ದೀಪಿಕಾ ಪಡುಕೋಣೆ ಜೊತೆ 2 ವರ್ಷ ಡೇಟ್‌ ಮಾಡಿದ್ದ Muzammil Ibrahim; ನಾನೇ ದೂರ ಮಾಡಿದೆ ಎಂದ ನಟ!

Published : Jun 07, 2025, 07:48 AM ISTUpdated : Jun 07, 2025, 07:49 AM IST

ನಟ, ಮಾಡೆಲ್ ಮುಜಮ್ಮಿಲ್ ಇಬ್ರಾಹಿಂ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಇದ್ದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

PREV
18

ಒಂದು ಮುಕ್ತವಾದ ಸಂಭಾಷಣೆಯಲ್ಲಿ, ದೀಪಿಕಾ ಪಡುಕೋಣೆ ಹಾಗೂ ತಾವಿಬ್ಬರೂ ಭೇಟಿಯಾದ ರೀತಿ, ಯಾರು ಮೊದಲು ಸಂಪರ್ಕ ಮಾಡಿದ್ದು?, ಯಾರು ಬ್ರೇಕಪ್‌ ಮಾಡಿಕೊಂಡಿದ್ದು ಮತ್ತು ಇಂದಿಗೂ ಕಾಂಟ್ಯಾಕ್ಟ್‌ನಲ್ಲಿ ಇದ್ದಾರಾ ಎಂಬ ಬಗ್ಗೆ ಮಾತನಾಡಿದ್ದಾರೆ.

28

ಸಿದ್ಧಾರ್ಥ್ ಕಣ್ಣನ್‌ರವರೊಂದಿಗಿನ ಸಂದರ್ಶನದಲ್ಲಿ, ಮುಜಮ್ಮಿಲ್‌ರಿಗೆ “ನೀವು ಮತ್ತು ದೀಪಿಕಾ ಪಡುಕೋಣೆ ಲವ್‌ ಮಾಡ್ತಿದ್ರಾ?" ಎಂದು ಪ್ರಶ್ನೆ ಮಾಡಲಾಯ್ತು. ಆಗ ಅವರು "ದೀಪಿಕಾ ಈಗ ಮದುವೆಯಾಗಿದ್ದಾರೆ. ನಾನು ಈ ಬಗ್ಗೆ ಮಾತನಾಡೋಕೆ ಇಷ್ಟಪಡೋದಿಲ್ಲ. ಆದರೆ ಹೌದು, ನಮ್ಮ ಸಂಬಂಧ ತುಂಬ ವಿಶೇಷವಾದದ್ದು. ನಾವು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೆವು, ಈಗಲೂ ಚೆನ್ನಾಗಿದ್ದೇವೆ, ನಾನು ಅವರನ್ನು ತುಂಬಾ ಗೌರವಿಸುತ್ತೇ. ಅವರು ತುಂಬಾ ಒಳ್ಳೆಯ ಹುಡುಗಿ" ಎಂದಿದ್ದಾರೆ.

38

“ಆಗ ನೀವು ಡೇಟಿಂಗ್ ಮಾಡುತ್ತಿದ್ದಿರಾ? ಒಪ್ಪಿಕೊಳ್ಳುವುದರಲ್ಲಿ ತೊಂದರೆಯಿಲ್ಲ," ಎಂದು ಪ್ರಶ್ನೆ ಮಾಡಲಾಯ್ತು. ಆಗ ಅವರು “ನಾವು ಮಾಡೆಲಿಂಗ್ ಆರಂಭಿಸಿದಾಗ ಡೇಟ್‌ ಮಾಡೋಕೆ ಶುರು ಮಾಡಿದ್ವಿ. ನಾನು ಟಾಮಿ ಹಿಲ್‌ಫಿಗರ್ ಶೋ ಮಾಡುತ್ತಿದ್ದೆ. ಅದೇ ಸಮಯದಲ್ಲಿ ನಾನು ದೀಪಿಕಾರನ್ನು ಭೇಟಿಯಾದೆ. ನಾವು ಆ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದೆವು. ದೀಪಿಕಾ ಪಡುಕೋಣೆ ಆಗ ನನ್ನನ್ನು ಬ್ಲ್ಯಾಕ್‌ರೈಡರ್ ಮತ್ತು ಪರ್ದೇಸಿಯಾ ಸಿನಿಮಾದಲ್ಲಿ ನೋಡಿದ್ದರು” ಎಂದಿದ್ದಾರೆ.

48

"ದೀಪಿಕಾಗೆ ನಾನು ಇಷ್ಟ ಆಗಿದ್ದೆ. ಹೀಗೆ ನಾವು ಭೇಟಿಯಾದೆವು. ಅದಾದ ನಂತರ, ನನಗೆ ಎಂದಿಗೂ ಒಂದೇ ರೀತಿಯ ಭಾವನೆ ಇರಲಿಲ್ಲ. ನಾವು ಭೇಟಿಯಾದ ಕೆಲವೇ ದಿನಗಳ ಬಳಿಕ, ನಾನು ಸ್ಕಾಟ್‌ಲ್ಯಾಂಡ್‌ಗೆ ಹೋದೆ, ದೀಪಿಕಾ ಶೂಟಿಂಗ್‌ಗಾಗಿ ಲಂಡನ್‌ಗೆ ಹೋದರು. ಇಬ್ಬರ ವೃತ್ತಿಜೀವನ ಚೆನ್ನಾಗಿ ನಡೆಯುತ್ತಿತ್ತು” ಎಂದಿದ್ದಾರೆ.

58

ಬ್ರೇಕಪ್‌ ಬಗ್ಗೆ ಪ್ರಶ್ನೆ ಮಾಡಿದಾಗ ಅವರು"ನಮ್ಮ ಸಂಬಂಧ, ಅಥವಾ ನಮ್ಮ ಸ್ನೇಹ, ಮುಂದುವರಿಯಿತು. ಸಂಬಂಧಗಳು ಸಾಮಾನ್ಯವಾಗಿ ಎಷ್ಟು ಕಾಲ ಇರುತ್ತವೆ? ದೀಪಿಕಾ ಮತ್ತು ನಾನು ಒಂದೇ ವಯಸ್ಸಿನವರಾಗಿದ್ದೆವು. ನಾವು ಎರಡು ವರ್ಷಗಳ ಕಾಲ ಒಟ್ಟಿಗಿದ್ದೆವು. ನಾನು ಬಾಂಬೆಯಲ್ಲಿ ಭೇಟಿಯಾದ ಮೊದಲ ವ್ಯಕ್ತಿ ದೀಪಿಕಾ ಆಗಿತ್ತು ಮತ್ತು ದೀಪಿಕಾ ಭೇಟಿಯಾದ ಮೊದಲ ವ್ಯಕ್ತಿ ನಾನೇ ಆಗಿದ್ದೆ" ಎಂದಿದ್ದಾರೆ.

68

“ದೀಪಿಕಾ ಪಡುಕೋಣೆಯೇ ನನಗೆ ಪ್ರಪೋಸ್ ಮಾಡಿದ್ದರು. ನಾನೇ ಅವರನ್ನು ಬಿಟ್ಟು ಹೋದೆ. ನಾನು ಬಿಟ್ಟು ಹೋದದ್ದಕ್ಕೆ ಎಂದಿಗೂ ಪಶ್ಚಾತ್ತಾಪ ಪಡಲಿಲ್ಲ. ನಾನು ಸ್ಟ್ರಾಂಗ್‌ ಪರ್ಸನ್. ಆ ಸಮಯದಲ್ಲಿ ನಾನು ಸ್ಟಾರ್ ಆಗಿದ್ದೆ. ಆಗ ದೀಪಿಕಾ ಇನ್ನೂ ಸ್ಟಾರ್ ಆಗಿರಲಿಲ್ಲ. ಅವರಿನ್ನೂ ಮಾಡೆಲ್ ಆಗಿದ್ದರು. ನಾನು ಆಗಲೇ ನಟನಾಗಿದ್ದೆ. ನಂತರ, ಅವರು ಸೂಪರ್‌ಸ್ಟಾರ್ ಆದರು. ಇಂದು, ಯಾರಿಗೂ ನನ್ನ ಬಗ್ಗೆ ಗೊತ್ತಿಲ್ಲ, ಆದರೆ ಎಲ್ಲರಿಗೂ ದೀಪಿಕಾ ಬಗ್ಗೆ ಗೊತ್ತು. ನಾನು ದೀಪಿಕಾಳ ದೊಡ್ಡ ಅಭಿಮಾನಿ” ಎಂದಿದ್ದಾರೆ. 

78

“ದೀಪಿಕಾ ಮದುವೆಗೂ ಮುನ್ನ ನಾವು ಸಂಪರ್ಕದಲ್ಲಿದ್ದೆವು. ಅವರು ಮದುವೆಯಾಗೋ ಮೊದಲು ನಾವು ಸಂಭಾಷಣೆ ಮಾಡಿದ್ದೆವು, ಆದರೆ ಆ ನಂತರ ಅಲ್ಲ" ಎಂದಿದ್ದಾರೆ.

88

ಬ್ರೇಕಪ್‌ ಆಗಿ ಕೆಲವು ವರ್ಷಗಳ ನಂತರ ನಾವು ಮತ್ತೆ ಕಾಂಟ್ಯಾಕ್ಟ್‌ ಮಾಡಿದೆವು. ನಾವು ಯಾವಾಗಲೂ ಒಬ್ಬರನ್ನೊಬ್ಬರು ಅಭಿನಂದಿಸುತ್ತಿದ್ದೆವು ಮತ್ತು ಪರಸ್ಪರ ಒಳ್ಳೆಯದನ್ನು ಕಾಣುತ್ತಿದ್ದೆವು. ಅವರು ದೊಡ್ಡ ಸ್ಟಾರ್ ಆದರು, ನಾನು ಅವರಿಗಾಗಿ ನಿಜವಾಗಿಯೂ ಖುಷಿಪಟ್ಟೆ" ಎಂದಿದ್ದಾರೆ.

Read more Photos on
click me!

Recommended Stories