ನಾಗಚೈತನ್ಯ-ಶೋಭಿತಾ ಮದುವೆ ಮೊದಲ ಫೋಟೋ ಬಹಿರಂಗ, ಶುಭಾಶಯಗಳ ಸುರಿಮಳೆ!

First Published | Dec 4, 2024, 10:54 PM IST

ನಟ ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.  ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದ ಫೋಟೋ ರಿಲೀಸ್ ಆಗಿದೆ. 

ನಾಗ ಚೈತನ್ಯ ಮತ್ತು ಶೋಭಿತಾ ಧುಲಿಪಾಲ ಅವರ ಬಹುನಿರೀಕ್ಷಿತ ಮದುವೆ ಸುದ್ದಿಯಾಗಿದೆ. ಹೈದರಾಬಾದ್‌ನ ಐತಿಹಾಸಿಕ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆದಿದೆ. ನಾಗಚೈತನ್ಯ ಅದ್ಧೂರಿ ಮದುವೆ ಫೋಟೋಗಳು ರಿಲೀಸ್ ಆಗಿದೆ. ಫೋಟೋ ಬಹಿರಂಗವಾಗುತ್ತಿದ್ದಂತೆ ಶುಭಾಶಯಗಳ ಸುರಿಮಳೆಯಾಗಿದೆ. 

ಈ ವರ್ಷದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಾಗಚೈತನ್ಯ ಹಾಗೂ ಶೋಭಿತಾ ಇದೀಗ ವಿವಾಹ ಮಹೋತ್ಸ ನೆರವೇರಿದೆ. ಹೈದರಾಬಾದ್‌ನ ಪ್ರಸಿದ್ಧ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿದೆ.  ಮದುವೆ ದಿನದ ಮೊದಲ ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.


ಪಂಚೆಯನ್ನು ಧರಿಸಿದ್ದ ನಾಗ ಚೈತನ್ಯ ಮದುವೆ ಸಮಾರಂಭಗಳಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದರು. ಇತ್ತ ಶೋಭಿತಾ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ. ತಂದೆ ಹಾಗೂ ನಟ ನಾಗಾರ್ಜುನ್ ಸೇರಿದಂತ ಇಡೀ ಕುಟುಂಬ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದೆ. 

ಸೋಭಿತಾ ಧುಲಿಪಾಲ ಅವರು ಅಸಲಿ ಚಿನ್ನದ ಜರಿಯಿಂದ ಅಲಂಕರಿಸಲ್ಪಟ್ಟ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಬೆರಗುಗೊಳಿಸುತ್ತಿದ್ದರು, ಇದು ಅವರ ಸಾಂಸ್ಕೃತಿಕ ಹಿನ್ನೆಲೆಗೆ ಒಂದು ಗೌರವವಾಗಿದೆ.

ರಾಮ್ ಚರಣ್, ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಮದುವೆಗೆ ಆಗಮಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ನಾಗಾರ್ಜುನ ಮತ್ತು ಅವರ ಕುಟುಂಬವು ತೆಲುಗು ಚಿತ್ರರಂಗದ ಹಲವು ನಟ ನಟಿಯರು, ಗಣ್ಯರನ್ನು ಆಹ್ವಾನಿಸಿದೆ.

ಇವರಲ್ಲಿ ಚಿರಂಜೀವಿ, ಅಲ್ಲು ಅರ್ಜುನ್, ಪಿ.ವಿ. ಸಿಂಧು, ನಯನತಾರಾ, ಅಕ್ಕಿನೇನಿ ಮತ್ತು ರಾಣಾ ದಗ್ಗುಬಾಟಿ, ಎನ್‌ಟಿಆರ್, ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ, ಹಾಗೆಯೇ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. 

 ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ನಾಗಚೈತನ್ಯ ಶೋಭಿತಾ ಕೈಹಿಡಿದಿದ್ದಾರೆ.   ಇದು ಅಕ್ಕಿನೇನಿ ಕುಟುಂಬದ  ಐತಿಹಾಸಿಕ ಸ್ಟುಡಿಯೋ. 1976 ರಲ್ಲಿ ಅವರ ಅಜ್ಜ ಅಕ್ಕಿನೇನಿ ನಾಗೇಶ್ವರ ರಾವ್ ಅವರಿಂದ ಸ್ಥಾಪಿಸಲ್ಪಟ್ಟ, ಬಂಜಾರಾ ಹಿಲ್ಸ್‌ನಲ್ಲಿರುವ ಈ 22 ಎಕರೆ ಆಸ್ತಿಯು ಸಿನಿಮಾ ಪರಂಪರೆ ಮತ್ತು ಕುಟುಂಬದ ಹೆಮ್ಮೆಯನ್ನು ಪ್ರತಿನಿಧಿಸುತ್ತದೆ. ದಂಪತಿಗಳ ಮದುವೆ ಸಮಾರಂಭವು ಎಂಟು ಗಂಟೆಗಳ ಕಾಲ ನಡೆಯಿತು ಎಂದು ಹೇಳಲಾಗುತ್ತಿದೆ.

ನಾಗಾರ್ಜುನ ಅವರು ವಧು-ವರರ ಸುಂದರ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ಸೋಭಿತಾ ಮತ್ತು ನಾಗ ಚೈತನ್ಯ ಈ ಸುಂದರ ಅಧ್ಯಾಯವನ್ನು ಒಟ್ಟಿಗೆ ಪ್ರಾರಂಭಿಸುವುದನ್ನು ನೋಡುವುದು ನನಗೆ ವಿಶೇಷ ಮತ್ತು ಭಾವನಾತ್ಮಕ ಕ್ಷಣವಾಗಿದೆ. 🌸💫 ನನ್ನ ಪ್ರೀತಿಯ ಚೈಗೆ ಅಭಿನಂದನೆಗಳು, ಮತ್ತು ಶೋಭಿತಾಗೆ  ಸ್ವಾಗತ.  ನೀವು ಈಗಾಗಲೇ ನಮ್ಮ ಜೀವನಕ್ಕೆ ತುಂಬಾ ಸಂತೋಷವನ್ನು ತಂದಿದ್ದೀರಿ ಎಂದು ಪೋಸ್ಟ್ ಮಾಡಿದ್ದಾರೆ. 

Latest Videos

click me!