ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್: ಮಿಸ್ ಯೂ ಎಂದಿದ್ದೇಕೆ?

Published : Jan 25, 2025, 04:21 PM IST

ಇತ್ತೀಚೆಗಷ್ಟೇ ನಡೆದ ಮಿಸ್ ಯೂ ಸಿನಿಮಾ ಪ್ರಚಾರದಲ್ಲಿ ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ.

PREV
17
ಸೀರೆಯಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್: ಮಿಸ್ ಯೂ ಎಂದಿದ್ದೇಕೆ?

ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನೇಕ ನಟಿಯರು ಬಾಲಿವುಡ್, ಟಾಲಿವುಡ್, ಕಾಲಿವುಡ್ನಲ್ಲೂ ಮಿಂಚುತ್ತಿದ್ದಾರೆ. ಅವರಲ್ಲಿ ನಟಿ ಆಶಿಕಾ ಕೂಡ ಇಬ್ಬರಾಗಿದ್ದಾರೆ. ಆಶಿಕಾ ಸದ್ಯ ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

27

ಸಿದ್ಧಾರ್ಥ್ ಮತ್ತು ಕನ್ನಡತಿ ಆಶಿಕಾ ರಂಗನಾಥ್ ಅವರ ತಮಿಳು ಚಲನಚಿತ್ರ ಮಿಸ್ ಯೂ ರೊಮ್ಯಾಂಟಿಕ್‌ ಸಿನಿಮಾ. ಕಳೆದ ವರ್ಷ ಡಿಸೆಂಬರ್ 13 ರಂದು ಸಿನಿಮಾ ತೆರೆ ಕಂಡಿತ್ತು.

37

ಈ ಮಿಸ್ ಯೂ ಸಿನಿಮಾ ಪ್ರಚಾರದಲ್ಲಿ ನಟ ಸಿದ್ದಾರ್ಥ್ ಹಾಗೂ ನಟಿ ಆಶಿಕಾ ರಂಗನಾಥ್ ಭಾಗವಹಿಸಿದ್ದರು. ಸ್ಲೀವ್‌ಲೆಸ್ ಬ್ಲೌಸ್‌ನಲ್ಲಿ ನೀಲಿ ಬಣ್ಣದ ಸೀರೆಯುಟ್ಟು ಆಶಿಕಾ ಮಿಂಚಿದ್ದಾರೆ. ಜೊತೆಗೆ ಕ್ಯಾಮೆರಾ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

47

ಮಿಸ್ ಯೂ ಎನ್ನುವುದು ತಮಿಳಿನ ರೋಮ್ಯಾಂಟಿಕ್ ಹಾಸ್ಯ ಸಿನಿಮಾ. ರಾಜಶೇಖರ್ ಎನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಸಿದ್ದಾರ್ಥ್ ನಾರಾಯಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ.

57

ಆಶಿಕಾ ರಂಗನಾಥ್ ಬಹುಭಾಷಾ ನಟಿಯಾಗಿ ಸದ್ದು ಮಾಡ್ತಿದ್ದಾರೆ. ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲೂ ಆಶಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲೂ ಕೂಡ ಈಗಾಗಲೇ ಪಟ್ಟತ್ತು ಅರಸನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

67

ಆಶಿಕಾ ರಂಗನಾಥ್ ಅವರು ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಇದರ ಜೊತೆಗೆ ಸಮಯ ಸಿಕ್ಕಾಗ ಅವರು ಪ್ರವಾಸ ಮಾಡುತ್ತಿರುತ್ತಾರೆ. 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. 

77

ರಾಜು ಕನ್ನಡ ಮೀಡಿಯಂ, ಮುಗಳು ನಗೆ, ಮಾಸ್ ಲೀಡರ್ ಮುಂತಾದ ಚಿತ್ರಗಳಲ್ಲಿ ನಟಿಸಿ, ಅದ್ಭುತ ನಟನೆ ಮೂಲಕ ಆಶಿಕಾ ಹೆಸರು ಮಾಡಿದ್ದಾರೆ. ಸದ್ಯ ಟಾಲಿವುಡ್‌ಗೆ ಹಾರಿದ ಆಶಿಕಾಗೆ ಇದೀಗ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

Read more Photos on
click me!

Recommended Stories