ಅಯ್ಯೋ... ಆ ಸ್ಥಿತಿ ಯಾವ ಹೆಣ್ಣಿಗೂ ಬರಬಾರದು: ಆ ದುರಂತದ ದಿನದ ಬಗ್ಗೆ ಮೌನ ಮುರಿದ ನಟಿ ಕರೀಷ್ಮಾ ಕಪೂರ್

Published : Feb 07, 2026, 01:38 PM IST

Actress Karishma Kapoor News: ನಟಿ ಕರೀಷ್ಮಾ ಕಪೂರ್‌ ಹಾಗೂ ಅಭಿಷೇಕ್‌ ಬಚ್ಚನ್‌ ಅವರು 2000ರಲ್ಲಿ ಜೋಡಿಯಾಗಿದ್ದರು. 2002ರಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡು, ಇನ್ನೇನು ಮದುವೆ ಆಗಬೇಕಿದ್ದ ಈ ಜೋಡಿ ಆಮೇಲೆ ದೂರ ಆಗಿತ್ತು. 

PREV
15
ಯಾವ ಹೆಣ್ಣಿಗೂ ಇಂಥ ಪರಿಸ್ಥಿತಿ ಬರೋದು ಬೇಡ

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕರೀಷ್ಮಾ ಕಪೂರ್‌ ಅವರು, “ವರ್ಷದ ಆರಂಭವೇ ಭಯಂಕರವಾಗಿ ಶುರುವಾಯಿತು, ಯಾವ ಹೆಣ್ಣಿಗೂ ಇಂಥ ಪರಿಸ್ಥಿತಿ ಬರೋದು ಬೇಡ. ನನಗೆ ನಾನೇ ಸಮಾಧಾನ ಮಾಡಿಕೊಳ್ಳಬೇಕಿತ್ತು, ಇಂಥ ಸ್ಥಿತಿ ಯಾರಿಗೂ ಬೇಡ ಎಂದು ಹೇಳಿದ್ದರು.

25
ಹಣೆಯಲ್ಲಿ ಬರೆದಿದ್ದೇ ಆಗೋದು

“ಏನಾಗಬೇಕು ಎಂದು ಬರೆದುಕೊಂಡಿರತ್ತೋ ಅದೇ ಆಗುವುದು. ಅದನ್ನು ತಡೆಯೋಕೆ ಆಗದು. ನನಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸೋದು ಎಂದು ಗೊತ್ತಾಗುತ್ತಿರಲಿಲ್ಲ, ಅಂಥ ಪರಿಸ್ಥಿತಿಗೆ ನಾನು ರೆಡಿ ಕೂಡ ಇರಲಿಲ್ಲ. ಬದುಕು ಬಂದಂತೆ ಸಾಗುತ್ತಿರಬೇಕು” ಎಂದು ಹೇಳಿದ್ದರು.

35
ಎಲ್ಲರೂ ನನ್ನ ಬಿಟ್ಟು ಹೋದರು

ಅಂಥ ಕಷ್ಟದ ಸಮಯದಲ್ಲಿ ಮಾಧ್ಯಮವು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಚಿರಋಣಿ. ಎಲ್ಲರೂ ನನ್ನ ಬಿಟ್ಟು ಹೋದರು. ಆದರೆ ಆ ದುರಂತದಿಂದ ಹೊರಬರಲು ಇಡೀ ಕುಟುಂಬ ಸಹಾಯ ಮಾಡಿತು ಎಂದು ಹೇಳಿದ್ದರು.

45
ಎಂದೂ ಮಾತನಾಡಲಿಲ್ಲ

ಅಭಿಷೇಕ್‌ ಆಗಲೀ, ಕರೀಷ್ಮಾ ಆಗಲೀ ಈ ಬಗ್ಗೆ ಎಂದೂ ಮಾತನಾಡಿಲ್ಲ. ಅಮಿತಾಭ್‌ ಬಚ್ಚನ್‌ ಅವರ 60ನೇ ಜನ್ಮದಿನಕ್ಕೆ ಇವರಿಬ್ಬರ ನಿಶ್ಚಿತಾರ್ಥ ಘೋಷಣೆಯಾಗಿತ್ತು. ಅದಾಗಿ ಒಂದು ವರ್ಷಕ್ಕೆ ಬ್ರೇಕಪ್‌ ಆಯಿತು.

55
ಐಶ್ವರ್ಯಾ ಜೊತೆ ಅಭಿಷೇಕ್‌ ಮದುವೆ

ಕರೀಷ್ಮಾ ಅವರು ಆಮೇಲೆ ಉದ್ಯಮಿಯೋರ್ವರನ್ನು ಮದುವೆಯಾಗಿ ಡಿವೋರ್ಸ್‌ ಪಡೆದರು. ಅಭಿಷೇಕ್‌ ಅವರು ಐಶ್ವರ್ಯಾ ರೈ ಬಚ್ಚನ್‌ ಅವರನ್ನು ಮದುವೆಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories