಾಗುತ್ತಿದೆ. ಆದರೆ ತಮ್ಮ ಪತ್ನಿಗೆ ಡೆಲಿವರಿ ಡೇಟ್ ಹತ್ತಿರ ಇರುವಾಗ, ಆಕೆಯೊಂದಿಗೆ ತಾವಿರುವುದು ಮುಖ್ಯ ಎಂದಿದ್ದಾರೆ. ಅಕ್ಟೋಬರ್ 26ರಂದು ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಮೊದಲ ಟೆಸ್ಟ್ ಪಂದ್ಯದ ನಂತರ ಮನೆಗೆ ಮರಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆಯ್ಕೆದಾರರಿಗೆ ಈ ಬಗ್ಗೆ ಆಗಲೇ ಕೊಹ್ಲಿ ಮನವರಿಕೆ ಮಾಡಿ ಕೊಟ್ಟಿದ್ದಾರೆ. 

ಆಸ್ಟ್ರೇಲಿಯಾ ಟೂರ್‌ನಲ್ಲಿರುವ ಟೀಮ್‌ ಇಂಡಿಯಾಆರಂಭ ಅತ್ಯಂತ ಕಳಪೆಯಾಗಿದ್ದು,ಮೂರು ಏಕ ದಿನಗಳ ಸರಣಿಯನ್ನು ಸೋತಿದೆ. ವಿರಾಟ್ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಭಾರತಕ್ಕೆ ಮರಳಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾದ ಕಠಿಣ ಸವಾಲನ್ನು ಹೇಗೆ ಎದುರಿಸುತ್ತದೆ ಎಂದು ನಾಯಕ ವಿರಾಟ್ ಕೊಹ್ಲಿಯನ್ನು ಈಗಾಗಲೇ ಪ್ರಶ್ನಿಸಲಾಗುತ್ತಿದೆ.
undefined
ಮೊದಲ ಮಗುವಿನ ಜನನದ ಕಾರಣ, ಅಕ್ಟೋಬರ್ 26 ರಂದು ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ಮೊದಲ ಟೆಸ್ಟ್ ಪಂದ್ಯದ ನಂತರ ಮನೆಗೆ ಮರಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ ಟೀಂ ಇಂಡಿಯಾ ನಾಯಕ.
undefined
ವಿರಾಟ್ ಪೆಟರ್ನಿಟಿ ಲೀವ್‌ ತೆಗೆದುಕೊಂಡ ಮೊದಲ ಸೆಲೆಬ್ರೆಟಿ ಏನು ಅಲ್ಲ. ಹೀಗೆ ತಮ್ಮ ಮಗುವಿನ ಆಗಮನದ ಸಮಯದಲ್ಲಿ ರಜೆ ತೆಗೆದು ಕೊಂಡವರ ಪಟ್ಟಿಯಲ್ಲಿ ಸೈಫ್ ಅಲಿ ಖಾನ್ ನಿಂದ ಶಾಹಿದ್ ಕಪೂರ್‌ರವರೆಗೆ ಅನೇಕರು ಇದ್ದಾರೆ.
undefined
ಕರೀನಾ ಕಪೂರ್ ಅವರ ಎಕ್ಸ್‌ ಬಾಯ್‌ಫ್ರೆಂಡ್‌ ಶಾಹಿದ್ ಕಪೂರ್ ತಮ್ಮ ಮಗಳು ಮೀಶಾ (2016) ಜನಿಸುವ ಸಮಯದಲ್ಲಿ ಕೆಲವು ತಿಂಗಳು ಪೆಟರ್ನಿಟಿ ರಜೆಯಲ್ಲಿದ್ದರು. ಅದೇ ರೀತಿಯಲ್ಲಿ ಮಗ ಜೈನ್ (2018) ಸಮಯದಲ್ಲೂ ಸಹ ಅವರು ತಮ್ಮ ಕೆಲಸದಿಂದ ಒಂದು ವಾರ ರಜೆ ಪಡೆದರು.
undefined
ಕುನಾಲ್ ಖೇಮು ಅವರು 2017ರಲ್ಲಿ ತಮ್ಮ ಮಗಳು ಇನಾಯಾ ಹುಟ್ಟಿದ ಸಮಯದಲ್ಲಿ ರಜೆ ತೆಗೆದುಕೊಂಡಿದ್ದಲ್ಲದೆ, ಚಿತ್ರದ ಪ್ರಚಾರದಿಂದ ಸಹ ದೂರವಾಗಿದ್ದರು.
undefined
ರಿತೇಶ್ ದೇಶ್ಮುಖ್ ಅವರ ಇಬ್ಬರು ಗಂಡುಮಕ್ಕಳ ಜನನದ ಸಮಯದಲ್ಲಿ ಪತ್ನಿ ಜೆನಿಲಿಯಾ ಜೊತೆಯಲ್ಲಿದ್ದರು.
undefined
ಶಿಲ್ಪಾ ಶೆಟ್ಟಿಯ ಪತಿ ಉದ್ಯಮಿ ರಾಜ್ ಕುಂದ್ರಾ ಅವರ ಮಗ ವಿಯಾನ್ ಜನಿಸಿದಾಗ 201ರಲ್ಲಿ ರಜೆಯಲ್ಲಿದ್ದರು. ಮಾಧ್ಯಮ ವರದಿಗಳ ಪ್ರಕಾರ, ರಾಜ್ ಒಂದು ತಿಂಗಳ ಕಾಲ ಪೆಟರ್ನಿಟಿ ಲೀವ್‌ ತೆಗೆದುಕೊಂಡಿದ್ದರು.
undefined
click me!