ಎನ್‌ಟಿಆರ್ ಅವರೊಂದಿಗೆ ಸಿನಿಮಾ ಮಾಡುವಾಗ ಬಾತ್ ರೂಮಿಗೆ ಹೋಗವುದೂ ಕಷ್ಟವಾಗಿತ್ತು!

First Published | Dec 3, 2024, 3:11 PM IST

ತೆನಾಲಿಯಲ್ಲಿ ಹುಟ್ಟಿ ಬೆಳೆದ ಹಿರಿಯ ನಟಿ ಪ್ರಭಾ ದಶಕಗಳಿಂದ ದಕ್ಷಿಣ ಭಾರತದ ಚಿತ್ರರಂಗದಲ್ಲಿದ್ದಾರೆ. ನಾಯಕಿಯಾಗಿ, ಪೋಷಕ ನಟಿಯಾಗಿ ಅವರು ಮಿಂಚಿದ್ದಾರೆ. ಆದರೆ, ಎನ್‌ಟಿ ಆರ್ ಅವರೊಂದಿಗೆ ಸಿನಿಮಾ ಮಾಡುವಾಗ ಬಾತ್ ರೂಮಿಗೆ ಹೋಗಲೂ ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ..

ತೆನಾಲಿಯಲ್ಲಿ ಹುಟ್ಟಿ ಬೆಳೆದ ಹಿರಿಯ ನಟಿ ಪ್ರಭಾ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ನಾಯಕಿಯಾಗಿ, ಪೋಷಕ ನಟಿಯಾಗಿ ಅವರು ಮಿಂಚಿದ್ದಾರೆ. ಎನ್‌.ಟಿ.ಆರ್‌., ಎ.ಎನ್‌.ಆರ್‌., ಶೋಭನ್ ಬಾಬು ಮುಂತಾದ ಘಟಾನುಘಟಿಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಒದಗಿಬಂದಿತು. ಎನ್‌.ಟಿ.ಆರ್‌ ಜೊತೆ ದಾನವೀರ ಶೂರಕರ್ಣ ಚಿತ್ರದಲ್ಲಿ ನಟಿಸಿದ್ದು ತಮ್ಮ ಜೀವನದ ಮರೆಯಲಾಗದ ಅನುಭವ ಎಂದು ನಟಿ ಪ್ರಭಾ ಹೇಳಿದ್ದಾರೆ.

ಎನ್‌.ಟಿ.ಆರ್‌ ನಿರ್ದೇಶನ ಮತ್ತು ತ್ರಿಪಾತ್ರ ಅಭಿನಯದ ದಾನವೀರ ಶೂರಕರ್ಣ ಚಿತ್ರವನ್ನು ಅವರು ಸ್ಮರಿಸುತ್ತಾ ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಒಂದೆಡೆ ನಟಿಸುತ್ತಾ ಮತ್ತೊಂದೆಡೆ ನಿರ್ದೇಶನ ಮಾಡುವುದು ತುಂಬಾ ಕಷ್ಟ. ಎಲ್ಲರಿಗಿಂತ ಹೆಚ್ಚು ವೇಷಭೂಷಣಗಳು ಎನ್‌.ಟಿ.ಆರ್‌ ಅವರಿಗೆ ಇರುತ್ತಿತ್ತು. ಮೂರು ಪಾತ್ರಗಳಲ್ಲಿ ನಟಿಸಬೇಕಿತ್ತು. ಮೇಕಪ್‌ಗೆ ಗಂಟೆಗಟ್ಟಲೆ ಬೇಕಾಗುತ್ತಿತ್ತು.

Tap to resize

ನಾವು ಬೆಳಿಗ್ಗೆ 7 ಗಂಟೆಗೆ ಹೋಗಿ ಮೇಕಪ್, ವೇಷಭೂಷಣ ಹಾಕಿಸಿಕೊಂಡರೆ ಮಧ್ಯಾಹ್ನ 1 ಗಂಟೆಯವರೆಗೂ ತೆಗೆಯೋಕೆ ಆಗುತ್ತಿಲಿಲ್ಲ. ಟಾಯ್ಲೆಟ್‌ಗೆ ಹೋಗೋಕೂ ಆಗ್ತಿರಲಿಲ್ಲ. ಯಾಕಂದ್ರೆ ಮೇಕಪ್ ಹಾಳಾಗುತ್ತೆ. ಮೇಕಪ್ ಅಸಿಸ್ಟೆಂಟ್ ಬಂದು ಮೇಡಂ ನೀರು ಜಾಸ್ತಿ ಕುಡಿಯಬೇಡಿ ಅಂತ ಹೇಳುತ್ತಿದ್ದರು. ಎನ್‌.ಟಿ.ಆರ್‌ ಅವರು ಮೇಕಪ್ ಹಾಕಿಸಿಕೊಂಡು ಕದಲದೆ ಹಾಗೆ ಕೂತಿರುತ್ತಿದ್ದರು.

ಅವರು ದುರ್ಯೋಧನನ ವೇಷದಲ್ಲಿದ್ದಾಗ ಎದೆ ಉಬ್ಬಿಸಿಕೊಂಡು ಉಗ್ರರೂಪ ತೋರಿಸುತ್ತಿದ್ದರು. ಕೃಷ್ಣನ ವೇಷ ಹಾಕಿದ ತಕ್ಷಣ ಸೌಮ್ಯವಾಗಿ ಬದಲಾಗುತ್ತಿದ್ದರು. ಅಲ್ಲಿಯವರೆಗಿದ್ದ ದೇಹಭಾಷೆ ಸಂಪೂರ್ಣ ಬದಲಾಗುತ್ತಿತ್ತು. ಇವರಿಗೆ ನಿಜವಾಗಲೂ ದೇವರು ಬಂದರೇ ಅಂತ ಆಶ್ಚರ್ಯ ಪಡುತ್ತಿದ್ದೆವು ಎಂದು ಪ್ರಭಾ ಹೇಳಿದ್ದಾರೆ.

ಹೀಗೆ, ಮೂರು ಪಾತ್ರಗಳಲ್ಲಿ ವ್ಯತ್ಯಾಸ ತೋರಿಸುತ್ತಾ, ನಿರ್ದೇಶನ ಮಾಡುತ್ತಾ, ಕೆಜಿಗಟ್ಟಲೆ ಮೇಕಪ್, ವೇಷ ಭೂಷಣಗಳನ್ನು ಸಹಿಸಿಕೊಂಡು ನಟಿಸುವುದು ಅವರಿಗೆ ಮಾತ್ರ ಸಾಧ್ಯ. ಎನ್‌.ಟಿ.ಆರ್‌ ನಿಜಕ್ಕೂ ಕಾರಣಜನ್ಮರು ಅಂತ ಪ್ರಭಾ ಶ್ಲಾಘಿಸಿದ್ದಾರೆ.

Latest Videos

click me!