ಆಕಾಂಕ್ಷಾ ಸಿಂಗ್ 'ಮಳ್ಳೀರಾವಾ', 'ದೇವದಾಸ್' ಚಿತ್ರಗಳ ಮೂಲಕ ತೆಲುಗಿನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ತಮಿಳು, ಕನ್ನಡ, ಹಿಂದಿಯಲ್ಲೂ ಸಿನಿಮಾಗಳನ್ನು ಮಾಡ್ತಿದ್ದಾರೆ. ಈಗ 'ಷಷ್ಟಿಪೂರ್ತಿ' ಸಿನಿಮಾದ ಮೂಲಕ ಮತ್ತೆ ತೆಲುಗು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ರಾಜೇಂದ್ರ ಪ್ರಸಾದ್, ಅರ್ಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ರೂಪೇಶ್, ಆಕಾಂಕ್ಷಾ ಸಿಂಗ್ ಜೋಡಿಯಾಗಿ ನಟಿಸಿದ್ದಾರೆ. ಪವನ್ ಪ್ರಭಾ ನಿರ್ದೇಶನದ ಈ ಚಿತ್ರವನ್ನು ರೂಪೇಶ್ ನಿರ್ಮಿಸಿದ್ದಾರೆ. ಈ ತಿಂಗಳ 30ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.