ಎರಡು ಬಾರಿ ವಿಫಲವಾದರೂ ಎದೆಗುಂದಲಿಲ್ಲ, ಮೂರನೇ ಬಾರಿ ಯತ್ನಿಸಿದಾಕೆಗೆ 38ನೇ Rank
ಯುಪಿಎಸ್ ಸಿ ಪರೀಕ್ಷೆಯಲ್ಲಿ ವರುಣಾ ಅಗರ್ವಾಲ್ 38 ನೇ Rank ಪಡೆದಿದ್ದಾರೆ. ಐಎಎಸ್(IAS) ಆಗಬೇಕೆಂಬ ಅವರ ಕನಸು ಈ ಮೂರನೇ ಪ್ರಯತ್ನದಲ್ಲಿ ಈಡೇರಿದೆ. ಈ ಮೊದಲು ಅವರು ಎರಡು ಬಾರಿ ಪ್ರಯತ್ನಿಸಿದ್ದರಾದರೂ, ಯಶಸ್ವಿಯಾಗಲಿಲ್ಲ. ಕೆಲವೊಮ್ಮೆ ಈ ಮಾರ್ಗ ಬಹಳ ಕಷ್ಟಕರವೆಂದು ಅವರಿಗನಿಸುತ್ತಿತ್ತು. ವಿಶೇಷವಾಗಿ ಮೊದಲ ಪ್ರಯತ್ನದಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿರಲಿಲ್ಲ. ಆದರೆ, ಅವರು ಧೈರ್ಯ ಕಳೆದುಕೊಳ್ಳಲಿಲ್ಲ. ಎರಡನೇ ಪ್ರಯತ್ನದಲ್ಲಿ, ಸಂದರ್ಶನ (UPSC Interview) ನೀಡಿದರು, ಆದರೆ ಕೇವಲ ಮೂರು ಅಂಕಗಳಿಂದ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಸಿಗಲಿಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಗೂ ಗೆಳೆಯರು ಅವರಿಗೆ ಧೈರ್ಯ ತುಂಬಿದರು.