ಕ್ಲಾಸ್‌ 1 ಉದ್ಯೋಗ ತೊರೆದು ಕನಸಿನ ಬೆನ್ನತ್ತಿದ ಜಾಗೃತಿ, UPSCಯಲ್ಲಿ 2ನೇ ರ‍್ಯಾಂಕ್!

First Published | Oct 14, 2021, 5:39 PM IST

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ ಸೆಪ್ಟೆಂಬರ್ 24 ರಂದು ಹೊರಬಿದ್ದಿದೆ. ಅಂತಿಮ ಫಲಿತಾಂಶದಲ್ಲಿ ಒಟ್ಟು 761 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಏಷ್ಯಾನೆಟ್‌ ನ್ಯೂಸ್‌(Asianet News) UPSC ಆಯ್ಕೆ ಮಾಡಿದ 100 ಅಭ್ಯರ್ಥಿಗಳೊಂದಿಗೆ ಸಂವಾದ ನಡೆಸಿದೆ. ಈ ಸರಣಿ ಸಂದರ್ಶನದ(UPSC Interview) ಮೂಲಕ ಅಭ್ಯರ್ಥಿಗಳ ಯಶಸ್ಸಿನ ಗುಟ್ಟು ಅನಾವರಣಗೊಳಿಸಿದೆ. ಈ ಸರಣಿಯ 7ನೇ ಸಂಚಿಕೆಯಲ್ಲಿ 2ನೇ ಶ್ರೇಣಿಯನ್ನು ಪಡೆದ ಜಾಗೃತಿ ಅವಸ್ಥಿಯವರ(Jagrati Avasthi) ಸಂವಾದ ನಡೆಸಲಾಗಿದೆ. ಅವಳು ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHEL) ನಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 2019 ರಲ್ಲಿ, ಯುಪಿಎಸ್‌ಸಿ(UPSC) ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನವನ್ನು ಮಾಡಿದರು, ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ, ಆದ್ದರಿಂದ ಕೆಲಸವನ್ನು ತೊರೆದರು. ಎರಡನೇ ಪ್ರಯತ್ನದಲ್ಲಿ, ಅವರು ದೇಶದಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
 

ಬಿಟೆಕ್ ನಂತರ ಕೆಲಸ ಶುರುವಾಯಿತು

ಛತ್ರಪುರದಲ್ಲಿ ಜನಿಸಿದ ಜಾಗೃತಿ, ಮಧ್ಯಪ್ರದೇಶದ(madhya Pradesh) ಭೋಪಾಲ್(Bhopal) ನಿವಾಸಿ. ಜಾಗೃತಿ ತನ್ನ ಆರಂಭಿಕ ಶಿಕ್ಷಣವನ್ನು ಮಹರ್ಷಿ ವಿದ್ಯಾ ಮಂದಿರ, ರತನ್ ಪುರ್, ಭೋಪಾಲ್ ನಲ್ಲಿ ಮುಗಿಸಿದರು. ಅವರು ಬಾಲ್ಯದಿಂದಲೂ ಅಧ್ಯಯನದಲ್ಲಿ ಬಹಳಷ್ಟುಆಸಕ್ತಿ ಹೊಂದಿದ್ದರು. ಅವರು ಮೌಲಾನಾ ಆಜಾದ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿಟೆಕ್ ಮಾಡಿದ್ದಾರೆ. ಇದಾದ ನಂತರ ಅವರು ಬಿ.ಟೆಕ್ ಮಾಡಿ BHEL ನಲ್ಲಿ ಕೆಲಸ ಆರಂಭಿಸಿದರು.
 

ಕಾರ್ಮಿಕ ವರ್ಗಕ್ಕೆ ಸಹಾಯ ಮಾಡಲು ಬಯಸುತ್ತೇನೆ

2019 ರ ಜನವರಿಯಲ್ಲಿ, ಈ ಕೆಲಸ ಬಿಟ್ಟು ಈಗ ಸಾಮಾಜಿಕ ಸೇವೆಗೆ ಸಂಬಂಧಿಸಿದ ಕೆಲಸ ಮಾಡಬೇಕೆಂಬ ಯೋಚನೆ ಬಂತು. ನಂತರ ಅವರು UPSC ಗೆ ತಯಾರಿ ಆರಂಭಿಸಿದರು. ಇದಕ್ಕೆ ಕಾರಣವನ್ನು ವಿವರಿಸಿದ ಜಾಗೃತಿ, ತಾನು ಕೆಲಸ ಮಾಡುತ್ತಿದ್ದಾಗ, ಕಾರ್ಮಿಕ ವರ್ಗದ ಮಹಿಳೆಯರು ತನ್ನ ಸುತ್ತಮುತ್ತ ಇರುತ್ತಿದ್ದರು. ಹೀಗಿರುವಾಗ ಅವರ ಸಮಸ್ಯೆ ಹೇಗೆ ಪರಿಹರಿಸಬಹುದು ಎಂದು ಯೋಚಿಸಿದೆ. ಸಿಕ್ಕಿದ ಉತ್ತರವೇ ಯುಪಿಎಸ್‌ಸಿ. ಜಾಗೃತಿ ತನ್ನ ಸಿವಿಲ್ ಸರ್ವಿಸಸ್ ಪರೀಕ್ಷೆಯ ತಯಾರಿಗೆ ತನ್ನ ಸಂಪೂರ್ಣ ಗಮನವನ್ನು ನೀಡಿದರು ಮತ್ತು ತನ್ನ ಗುರಿಯತ್ತ ಗಮನ ಹರಿಸಿದರು. ಈಗ ಐಎಎಸ್ ಆಗುವ ತನ್ನ ಕನಸು ಪೂರೈಸಿದ್ದಾರೆ.

Tap to resize

ಪರೀಕ್ಷೆಗೆ ಸಿದ್ಧತೆ ಹೀಗಿತ್ತು

ಮೊದಲ ಪ್ರಯತ್ನದಲ್ಲಿ ವಿಫಲವಾದ ನಂತರ ಅವರು ತನ್ನ ನ್ಯೂನತೆಗಳನ್ನು ಸರಿಪಡಿಸಿ, ಎರಡನೇ ವರ್ಷದ ಪರೀಕ್ಷೆ ಎದುರಿಸಲು ಏನೆಲ್ಲಾ ಅವಶದಯಕತೆ ಎಂಂಬುವುದನ್ನು ಅರಿಯತುಕೊಂಡೆ.  ಇದಕ್ಕೆ ಸ್ಥಿರತೆಯ ಜೊತೆಗೆ ಸಾಕಷ್ಟು ಪರಿಷ್ಕರಣೆ ಅಗತ್ಯವಿತ್ತು. ಕೂಡಲೇ ತಮ್ಮ ಸಿದ್ಧತೆಯಲ್ಲಿ ಅವರು ಈ ವಿಷಯಗಳನ್ನು ಸರಿಪಡಿಸಿದರು. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಮತ್ತು ಪಠ್ಯಕ್ರಮವನ್ನು ಒಟ್ಟಿಗೆ ಓದುತ್ತಿದ್ದರು, ಆದ್ದರಿಂದ ಯುಪಿಎಸ್‌ಸಿಯಲ್ಲಿ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಎಂಬುದನ್ನು ಅರ್ಥೈಸಿಕೊಂಡರು. ತನ್ನದೇ ಆದ ಪುಸ್ತಕ ಪಟ್ಟಿಯನ್ನು ಮಾಡಿದರು. ಅಣಕು ಪರೀಕ್ಷೆಗಳನ್ನು ನೀಡಿದರು. ಅಭ್ಯಾಸ ಮಾಡಿ, ತಪ್ಪುಗಳನ್ನು ಸರಿಪಡಿಸುತ್ತಲೇ ಬಂದರು.
 

ಕೋವಿಡ್ ಕಾಲದಲ್ಲಿ ಸಮಯದ ಸದುಪಯೋಗ

ಕೋವಿಡ್ ಸೋಂಕು ಹರಡಿಕೊಂಡ ಅವರ ಸಂಪೂರ್ಣ ಗಮನ ತನ್ನ ಮತ್ತು ಕುಟುಂಬದ ಆರೋಗ್ಯದ ಮೇಲೆ ಇತ್ತು, ಇದರಿಂದ ಯಾರ ಆರೋಗ್ಯವೂ ಹದಗೆಡಬಾರದು ಎಂದು ವಿಶೇಷ ಗಮನಹರಿಸಲಾಯ್ತು. ಮನೆಯಲ್ಲಿ ಯಾರಿಗಾದರೂ ಕೋವಿಡ್ ಬಂದರೆ, ಇದರಿಂದ ಸಮಯ ಹಾಳಾಗಲಿದೆ ಎಂಬ ವಿಚಾರ ಗಮನದಲ್ಲಿಟ್ಟುಕೊಂಡರು. ಐಸೋಲೇಷನ್ ಇದ್ದಿದ್ದರಿಂದ ಸಿದ್ಧತೆ ನಡೆಸಲು ಮತ್ತಷ್ಟು ಸಹಾಯವಾಯ್ತು. ಈ ಸಮಯ ಬಳಸಿಕೊಂಡು ಅವರು ಸಿದ್ಧತೆ ನಡೆಸಿದರು.

ಹೀಗೆ ತನ್ನನ್ನು ತಾನು ಪ್ರೇರೇಪಿಸುತ್ತಿದ್ದರು

ಬಾಲ್ಯದಲ್ಲಿ ನಾನು ಕೆಲಸ ಮಾಡಬೇಕು, ನನ್ನ ವೃತ್ತಿಯನ್ನು ಮಾಡಬೇಕು ಎಂಬ ಒಂದೇ ಒಂದು ಆಲೋಚನೆ ಇತ್ತು ಎಂದು ಜಾಗೃತಿ ಹೇಳುತ್ತಾರೆ. ಆದರೆ ಮಾಡುತ್ತಿರುವ ಕೆಲಸದ ಬಗ್ಗೆ ಆಸಕ್ತಿಯಿರಲಿಲ್ಲ. ಕೆಲಸವನ್ನು ಬಿಟ್ಟಾಗ, ಆದಾಯದ ಮೂಲವೂ ನಿಂತು ಹೋಗಿತ್ತು. ಆದ್ದರಿಂದ ವಿದ್ಯಾರ್ಥಿಗಳು ಹೇಗೆ ಜೀವನದಲ್ಲಿ ಶಿಸ್ತಿನ್ನು ಪಾಲಿಸುತ್ತಾರೋ ಅದೇ ರೀತಿಯಲ್ಲಿ ಅವರು ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಉದ್ಯೋಗವನ್ನು ತೊರೆದ ಕಾರಣ ಆದಾಯದ ಮೂಲ ನಿಂತುಹೋಯಿತು. ಕೋವಿಡ್ ಸೋಂಕಿನ ಸಮಯದಲ್ಲಿ, ಕೆಲಸವನ್ನು ಬಿಡಬಾರದೆಂಬ ಕಲ್ಪನೆಯೂ ಬಂತು. ನೀವು ಯಾವ ಕಾರಣಕ್ಕಾಗಿ ತಯಾರಿ ಮಾಡುತ್ತಿದ್ದೀರಿ, ಅದನ್ನು ನೋಡಿ, ನೀವು ಏಕೆ ಅಧ್ಯಯನ ಮಾಡುತ್ತಿದ್ದೀರಿ ಎಂದು ಯೋಚಿಸಿ? ಇದು ನಿಮ್ಮನ್ನು ಪ್ರೇರೇಪಿಸುವ ಏಕೈಕ ಮಾರ್ಗವಾಗಿದೆ ಎಂದಿದ್ದಾರೆ.

ಹತಾಶೆಯಾದಾಗ ಒಂದು ತಾಸು ಹೆಚ್ಚು ಓದುತ್ತಿದ್ದೆ

ನಿರಾಶೆ ಸಹಜ. ಜುಲೈ 2019 ರಿಂದ ಸೆಪ್ಟೆಂಬರ್ 2021 ರವರೆಗೆ, ಎರಡೂವರೆ ವರ್ಷಗಳ ಅವಧಿಯಲ್ಲಿ, ಕೆಲವೊಮ್ಮೆ ಕೋರ್ಸ್ ಪೂರ್ಣಗೊಳ್ಳುವುದಿಲ್ಲ, ಉತ್ತಮ ಅಂಕಗಳು ಬರುವುದಿಲ್ಲ ಎಂಬ ಭಾವನೆ ಹುಟ್ಟಿಕೊಳ್ಳುತ್ತಿತ್ತು. ಏನು ಕೊರತೆಯಾಗಿದೆ ಎಂದು ನೋಡುತ್ತಿದ್ದೆ. ಹೆಚ್ಚು ನಿರಾಸೆಯಾದ ದಿನ ಒಂದು ಗಂಟೆ ಹೆಚ್ಚು ಅಧ್ಯಯನ ಮಾಡುತ್ತಿದ್ದರು. ಇದರಿಂದ ಒಂದು ರೀತಿಯ ಸಮಾಧಾನವಾಗುತ್ತಿತ್ತು. ಮನಸ್ಸಿಗೆ ತೃಪ್ತಿ ಸಿಗುತ್ತಿತ್ತು.

ನಾಲ್ಕು ವರ್ಷಗಳಿಂದ ಮನೆಯಲ್ಲಿ ಟಿವಿ ಇಲ್ಲ

ಜಾಗೃತಿ ತನ್ನ ಯಶಸ್ಸಿನ ಕ್ರೆಡಿಟ್ ತಾಯಿ ಮಧುಲತಾ ಅವಸ್ಥಿ-ತಂದೆ ಸುರೇಶ್ ಚಂದ್ರ ಅವಸ್ಥಿ ಮತ್ತು ತನ್ನ ಶಿಕ್ಷಕರು ಮತ್ತು ಸ್ನೇಹಿತರಿಗೆ ನೀಡುತ್ತಾರೆ. ಇವರೆಲ್ಲರೂ ತನ್ನನ್ನು ತುಂಬಾ ಬೆಂಬಲಿಸಿದರು ಎಂದು ಹೇಳಿದ್ದಾರೆ. 4 ವರ್ಷಗಳಿಂದ ತನ್ನ ಮನೆಯಲ್ಲಿ ಟಿವಿ ಇಲ್ಲ ಎಂದಿದ್ದಾರೆ ಜಾಗೃತಿ. ಮೊದಲ ಎರಡು ವರ್ಷ ಸಹೋದರ ಓದುತ್ತಿದ್ದಾಗ, ಅವನಿಗೆ ಯಾವುದೇ ಸಮಸ್ಯೆ ಇರಬಾರದು ಎಂದು ಟಿವಿ ಇರಿಸಿಕೊಳ್ಳಲಿಲ್ಲ.ಮುಂದಿನ ಎರಡು ವರ್ಷಗಳಿಗೆ ತಾನು ತಯಾರಿ ನಡೆಸುತ್ತಿದ್ದೆ, ಪರೀಕ್ಷೆಗೆ ತಯಾರಿ ಮಾಡುವಲ್ಲಿ ಯಾವುದೇ ತೊಂದರೆಯಾಗಬಾರದೆಂದು ಟಿವಿ ತೆಗೆದುಕೊಳ್ಳಲಿಲ್ಲ. ಅವರ ಸಹೋದರ ಸುಯಾಶ್ ಅವಸ್ಥಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾರೆ.
 

ಹೇಗೆ ಅಧ್ಯಯನ ಮಾಡುವುದು?

ಯುಪಿಎಸ್‌ಸಿ ಕ್ರ್ಯಾಕ್ ಮಾಡಲು ಒಬ್ಬರು ಹೇಗೆ ಅಧ್ಯಯನ ಮಾಡಬೇಕೆಂದು ಅರ್ಥಮಾಡಿಕೊಳ್ಳಬೇಕು ಎಂದು ಜಾಗೃತಿ ಹೇಳುತ್ತಾರೆ. ಪ್ರತಿದಿನ ಅಧ್ಯಯನ ಮಾಡಿ, ಇದಕ್ಕೆ ಸ್ಥಿರತೆ ಮುಖ್ಯ. ಪರಿಷ್ಕರಣೆಗೆ ಗಮನ ಕೊಡಿ. ನಿಮ್ಮ ತಪ್ಪುಗಳನ್ನು ಗಮನಿಸಿ. ಅಭ್ಯಾಸ ಮುಂದುವರಿಸಿ, ಪರೀಕ್ಷೆಗಳನ್ನು ತೆಗೆದುಕೊಳ್ಳಿ, ಬಳಿಕ ಆ ತಪ್ಪುಗಳನ್ನು ಸರಿಪಡಿಸಿ. ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮನ್ನು ನಂಬುವುದು. ನೀವು ಸಕಾರಾತ್ಮಕ ಮನೋಭಾವದಿಂದ ಮುನ್ನಡೆದರೆ, ನೀವು ಖಂಡಿತವಾಗಿಯೂ ನಿಮ್ಮ ಗುರಿಯನ್ನು ತಲುಪುತ್ತೀರಿ. ಕೇವಲ ತಪ್ಪುಗಳ ಬಗ್ಗೆ ಕೊರಗುವ ಬದಲು, ಅವುಗಳನ್ನು ಸರಿಪಡಿಸಿ. ಪದೇ ಪದೇ ಖಿನ್ನತೆಗೆ ಒಳಗಾಗಬೇಡಿ ಮತ್ತು ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಇದರ ಹೊರತಾಗಿ, ಪರೀಕ್ಷೆಯನ್ನು ಜೀವನವೆಂದು ತೆಗೆದುಕೊಳ್ಳುವುದು ಸರಿಯಲ್ಲ, ಏಕೆಂದರೆ ಪರೀಕ್ಷೆಯು ನಿಮ್ಮ ಜೀವನದ ಒಂದು ಸಣ್ಣ ಭಾಗ ಮಾತ್ರ. ಯಾವಾಗಲೂ ಸಕಾರಾತ್ಮಕವಾಗಿರಿ. ನೀವು ಇಲ್ಲಿ ಯಶಸ್ವಿಯಾಗದಿದ್ದರೆ, ಬೇರೆ ಕಡೆ ಇದು ಉಪಯೋಗಕ್ಕೆ ಬರುತ್ತದೆ. 

Latest Videos

click me!