ನಟಿ ಶ್ರೀದೇವಿ ಹಿಂದೂ ಸಂಪ್ರದಾಯ ಮುರಿದ ಮೊದಲ ಮಹಿಳೆ; ಸತ್ಯ ಬಿಚ್ಚಿಟ್ಟ ಗಂಡ ಬೋನಿ ಕಪೂರ್!

Published : Apr 07, 2024, 07:59 PM IST

ಭಾರತೀಯ ನಟಿಯಾಗಿ ಹಿಂದೂ ಸಂಪ್ರದಾಯ ಹಾಗೂ ಅಧ್ಯಾತ್ಮಿಕತೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ನಟಿ ಎಂದರೆ ತಮ್ಮ ಪತ್ನಿ ಶ್ರೀದೇವಿ. ಆದರೆ, ಆಕೆಯೇ ಭಾರತೀಯ ಪುರುಷ ಪ್ರಧಾನ ಸಮಾಜದ ಹಿಂದೂ ಸಂಪ್ರದಾಯವನ್ನು ಮುರಿದ ಮೊದಲ ಮಹಿಳೆ ಆಗಿದ್ದಾಳೆ ಎಂದು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ ತಿಳಿಸಿದ್ದಾರೆ.

PREV
18
ನಟಿ ಶ್ರೀದೇವಿ ಹಿಂದೂ ಸಂಪ್ರದಾಯ ಮುರಿದ ಮೊದಲ ಮಹಿಳೆ; ಸತ್ಯ ಬಿಚ್ಚಿಟ್ಟ ಗಂಡ ಬೋನಿ ಕಪೂರ್!

ನನ್ನ ಪತ್ನಿ ಶ್ರೀದೇವಿ ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ನಂಬಿಕೆ ಹೊಂದಿದ್ದರೂ ಹಿಂದೂ ಸಂಪ್ರದಾಯವನ್ನು ಮುರಿದ ಮೊದಲ ಮಹಿಳೆ ಆಗಿದ್ದಾಳೆ ಎಂದು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್‌ ತಿಳಿಸಿದ್ದಾರೆ.

28

ಅಂಗ್ಲ ಮಾಧ್ಯಮ ಟೈಮ್ಸ್ ನೌಗೆ ನೀಡಿದ ಸಂದರ್ಶನದಲ್ಲಿ ಬೋನಿ ಕಪೂರ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿ ಅವರು ಕೆಲ ಸಂಪ್ರದಾಯಗಳನ್ನು ಮುರಿದ ವಿಚಾರಗಳ ಬಗ್ಗೆಯೂ ಬೋನಿ ಕಪೂರ್ ಹೇಳಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಪುರುಷ ಪ್ರಧಾನ ಸಂಪ್ರದಾಯವಿದ್ದು, ಶ್ರೀದೇವಿ ಅವರು ಅದನ್ನು ಉಲ್ಲಂಘನೆ ಮಾಡಿದ ಭಾರತದ ಮೊದಲ ನಟಿ ಆಗಿದ್ದಾರೆ ಎಂದು ಹೇಳಿದರು.

38

ಶ್ರೀದೇವಿ ಅವರ ತಾಯಿ ತೀರಿಕೊಂಡಾಗ ಹೆಣ್ಣು ಮಕ್ಕಳು ಚಿತೆಗೆ ಬೆಂಕಿ ಹಚ್ಚುವಂತಿಲ್ಲ ಎಂಬುದು ಹಿಂದೂ ಸಂಪ್ರದಾಯವಾಗಿದೆ. ಆದರೆ, ಅದನ್ನು ಮುರಿದು ಶ್ರೀದೇವಿ ಅವರೇ ತಮ್ಮ ತಾಯಿ ರಾಜೇಶ್ವರಿ ಅವರ ಚಿತೆಗೆ ಬೆಂಕಿ ಇಟ್ಟಿದ್ದಳು ಎಂಬುದನ್ನು ಹೇಳಿಕೊಂಡಿದ್ದಾರೆ.
ಚಿತ್ರ ಕೃಪೆ: ಶ್ರೀದೇವಿ ಫ್ಯಾನ್ ಪೇಜ್

48

ಇನ್ನು ಶ್ರೀದೇವಿ ದೇವರನ್ನು ನಂಬುವುದರಲ್ಲಿ, ಪೂಜೆ ಪುನಸ್ಕಾರ ಮಾಡುವುದು ಸೇರಿದಂತೆ ನನಗಿಂತ ಹೆಚ್ಚು ಆಧ್ಯಾತ್ಮಿಕವಾಗಿದ್ದಳು. ಆಕೆಯಿಂದಲೇ ನನಗೆ ಆಧ್ಯಾತ್ಮದ ಬಗ್ಗೆ ಆಸಕ್ತಿ ಬಂದಿತ್ತು. ಆದರೆ, ಅವರ ತಾಯಿ ತೀರಿಕೊಂಡಾಗ ಎಲ್ಲ ಸಂಪ್ರದಾಯ ಮೀರಿ ಚಿತೆಗೆ ಬೆಂಕಿ ಇಟ್ಟಿದ್ದನ್ನು ನೋಡಿ ಆಶ್ಚರ್ಯವಾಗಿತ್ತು ಎಂದು ಬೋನಿ ಕಪೂರ್ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಚಿತ್ರ ಕೃಪೆ: ಶ್ರೀದೇವಿ ಫ್ಯಾನ್ ಪೇಜ್

58
sridevi and boney kapoor

ಮೊಲದ ಹೆಂಡತಿ ಇದ್ದಾಗಲೇ ಮನೆಗೆ ಬಂದು ಉಳಿದುಕೊಂಡಿದ್ದ ಶ್ರೀದೇವಿ: ನನ್ನ ಮೊದಲ ಪತ್ನಿ ಮೋನಾ ಶೌರಿ, ಮಗ ಅರ್ಜುನ್ ಕಪೂರ್ ಹಾಗೂ ಅನ್ಸೂಲಾ ಕಪೂರ್ ಜೊತೆಯಲ್ಲಿದ್ದಾಗಲೇ ಬಾಲಿವುಡ್ ನಟಿ ಶ್ರೀದೇವಿ ಜೊತೆ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯಾಗಿದ್ದೆನು. ಮೋನಾ ನಮ್ಮ ಮನೆಯಲ್ಲಿದ್ದಾಗಲೇ ಶ್ರೀದೇವಿ ನಮ್ಮ ಮನೆಯಲ್ಲಿ ಬಂದು ಉಳಿದುಕೊಂಡಿದ್ದರು.

68
sridevi and boney kapoor

ಶ್ರೀದೇವಿ ಜೊತೆಗಿನ ತಮ್ಮ ಈ ಪ್ರೇಮ ಸಂಬಂಧ ತಮ್ಮ ಮೊದಲ ಪತ್ನಿ ಮೋನಾ ಶೌರಿ ಅವರಿಗೆ ತಿಳಿದಿತ್ತು. ಮೊದಲ ಪತ್ನಿ ಜೊತೆ ಇದನ್ನು ಬೋನಿ ಕಪೂರ್ ಹೇಳಿಕೊಂಡಿದ್ದರು. ಆದರೆ, ಪುತ್ರ ಅರ್ಜುನ್ ಕಪೂರ್ ಮಾತ್ರ ನನ್ನ ನಿರ್ಧಾರದಿಂದ ಬಹಳ ಬೇಸರಗೊಂಡಿದ್ದ ಎಂಬುದನ್ನು ಸ್ವತಃ ಬೋನಿ ಕಪೂರ್ ಹೇಳಿಕೊಂಡಿದ್ದಾರೆ.

78
sridevi and boney kapoor

ರಾಖಿ ಕಟ್ಟಲು ಹೇಳಿದ್ದ ತಾಯಿ: ನನ್ನ ಮತ್ತು ಶ್ರೀದೇವಿ ನಡುವಿನ ಸಂಬಂಧದ ಬಗ್ಗೆ ನನ್ನ ತಾಯಿಗೆ ಗೊತ್ತಾಗಿದ್ದು, ಅವರು ಸೀದಾ ಶ್ರೀದೇವಿ ಬಳಿ ಹೋಗಿ ಮಾತನಾಡಿದ್ದರು. ಕೂಡಲೇ ನೀನು ನನ್ನ ಮಗನಿಗೆ ರಾಖಿ ಕಟ್ಟುವಂತೆಯೂ ಸೂಚಿಸಿದ್ದರು. ವಿರೋಧದ ನಡುವೆಯೂ ನಮ್ಮ ಪ್ರೀತಿ ಮಾತ್ರ ದೂರವಾಗಲಿಲ್ಲ ಎಂದು ಬೋನಿ ಕಪೂರ್ ತಿಳಿಸಿದ್ದಾರೆ.

88

ಮೊದಲ ಪತ್ನಿ ಮೋನಾ ಶೌರಿಯನ್ನು 1996ರಲ್ಲಿ  ನಟಿ ಶ್ರೀದೇವಿ ಜೊತೆ ಹೊರಟು ಹೋಗಿದ್ದರಿಂದ ಅರ್ಜುನ್ ಕಪೂರ್ ಹೃದಯದಲ್ಲಿ ಶ್ರೀದೇವಿ ಬಗ್ಗೆ ಆಳವಾದ ನೋವುಂಟು ಮಾಡಿತ್ತು. ಆತ ಹಗೆ ಮುಂದುವರೆಸಿದರೂ, ನಾನು ಪ್ರತೀಕಾರ ಮಾಡಲಿಲ್ಲ. ಅರ್ಜುನ್‌ ಬಗ್ಗೆ ನನಗೆ ಎಂದಿಗೂ ದ್ವೇಷವಿಲ್ಲ. ಆದರೆ ಅವನಿಗೆ ನನ್ನ ಮೇಲೆ ಸಿಟ್ಟಿದೆ ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories