ಬಾತ್‌ರೂಮ್‌ ಬೋಲ್ಡ್‌ ಫೋಟೋಸ್ ಹಂಚಿಕೊಂಡ ಶ್ರೀಲೀಲಾ: ಏನೇನ್ ಮಾಡಿದ್ರು ಅಂತ ಗೊತ್ತಾದ್ರೆ...

First Published | Jun 22, 2024, 7:31 PM IST

ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ತೆಲುಗು, ತಮಿಳು ಸಿನಿಮಾಗಳತ್ತ ಹೆಚ್ಚು ಫೋಕಸ್ ಮಾಡಿದ್ದಾರೆ. ಕನ್ನಡ ಸಿನಿಮಾಗಳನ್ನು ಮರೆತೇಬಿಟ್ಟಿದ್ದಾರೆ. ತೆಲುಗು ಟಾಪ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿ ಶ್ರೀಲೀಲಾ ಸೈ ಎನಿಸಿಕೊಂಡಿದ್ದು, ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಶ್ರೀಲೀಲಾ ಟಾಲಿವುಡ್ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ರವಿತೇಜಾ, ಮಹೇಶ್ ಬಾಬು, ಬಾಲಕೃಷ್ಣರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು.

ಸದ್ಯ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಶ್ರೀಲೀಲಾ ಹೊಸ ಹೊಸ ಫೋಟೋಶೂಟ್ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡ್ತಿದ್ದಾರೆ. ಬಾತ್​​ರೂಮ್​​ನಲ್ಲಿ ಬೋಲ್ಡ್ ಫೋಟೋಶೂಟ್ ಮೂಲಕ ನಟಿ ಮಿಂಚುತ್ತಿದ್ದಾರೆ.

Tap to resize

ಬ್ಲಾಕ್ ಡ್ರೆಸ್‌ನಲ್ಲಿ ನಟಿ ಶ್ರೀಲೀಲಾ ಮಿಂಚುತ್ತಿದ್ದಾರೆ. ಮಿರರ್ ಮುಂದೆ ಬಾಚಣಿಕೆ ಹಾಗೂ ಮೇಕಪ್ ಬ್ರಶ್ ಹಿಡಿದು ವಿಭಿನ್ನವಾಗಿ ಮಸ್ತ್ ಪೋಸ್ ಕೊಟ್ಟಿದ್ದಾರೆ. ಬಾತ್​ರೂಮ್​ನಲ್ಲಿ ನಟಿ ಶ್ರೀಲೀಲಾ ಫೋಟೋಶೂಟ್ ಮಾಡಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 

ಶ್ರೀಲೀಲಾ  ಫೋಟೋಸ್ ನೋಡಿದ ನೆಟ್ಟಿಗರು, ಸೋ ಕ್ಯೂಟ್, ಬ್ಯೂಟಿಫುಲ್, ನನ್ನ ಹೃದಯದ ರಾಣಿ ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬ ನೆಟ್ಟಿಗ ನಿಮಗೆ ಬೇರೆ ಜಾಗ ಸಿಗಲಿಲ್ವಾ ಎಂದು ನಟಿಯ ಕಾಲೆಳೆಯುವಂತೆ ಕಮೆಂಟ್ ಮಾಡಿದ್ದಾನೆ.

ಚಿಕ್ಕಂದಿನಿಂದೇ ಭರತನಾಟ್ಯ ಕಲಿತ ಶ್ರೀಲೀಲಾ ಕೆಲವು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದರು. ಕನ್ನಡದಲ್ಲಿ ಮೊದಲು 'ಕಿಸ್' ಚಿತ್ರದಲ್ಲಿ ನಟಿಸಿದ್ದರು. ಎ. ಪಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
 

ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಶ್ರೀಲೀಲಾ ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಟಾಲಿವುಡ್ ಇಂಡಸ್ಟ್ರಿಗೆ ಬಂದು ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಪಡೆದ ಕೆಲವೇ ಕೆಲವು ನಾಯಕಿಯರಲ್ಲಿ ಶ್ರೀಲೀಲಾ ಕೂಡ ಒಬ್ಬರಾಗಿದ್ದಾರೆ.

ಸಿನಿಮಾ ಫ್ಲಾಪ್ ಆದ್ರೂ ಶ್ರೀಲೀಲಾಗೆ ಆಫರ್‌ಗಳು ಕಡಿಮೆ ಆಗಿಲ್ಲ. ಈ ಬ್ಯೂಟಿಗೆ ಒಳ್ಳೊಳ್ಳೆ ಆಫರ್‌ಗಳು ಬರುತ್ತಿವೆಯಂತೆ. ಅವುಗಳಲ್ಲಿ ಶ್ರೀಲೀಲಾ ಕಥೆಗಳನ್ನು ಅಳೆದು-ತೂಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. 

ಶ್ರೀಲೀಲಾ ಅವರು ಕೇವಲ 7 ವರ್ಷಗಳ ಕೆಲಸದ ಅನುಭವವನ್ನು ಹೊಂದಿರುವ ನಟಿ ಮತ್ತು ಕಡಿಮೆ ಸಂಭಾವನೆಗೆ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಗುಂಟೂರು ಕಾರಂ ಸಿನಿಮಾ ಮೂಲಕ ಶ್ರೀಲೀಲಾ ಅವರ ಸಂಭಾವನೆ ಲಕ್ಷದಿಂದ ಕೋಟಿಗೆ ಜಿಗಿದಿದೆ.

Latest Videos

click me!