ನಟ Chiyaan Vikram ಪುತ್ರ ಧ್ರುವ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ!

First Published | Jan 25, 2022, 1:21 PM IST

ಓಟಿಟಿಯಲ್ಲಿ ಮಹಾನ್ ಸಿನಿಮಾ, ಕನ್ನಡದಲ್ಲಿ ಮಹಾ ಪುರುಷನಾಗಿ ಬರಲಿದ್ದಾನೆ ಧ್ರುವ್ ವಿಕ್ರಮ್.

ಬಹುಭಾಷಾ ನಟ ಚಿಯಾನ್ ವಿಕ್ರಮ್ (Chiyaan Vikram) ಪುತ್ರ ಧ್ರುವ್ ಇದೀಗ ಕನ್ನಡ ಚಿತ್ರರಂಗಕ್ಕೆ ಮಹಾ ಪುರುಷ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. 

ಮಹಾನ್ (Mahaan) ಹೆಸರಿನಲ್ಲಿ ಈ ಸಿನಿಮಾ ಓಟಿಟಿಯಲ್ಲಿ (Ott) ಬಿಡುಗಡೆ ಆಗುತ್ತಿದ್ದು, ಕನ್ನಡದಲ್ಲಿ ಮಹಾ ಪುರುಷ (Maha Purusha) ಎಂಬ ಶೀರ್ಷಿಕೆ ನೀಡಲಾಗಿದೆ. ಅಪ್ಪ ಮಗ ಒಟ್ಟಿಗೆ ನಟಿಸಿರುವ ಸಿನಿಮಾ ಇದು. 

Tap to resize

ಆದಿತ್ಯ ವಿಕ್ರಮ (Adithya Vikram) ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ(Kollywood) ಧ್ರುವ್ ಮೊದಲು ಕಾಲಿಟ್ಟಿದ್ದು. ಧ್ರುವಗೆ ಈಗ 26 ವರ್ಷ. ಆದಿತ್ಯ ವಿಕ್ರಮ ಸಿನಿಮಾ ಅರ್ಜುನ್ ರೆಡ್ಡಿ ರಿಮೇಕ್

ಕುಮಾರನ್ ಸನ್ ಆಫ್‌ ಮಹಾಲಕ್ಷ್ಮಿ ಸಿನಿಮಾದಲ್ಲಿ ಮೊದಲು ಧ್ರುವ್ (Dhruv Vikram) ಕಾಣಿಸಿಕೊಂಡಿದ್ದು, ಆದರೆ ಫೇಮ್ ಕೊಟ್ಟಿದ್ದು ಮೊದಲ ಸಿನಿಮಾನೇ. ಅದು 2019ರಲ್ಲಿ. 

ಧ್ರುವ್ ತಮ್ಮ ಮೊದಲ ಸಿನಿಮಾ 13ನೇ ಆನಂದ ವಿಕಟನ್‌ಗೆ ಬೆಸ್ಟ್‌ ನಟ ಪ್ರಶಸ್ತಿ ಮತ್ತು 9ನೇ ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್‌ಗೆ ನಾಮಿನೇಟ್ ಆಗಿದ್ದರು. 

ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ಧ್ರುವ್ ತಂದೆಯ ಗೈಡ್‌ಲೈನ್ಸ್‌ ಜೊತೆ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದಾರೆ. ಧ್ರುವ್ ಕೈಯಲ್ಲಿ ಆಗಲೇ 4 ಸಿನಿಮಾಗಳಿದ್ದು ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದಾರೆ. 

ನಾನು ಒಂದು ಕೋಟಿಗಟ್ಟಲೆ ಜನರೊಟ್ಟಿಗೆ ಮಾತನಾಡಲು ಅವರೆದುರು ಅಭಿನಯಿಸಲು ಕಾರಣವೇ ನಮ್ಮ ತಂದೆ. ಹೋಪ್ ಕಳೆದುಕೊಂಡಿದ್ದಾಗ ಜೊತೆಗಿದ್ದವರು ಅವರೇ ಗಟ್ಟಿಯಾಗಿ ನಿಲ್ಲುವುದಕ್ಕೆ ಬೆನ್ನುತಟ್ಟಿದವರು ಅವರೇ, ಎಂದು ಧ್ರುವ್ ಈ ಹಿಂದೆ ಹೇಳಿಕೊಂಡಿದ್ದರು.

Latest Videos

click me!