Published : Feb 19, 2025, 07:54 PM ISTUpdated : Feb 19, 2025, 07:59 PM IST
ತೆಲುಗು ಚಿತ್ರರಂಗದಲ್ಲಿ ಲಾಂಗ್ ಇನ್ನಿಂಗ್ಸ್ ಆಡಿದ ಅಂದರೆ ದೀರ್ಘ ಕಾಲ ಉಳಿದಂತಹ ನಟಿಯರು ತುಂಬಾ ಕಡಿಮೆ. ರಮ್ಯಕೃಷ್ಣ ತರಹದವರು ಈಗಲೂ ಚಾನ್ಸ್‌ಗಳನ್ನ ಪಡೆಯುತ್ತಿದ್ದಾರೆ. ತ್ರಿಷ, ಕಾಜಲ್ ಕೂಡ ಈ ಸಾಲಿನಲ್ಲಿದ್ದಾರೆ. ಆದರೆ, ಈ ನಟಿ 16 ವರ್ಷಕ್ಕೆ ಇಂಡಸ್ಟಿ ಹಿಟ್ ಸಿನಿಮಾ ಕೊಟ್ಟವರು ಈಗ 44 ವರ್ಷವಾದರೂ ಭಾರಿ ಬೇಡಿಕೆ ಹೊಂದಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ದೀರ್ಘಕಾಲ ಸಿನಿಮಾದಲ್ಲಿ ಉಳಿದುಕೊಂಡ ನಟಿಯರು ತುಂಬಾ ಕಡಿಮೆ. ರಮ್ಯಕೃಷ್ಣ ತರಹದವರು ಈಗಲೂ ಚಾನ್ಸ್‌ಗಳನ್ನ ಪಡೆಯುತ್ತಿದ್ದಾರೆ. ತ್ರಿಷ, ಕಾಜಲ್ ಕೂಡ ಇದ್ದಾರೆ. ಟಾಲಿವುಡ್‌ನಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿದವರ ಪೈಕಿ ನಟಿ ಮೀನಾ ಕೂಡ ಒಬ್ಬರು. ಬಾಲನಟಿಯಾಗಿ ಸಿನಿ ಜರ್ನಿ ಆರಂಭಿಸಿದ ಮೀನಾ ಹದಿ-ಹರೆಯ ವಯಸ್ಸಿನಲ್ಲಿಯೇ ಹೀರೋಯಿನ್ ಆಗಿಬಿಟ್ಟರು.
25
ಮೀನಾಗೆ 15 ವರ್ಷ ಇದ್ದಾಗಲೇ ಸೀತಾರಾಮಯ್ಯಗಾರಿ ಮನವರಾಳು ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ತು. ಆ ಸಿನಿಮಾ ಮೀನಾ ಕೆರಿಯರ್‌ನ ತಿರುವು ಮುರುವು ಮಾಡಿತು. 1991ರಲ್ಲಿ ಬಿಡುಗಡೆಯಾದ ಸೀತಾರಾಮಯ್ಯಗಾರಿ ಮನವರಾಳು ಸಿನಿಮಾ ಸೂಪರ್ ಹಿಟ್ ಆಯ್ತು. ಮಾರನೇ ವರ್ಷ ಮೀನಾ ಇನ್ನೊಂದು ಸೂಪರ್ ಹಿಟ್ ಸಿನಿಮಾ ಕೊಟ್ಟರು. ಅದೇ ವಿಕ್ಟರಿ ವೆಂಕಟೇಶ್ ಜೊತೆ ನಟಿಸಿದ ಚಂಟಿ. ರವಿರಾಜ ಪಿನಿಶೆಟ್ಟಿ ಡೈರೆಕ್ಷನ್, ಇಳಯರಾಜ ಸಂಗೀತ ಪ್ರೇಕ್ಷಕರನ್ನ ಮೋಡಿ ಮಾಡಿತು. ಚಂಟಿ ಸಿನಿಮಾ ರೆಕಾರ್ಡ್‌ಗಳನ್ನ ಬ್ರೇಕ್ ಮಾಡಿ ಇಂಡಸ್ಟ್ರಿ ಹಿಟ್ ಆಯ್ತು.
35
16 ವರ್ಷದಲ್ಲೇ ಮೀನಾ ಇಂಡಸ್ಟ್ರಿ ಹಿಟ್ ಕೊಟ್ಟರು. ಇದರಿಂದ ಆಕೆಗೆ ಆಫರ್‌ಗಳ ಮೇಲೆ ಆಫರ್‌ಗಳು ಬಂದವು. ನಾಗಾರ್ಜುನ, ವೆಂಕಟೇಶ್, ಚಿರಂಜೀವಿ, ಬಾಲಕೃಷ್ಣ ತರಹದ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದರು. ಈಗಲೂ ಮೀನಾ ನಟಿಯಾಗಿ ಮುಂದುವರೆದಿದ್ದಾರೆ.
45
16ನೇ ವರ್ಷದಲ್ಲಿ ವೆಂಕಟೇಶ್‌ಗೆ ನಾಯಕಿಯಾಗಿದ್ದ ಮೀನಾ, 44 ವರ್ಷದ ನಂತರವೂ ವೆಂಕಿ ಜೊತೆ ನಾಯಕಿಯಾಗಿ ನಟಿಸಿ ಸೂಪರ್ ಹಿಟ್ ಕೊಟ್ಟಿದ್ದಾರೆ. ಇವರಿಬ್ಬರು ಕೊನೆಯದಾಗಿ ದೃಶ್ಯಂ-2 ಸಿನಿಮಾದಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು.
55
ಮೀನಾ, ವೆಂಕಟೇಶ್ ಸೂಪರ್ ಹಿಟ್ ಜೋಡಿ. ಇವರಿಬ್ಬರ ಕಾಂಬಿನೇಷನ್‌ನ ಚಂಟಿ, ಸುಂದರಕಾಂಡ, ಸೂರ್ಯವಂಶಂ, ಅಬ್ಬಾಯಿಗಾರು, ದೃಶ್ಯಂ-1, ದೃಶ್ಯಂ-2 ಸಿನಿಮಾಗಳು ಸೂಪರ್ ಹಿಟ್ ಆಗಿವೆ.