ರಣವೀರ್ ಆಯ್ತು ಈಗ ಮತ್ತೋರ್ವ ಸ್ಟಾರ್; ಪತ್ನಿ ಕ್ಲಿಕ್ಕಿಸಿದ ಬೆತ್ತಲೆ ಫೋಟೋ ಹಂಚಿಕೊಂಡ ಖ್ಯಾತ ನಟ

First Published Jul 24, 2022, 12:12 PM IST

ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಬೆತ್ತಲಾಗಿ ಹಾಸಿಗೆ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ಹಾದಿಯಲ್ಲೇ ಸಾಗಿರುವ ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಫೋಟೋಹಂಚಿಕೊಂಡು ಟ್ರೆಂಡ್‌ಗೆ ಸೇರಿದ್ದೀನಿ ಎಂದು ಹೇಳಿದ್ದಾರೆ. 

ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಬೆತ್ತಲಾಗಿ ಫೋಟೋಶೂಟ್ ಮಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದರು. ರಣವೀರ್ ಸಿಂಗ್ ಬೆತ್ತಲಾಗಿರುವ ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ರಣವೀರ್‌ಗೆ  ಏನಾಯ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.  ಈ ನಡುವೆ ಮತ್ತೋರ್ವ ಖ್ಯಾತ ನಟ ಬೆತ್ತಲೇ ಫೋಟೋ ಶೇರ್ ಮಾಡಿದ್ದಾರೆ.

ತಮಿಳಿನ ಖ್ಯಾತ ನಟ ವಿಷ್ಣು ವಿಶಾಲ್ ಬೆತ್ತಲಾಗಿ ಹಾಸಿಗೆ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ಹಾದಿಯಲ್ಲೇ ಸಾಗಿರುವ ವಿಷ್ಣು ಸಾಮಾಜಿಕ ಜಾಲತಾಣದಲ್ಲಿ ಫೋಟೋಹಂಚಿಕೊಂಡು ಟ್ರೆಂಡ್‌ಗೆ ಸೇರಿದ್ದೀನಿ ಎಂದು ಹೇಳಿದ್ದಾರೆ. 

Latest Videos


ಬೆತ್ತಲಾಗಿರುವ ಫೋಟೋಗಳನ್ನು ಹಂಚಿಕೊಂಡಿರುವ ವಿಷ್ಣು, ಚಿತ್ರಗಳನ್ನು ತಮ್ಮ ಪತ್ನಿ-ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕ್ಲಿಕ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಹೌದು, ಪತಿ ಬೆತ್ತಲಾಗಿ ಬೆಡ್ ಮೇಲೆ ಮಲಗಿರುವ ಫೋಟೋವನ್ನು ಕ್ಲಿಕ್ಕಿಸಿದ್ದು ವಿಷ್ಣು ಪತ್ನಿ ಜ್ವಾಲಾಗುಟ್ಟಾ.

ವಿಷ್ಣು ವಿಶಾಲ್ ಫೋಟೊ ಹಂಚಿಕೊಂಡು, 'ಸರಿ...ಟ್ರೆಂಡ್‌ಗೆ ಸೇರ್ಪಡೆಯಾಗುತ್ತಿದ್ದೇನೆ. ನನ್ನ ಪತ್ನಿ ಜ್ವಾಲಾಗುಟ್ಟ ಛಾಯಾಗ್ರಾಹಕರಾಗಿ ಬದಲಾಗಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ವಿಷ್ಣು ವಿಶಾಲ್ ಶೇರ್ ಮಾಡಿರುವ ಫೋಟೋದಲ್ಲಿ, ವಿಷ್ಣು ಗುಪ್ತಾಂಗವನ್ನು ಬೆಡ್‌ಶೀಟ್‌ನಿಂದ ಮುಚ್ಚಿಕೊಂಡಿದ್ದಾರೆ. ಪತ್ನಿಯ ಕ್ಯಾಮರಾಗೆ ತರಹೇವಾರಿ ಪೋಸ್ ನೀಡಿರುವ ವಿಷ್ಣು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ವಿಷ್ಣು ವಿಶಾಲ್ ಫೋಟೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ರಣವೀರ್ ಸಿಂಗ್ ಮತ್ತು ವಿಷ್ಣು ಫೋಟೋವನ್ನು ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ, ಅದಕ್ಕೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.    

ರಣವೀರ್ ಸಿಂಗ್ ಮನೆಯಿಂದ ಹೊರಗೆ ಕಾಲಿಟ್ಟರೆ ಸಿಂಗ್ ಚಿತ್ರ ವಿಚಿತ್ರ ಬಟ್ಟೆಗಳ ಮೂಲಕ ಗಮನ ಸೆಳೆಯುತ್ತಿದ್ದರು. ಬಟ್ಟೆಗಳ ಆಯ್ಕೆ ವಿಚಾರವಾಗಿಯೇ ಸದ್ದು ಮಾಡುತ್ತಿದ್ದರು ಆದರೆ ಬೆತ್ತಲಾಗಿ ಕ್ಯಾಮರಾಗೆ ಪೋಸ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಅಂದಹಾಗೆ ರಣವೀರ್ ಸಿಂಗ್ ಬೆತ್ತಲಾಗಿರುವುದು ಮ್ಯಾಗಜಿನ್ ಒಂದರ ಫೋಟೋಶೂಟ್ ನಲ್ಲಿ.

click me!