ಅಜ್ಜಿ ನಿದ್ದೆ ಮಾಡಿದ ಮೇಲೆ ಸೈಲೆಂಟ್ ಆಗಿ ಹೊರಟು ಹೋಗೋ ಪ್ಲಾನ್. ಆದ್ರೆ ಅಜ್ಜಿ ನಿದ್ದೆ ಮಾಡ್ತಿರಲಿಲ್ಲ. ಹೊತ್ತು ಹೋಗ್ತಾ ಇತ್ತು. ಕೊನೆಗೆ ಸಮಂತಾ ಫ್ರೆಂಡ್ಸ್ ಅಜ್ಜಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಮಿಕ್ಸ್ ಮಾಡಿ ಕೊಟ್ಟರಂತೆ. ಸ್ವಲ್ಪ ಹೊತ್ತಿನಲ್ಲಿ ಅಜ್ಜಿ ನಿದ್ದೆ ಮಾಡಿದ್ರು. ಆಗ ಸೈಲೆಂಟ್ ಆಗಿ ಪಾರ್ಟಿಗೆ ಹೋದ್ರಂತೆ. ಆ ದಿನ ತುಂಬಾ ಎಂಜಾಯ್ ಮಾಡಿದ್ವಿ ಅಂತ ಸಮಂತಾ ಹೇಳಿದ್ದಾರೆ. ಅಜ್ಜಿಗೆ ಏನೂ ಆಗಿಲ್ಲ ಅಂತ ಖುಷಿ ಪಟ್ಟೆವು ಅಂತಲೂ ಹೇಳಿದ್ದಾರೆ. ಆದ್ರೆ ನಮ್ಮ ಜೀವನದಲ್ಲಿ ಮಾಡಿದ ಕೆಟ್ಟ ಕೆಲಸ ಅದು ಅಂತ, ಅದನ್ನ ನೆನಪಿಸಿಕೊಂಡ್ರೆ ಬೇಜಾರಾಗುತ್ತೆ ಅಂತ ಸಮಂತಾ ಹೇಳಿದ್ದಾರೆ.