ಗೇರ್ ಚೇಂಜ್ ಮಾಡ್ತನೇ ಇರ್ತೀನಿ, ಆದರೂ ಕಾಲು ನೆಲದ ಮೇಲೇ ಇರುತ್ತೆ: ಶ್ರೀಲೀಲಾ

Published : Aug 15, 2025, 06:05 AM IST

ಹಿಂದಿ ಸಿನಿಮಾದಲ್ಲಿ ನನಗೆ ಸಿಗುತ್ತಿರುವ ಸ್ಕ್ರಿಪ್ಟ್‌ಗಳು ಹೆಚ್ಚು ನೈಜವಾಗಿವೆ, ನನ್ನ ವಯಸ್ಸಿಗೆ ತಕ್ಕಂತಿವೆ ಎಂದರು ನಟಿ ಶ್ರೀಲೀಲಾ.

PREV
15

ಬದಲಾವಣೆ ನನಗಿಷ್ಟ. ಬದುಕಿನ, ಕೆರಿಯರ್‌ನ ಜರ್ನಿಯಲ್ಲಿ ಗೇರ್‌ ಬದಲಿಸುತ್ತಲೇ ಇರುತ್ತೇನೆ. ಎಷ್ಟೇ ಎತ್ತರಕ್ಕೇರಲಿ, ನನ್ನ ಕಾಲು ನೆಲದ ಮೇಲೇ ಇರುತ್ತದೆ. ಇದು ನಟಿ ಶ್ರೀಲೀಲಾ ಮಾತು.

25

ಸಂದರ್ಶನವೊಂದರಲ್ಲಿ ಕಿಸ್ಸಿಕ್‌ ನಟಿ ಆಡಿರುವ ಈ ಮಾತುಗಳು ಹೊಸ ಬದಲಾವಣೆಯ ಹಿಂಟ್‌ ಕೊಟ್ಟಿವೆ. ದಕ್ಷಿಣ ಭಾರತೀಯ ನಟಿಯಾಗಿ ಗುರುತಿಸಿಕೊಂಡಿದ್ದ ಶ್ರೀಲೀಲಾ ಇದೀಗ ಪ್ಯಾನ್‌ ಇಂಡಿಯನ್‌ ಲೆವೆಲ್‌ ಆಕ್ಟರ್‌ ಆಗುತ್ತಿದ್ದಾರೆ.

35

‘ನಟನೆಯಲ್ಲಿ ತೊಡಗಿಸಿಕೊಂಡಾಕ್ಷಣ ನಾನು ಆ ಪಾತ್ರದಲ್ಲಿ ಜೀವಿಸುತ್ತೇನೆ. ಅದರಲ್ಲೂ ಹಿಂದಿ ಸಿನಿಮಾದಲ್ಲಿ ನನಗೆ ಸಿಗುತ್ತಿರುವ ಸ್ಕ್ರಿಪ್ಟ್‌ಗಳು ಹೆಚ್ಚು ನೈಜವಾಗಿವೆ, ನನ್ನ ವಯಸ್ಸಿಗೆ ತಕ್ಕಂತಿವೆ.

45

ಆದರೆ ಇದೀಗ ನಾನು ಹೊಸ ಬಗೆಯ ಪಾತ್ರಗಳ ಶೋಧದಲ್ಲಿ ತೊಡಗಿದ್ದೇನೆ. ನಾಯಕಿ ಪ್ರಧಾನವಾಗಿರುವ, ಸ್ಟ್ರಾಂಗ್‌ ಕಥೆ ಹೊಂದಿರುವ, ನೈಜ ಪ್ರತಿಭೆಯನ್ನು ಹೊರತೆಗೆಯುವಂಥ ಪಾತ್ರಗಳಲ್ಲಿ ನಟಿಸಬೇಕೆನ್ನುವ ತೀವ್ರ ತುಡಿತವಿದೆ ’ ಎಂದಿದ್ದಾರೆ.

55

ಇತ್ತೀಚೆಗಷ್ಟೇ ಪೂಜಾ ಹೆಗಡೆ, ಬಾಲಿವುಡ್ ಚಿತ್ರಗಳು ಗ್ಲಾಮರ್ ಮಾತ್ರ ಬಯಸುತ್ತದೆ. ಅಭಿನಯಿಸುವ ಅವಕಾಶ ದಕ್ಷಿಣ ಭಾರತೀಯ ಚಿತ್ರಗಳಲ್ಲಿರುತ್ತವೆ ಎಂದು ಹೇಳಿದ್ದರು.

Read more Photos on
click me!

Recommended Stories