ಆಂಧ್ರದ ಅಣ್ಣ, ನವರಸ ನಟ ಸಾರ್ವಭೌಮ ನಂದಮೂರಿ ತಾರಕ ರಾಮರಾವ್ ಬಗ್ಗೆ ಎಷ್ಟೇ ಹೇಳಿದ್ರೂ ಕಡಿಮೆನೇ. ಸಿನಿಮಾ, ರಾಜಕೀಯ ರಂಗದಲ್ಲಿ ಅವರ ಛಾಪು ಅಳಿಸಲಾಗದು. ಸಿನಿಮಾ ರಂಗದಲ್ಲಿ ಹೀರೋ, ನಿರ್ಮಾಪಕ, ನಿರ್ದೇಶಕ, ರೈಟರ್, ಮೇಕಪ್ ಆರ್ಟಿಸ್ಟ್ ಆಗಿಯೂ ಅನುಭವ ಇದೆ. ಎಲ್ಲದರಲ್ಲೂ ಹಿಡಿತ ಸಾಧಿಸಿದ್ರಿಂದ ದಾನವೀರ ಶೂರಕರ್ಣದಂತಹ ಅದ್ಭುತ ಸೃಷ್ಟಿ ಮಾಡಲು ಸಾಧ್ಯವಾಯಿತು. ರಾಜಕೀಯವಾಗಿ ಅವರ ರೆಕಾರ್ಡ್ ಯಾರಿಂದಲೂ ಅಳಿಸಲು ಸಾಧ್ಯವಿಲ್ಲ.