ಬಸ್ಸಿಳಿದು ಮನೆಗೆ ನಡೆದುಕೊಂಡು ಹೋಗುವಾಗ, ಪ್ರತಿದಿನ ಹಿಂದೆಯೇ ನಡೆದು ಬರ್ತಿದ್ದನಂತೆ. ಎರಡು ವರ್ಷ ಹೀಗೆ ಮಾಡಿದ್ರೂ ಒಂದು ದಿನವೂ ಮಾತಾಡಿಸಿಲ್ಲವಂತೆ. ಸಮಂತಾಗೆ ಅನುಮಾನ ಬಂದು ಕೇಳಿದ್ರಂತೆ, ಯಾಕೆ ಹಿಂಬಾಲಿಸ್ತೀಯಾ ಅಂತ. ಅದಕ್ಕೆ ಆ ಹುಡುಗ, ನಾನು ನಿಮ್ಮ ಹಿಂದೆ ಬರ್ತೀನಿ ಅಂತ ಯಾರು ಹೇಳಿದ್ರು ಅಂದನಂತೆ. ಆ ಮಾತಿಗೆ ಸಮಂತಾ ಶಾಕ್ ಆಗಿಬಿಟ್ಟರಂತೆ. ಅವನ ಬಗ್ಗೆ ಏನೇನೋ ಊಹಿಸಿಕೊಂಡಿದ್ದರಂತೆ. ಆದರೆ ಒಮ್ಮೆಲೇ ನಿರಾಸೆ ಆಯ್ತಂತೆ. ಆ ಲವ್ ಏನು ಅಂತ ಅರ್ಥವಾಗಲಿಲ್ಲವಂತೆ. ಅವನು ಇಷ್ಟಪಟ್ಟಿದ್ದನಾ? ಇಲ್ಲವಾ? ಇಷ್ಟಪಟ್ಟು ಹೇಳೋಕೆ ಆಗ್ತಿಲ್ಲವಾ? ಅಂತ ತಿಳಿಯಲಿಲ್ಲವಂತೆ. ಅದೊಂದು ವಿಚಿತ್ರ ಅನುಭವ ಅಂತ ಸಮಂತಾ ಹೇಳಿದ್ದಾರೆ. ಆದರೆ ಅದೊಂದು ಸ್ಪೆಷಲ್ ಮೆಮೊರಿ ಅಂತ 'ಚೆಬುತಾ' ಶೋನಲ್ಲಿ ಹೇಳಿದ್ದಾರೆ.