ಶ್ವೇತಾ ಬಚ್ಚನ್ ಪ್ರತಿ ಬರ್ತ್‌ಡೇಗೆ ಲೆಟರ್‌ ಕಳುಹಿಸುತ್ತಿದ್ದ ಆಮೀರ್‌ ಖಾನ್!

First Published | Jan 15, 2021, 6:42 PM IST

ಶ್ವೇತಾ ಬಚ್ಚನ್ ಲೆಂಜೆಂಡ್‌ ಆ್ಯಕ್ಟರ್‌ ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ಪುತ್ರಿ. ಸಿನಿಮಾ ಜಗತ್ತಿನಿಂದ ದೂರವೇ ಇದ್ದಾರೆ ಶ್ವೇತಾ ಬಚ್ಚನ್‌. ಆದರೆ  ಇವರು ತಮ್ಮದೇ ಫೇವರೇಟ್ ನಟರನ್ನು ಹೊಂದಿದ್ದಾರೆ. ಅವರ ಮೇಲೆ ಭಾರಿ ಕ್ರಶ್‌ ಹೊಂದಿದ್ದರು ಶ್ವೇತಾ. ಬಾಲಿವುಡ್‌ನ ಪರ್ಫೇಕ್ಟನಿಸ್ಟ್‌ ಆಮೀರ್‌ ಖಾನ್‌ ಒಬ್ಬರು. 

ಶ್ವೇತಾ ಬಚ್ಚನ್ ಪ್ರತಿ ಬರ್ತ್‌ಡೇಗೆ ಲೆಟರ್‌ಕಳುಹಿಸುತ್ತಿದ್ದರಂತೆ ಆಮೀರ್‌ ಖಾನ್.
ಬಾಲಿವುಡ್‌ನ ಪರ್ಫೇಕ್ಷನಿಸ್ಟ್‌ ಆಮೀರ್‌ ಖಾನ್‌ ಶ್ವೇತಾರ ಫೇವರೇಟ್ ನಟ. ಅವರ ಮೇಲೆ ಭಾರಿ ಕ್ರಶ್‌ ಹೊಂದಿದ್ದರು ಬಚ್ಚನ್‌ ಪುತ್ರಿ.
Tap to resize

3 ಈಡಿಯಟ್ಸ್ ನಟ ಆಮೀರ್‌ ತಮ್ಮಮೇಲಿನಶ್ವೇತಾ ಹೊಂದಿರುವ ಕ್ರಶ್‌ ಬಗ್ಗೆ ತಿಳಿದಾಗ ಏನು ಮಾಡಿದ್ದರು ಗೊತ್ತಾ?
ಶ್ವೇತಾರ ಪ್ರತಿ ಬರ್ತ್‌ಡೇಯಂದು ಅವರಿಗೆ ಬರ್ತ್‌ಡೇ ನೋಟ್‌ಗಳನ್ನು ಕಳುಹಿಸಲು ಫ್ರಾರಂಭಿಸಿದ್ದರು ಆಮೀರ್‌ ಖಾನ್‌ ಎಂಬ ವಿಷಯವನ್ನು ಅಭಿ‍ಷೇಕ್‌ ಬಚ್ಚನ್‌ ಹಂಚಿಕೊಂಡಿದ್ದಾರೆ.
ಅವರು ಬೋಸ್ಟನ್‌ನಲ್ಲಿ ಓದುತ್ತಿದ್ದಾಗ, ಶಾರೂಖ್ ಖಾನ್ ಮತ್ತು ಅಮೀರ್ ಖಾನ್ ಅವರ ಲೈವ್‌ ಶೋ ನೋಡಲು ಶ್ವೇತಾ ಲಿಮೋಸಿನ್ ಮತ್ತು ಡ್ರೈವರ್ ಅನ್ನು ಒಂದೂವರೆ ಗಂಟೆಗಳ ಕಾಲ ಬುಕ್‌ ಮಾಡುವಂತೆ ಮಾಡಿದ್ದರು,ಎಂದು ಅಭಿಷೇಕ್ ಅವರು ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಹೇಳಿದ್ದರು.
ಶ್ವೇತಾ ಅವರು ಸಲ್ಮಾನ್ ಖಾನ್ ಅವರ ಮೇಲೂ ಭಾರಿ ಕ್ರಶ್‌ ಹೊಂದಿದ್ದರು. ಮೈನೆ ಪ್ಯಾರ್ ಕಿಯಾ ಬಿಡುಗಡೆಯಾದಾಗ ಹತ್ತನೇ ತರಗತಿಯಲ್ಲಿ ಬೋರ್ಡಿಂಗ್ ಶಾಲೆಯಲ್ಲಿದ್ದ ಅವರು ವಿಸಿರ್‌ನಲ್ಲಿ ಸಿನಿಮಾ ನೋಡಿದ್ದರು. ಸಲ್ಮಾನ್‌ಗೆ ಫ್ರೆಂಡ್ ಕ್ಯಾಪ್ ತರುವಂತೆ ಶ್ವೇತಾ ಮಾಡಿದ್ದರಂತೆ.
ಕರಣ್ ಜೋಹರ್ ಟಾಕ್ ಶೋ ಕಾಫಿ ವಿಥ್ ಕರಣ್ ನಲ್ಲಿ ಶ್ವೇತಾ ಮತ್ತು ಅಭಿಷೇಕ್‌ ಕಾಣಿಸಿಕೊಂಡಾಗ ಈ ವಿಷಯಗಳನ್ನು ಹಂಚಿಕೊಂಡಿದ್ದರು.
ನಮಗೆ ಶಾಲೆಯಲ್ಲಿ ಸಿನಿಮಾಗಳನ್ನು ನೋಡಲುಪರ್ಮಿಷನ್‌ ಇರುತ್ತಿರಲಿಲ್ಲ, ಆದ್ದರಿಂದ ನಾನು ಟೇಪ್ ರೆಕಾರ್ಡರ್‌‌ನೊಂದಿಗೆ ಕುಳಿತುಕೊಂಡಿದ್ದೇನೆ. ಇಡೀ ಸಿನಿಮಾವನ್ನು ಆಡಿಯೊ ಕ್ಯಾಸೆಟ್‌ನಲ್ಲಿ ರೆಕಾರ್ಡ್ ಮಾಡಿದ್ದೆ ಮತ್ತು ನಾನು ಅವನನ್ನು ಪ್ರೀತಿಸುತ್ತಿದ್ದೆ ಮತ್ತು 'ಫ್ರೆಂಡ್' ಎಂದು ಹೇಳುವ ಸಣ್ಣ ಕ್ಯಾಪ್ ಧರಿಸಲು ನಾನು ಬಯಸುತ್ತಿದ್ದೆ' ಎಂದು ಶ್ವೇತಾ ಬಹಿರಂಗಪಡಿಸಿದರು.
ಅವಳಿಗೆ ಮತ್ತು ಕಸಿನ್ಸ್‌ ಅನೇಕ ಕ್ಯಾಪ್‌ಗಳನ್ನು ಮುಂಬಯಿಯಿಂದ ಲಂಡನ್‌ಗೆ ತೆಗೆದುಕೊಂಡು ಹೋಗಿದ್ದೆ ಎಂದು ಅಭಿಷೇಕ್‌ ಹೇಳಿದರು.
'ಕ್ಯಾಪ್‌ ಅನ್ನು ದಿಂಬಿನಡಿ ಇಟ್ಟುಕೊಂಡು ಮಲಗುತ್ತಿದ್ದೆ' ಎಂದು ಹೇಳಿದ್ದರು ಶ್ವೇತಾ ಬಚ್ಚನ್‌.

Latest Videos

click me!