ಕೊನೆಯದಾಗಿ 2006ರಲ್ಲಿ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸಿದ ಲೈಲಾ, ವಿದೇಶಿ ಉದ್ಯಮಿಯನ್ನು ಪ್ರೀತಿಸಿ ಮದುವೆಯಾಗಿ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಸರಿದರು. ಲೈಲಾ ಅವರ ಪತಿ ಇರಾನ್ ದೇಶದವರು. ಇವರಿಗೆ ಪ್ರಸ್ತುತ ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಸಮಯದಲ್ಲಿಯೇ 2022ರಲ್ಲಿ ನಿರ್ದೇಶಕ ಪಿ.ಎಸ್.ಮಿತ್ರನ್ ನಿರ್ದೇಶನದಲ್ಲಿ ಕಾರ್ತಿ, ರಾಶಿ ಖನ್ನಾ, ರಜೀಷಾ ವಿಜಯನ್ ತದಿತರರು ನಟಿಸಿದ 'ಸರ್ದಾರ್' ಸಿನಿಮಾದ ಮೂಲಕ ರೀ ಎಂಟ್ರಿ ಕೊಟ್ಟರು ಲೈಲಾ.