ತಾಯಿಗಾದ ಲೈಂಗಿಕ ಕಿರುಕುಳವೇ IPS ಆಗಲು ದಾರಿ ತೋರಿಸಿತು, ಕೋಚಿಂಗ್ ಇಲ್ಲದೆ UPSC ಪಾಸಾದ ಅಧಿಕಾರಿ ಇವರು

Published : Jun 07, 2025, 03:06 PM IST

ಯಾವುದೇ ತರಬೇತಿಯಿಲ್ಲದೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಶಾಲಿನಿ ಅಗ್ನಿಹೋತ್ರಿ ಅವರ ಯಶಸ್ಸಿನ ಹಿಂದಿನ ಕಥೆ. 2011 ರಲ್ಲಿ 285 ನೇ ರ‍್ಯಾಂಕ್ ಪಡೆದು ಐಪಿಎಸ್‌ಗೆ ಆಯ್ಕೆಯಾದರು. 

PREV
16
ಯಶಸ್ಸಿನ ಹಿಂದಿನ ಕಥೆ

Success Story: ಯುಪಿಎಸ್‌ಸಿ ನಾಗರಿಕ ಸೇವೆಯಂತಹ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅನೇಕ ವಿದ್ಯಾರ್ಥಿಗಳು ವರ್ಷಟ್ಟಲೇ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಯಾವುದೇ ತರಬೇತಿಯಿಲ್ಲದೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದದವರ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ ಶಾಲಿನಿ ಅಗ್ನಿಹೋತ್ರಿ ಅವರ ಹೆಸರು ಕೇಳಿಬರುತ್ತದೆ. ಆದರೆ ಅವರ ಯುಪಿಎಸ್‌ಸಿ ಪ್ರಯಾಣ ಸುಲಭವಾಗಿರಲಿಲ್ಲ. ಅವರ ಯಶಸ್ಸಿನ ಹಿಂದಿನ ಕಥೆಯನ್ನು ವಿವರವಾಗಿ ತಿಳಿಯೋಣ ಬನ್ನಿ...

26
ತರಬೇತಿಯಿಲ್ಲದೆ UPSCಯಲ್ಲಿ ಉತ್ತೀರ್ಣ

ಯುಪಿಎಸ್‌ಸಿ (UPSC) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಜನಪ್ರಿಯ IAS ಮತ್ತು IPSಗಳ ಜರ್ನಿಯನ್ನು ಖಂಡಿತ ಓದಿರುತ್ತೀರಿ. ಈ ಸರಣಿಯಲ್ಲಿ ನೀವು IPS ಅಧಿಕಾರಿ ಶಾಲಿನಿ ಅಗ್ನಿಹೋತ್ರಿಯವರ ಯಶಸ್ಸಿನ ಕಥೆಯನ್ನು ಇಲ್ಲಿ ನೋಡಬಹುದು . ಶಾಲಿನಿ ಯಾವುದೇ ತರಬೇತಿಯಿಲ್ಲದೆ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಅಧ್ಯಯನಕ್ಕಾಗಿ ಏನೆಲ್ಲಾ ತಯಾರಿ ನಡೆಸಿದರು ಎಂಬುದನ್ನು ನೀವು ಇಲ್ಲಿ ತಿಳಿಯಬಹುದು.

36
ಐಪಿಎಸ್ ಶಾಲಿನಿ ಅಗ್ನಿಹೋತ್ರಿಯವರ ಯಶೋಗಾಥೆ

ಶಾಲಿನಿ ಅಗ್ನಿಹೋತ್ರಿ ಮೂಲತಃ ಹಿಮಾಚಲ ಪ್ರದೇಶದ ಉನಾದವರು. ಅವರು ಧರ್ಮಶಾಲಾದಲ್ಲಿ ಶಾಲಾ ಶಿಕ್ಷಣ ಪಡೆದರು. ಶಾಲಿನಿ ಮೊದಲಿನಿಂದಲೂ ಅಧ್ಯಯನದಲ್ಲಿ ಟಾಪರ್ ಆಗಿದ್ದಾರೆ. ಶಾಲಿನಿ ಅವರು 10 ನೇ ತರಗತಿಯಲ್ಲಿ 92 ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ ಎಂದು ಹೇಳುತ್ತಾರೆ. ಆದರೆ, 12 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅವರ ಫಲಿತಾಂಶ 77 ಪ್ರತಿಶತವಾಗಿತ್ತು.

46
ಕೃಷಿ ಪದವಿ

ಶಾಲಾ ಶಿಕ್ಷಣದ ನಂತರ, ಶಾಲಿನಿ ಹಿಮಾಚಲ ವಿಶ್ವವಿದ್ಯಾಲಯದಿಂದ ಕೃಷಿಯಲ್ಲಿ ಪದವಿ ಪಡೆದರು. ನಂತರ ಅವರು ಎಂಎಸ್ಸಿ ಮಾಡಿದರು. ಯುಜಿ ಮತ್ತು ಪಿಜಿ ನಂತರ, ಶಾಲಿನಿ ನಾಗರಿಕ ಸೇವೆಗೆ ಸೇರಲು ಬಯಸಿದ್ದರು. ಇದಾದ ನಂತರ ಅವರು ಯುಪಿಎಸ್ಸಿಗೆ ತಯಾರಿ ಪ್ರಾರಂಭಿಸಿದರು.

56
2011 ರಲ್ಲಿ 285 ನೇ ರ‍್ಯಾಂಕ್

ಯುಪಿಎಸ್‌ಸಿಗೆ ತಯಾರಿ ನಡೆಸಲು ತಾನು ಯಾವುದೇ ತರಬೇತಿಯನ್ನು ಪಡೆದಿಲ್ಲ ಎಂದು ಶಾಲಿನಿ ಹೇಳುತ್ತಾರೆ. ಆನ್‌ಲೈನ್ ತರಗತಿಗಳು ಮತ್ತು ಸ್ವಯಂ ಅಧ್ಯಯನದ ಮೂಲಕ ಶಾಲಿನಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಶಾಲಿನಿ 2011 ರಲ್ಲಿ ಯುಪಿಎಸ್‌ಸಿ ಸಿಎಸ್‌ಇಯಲ್ಲಿ 285 ನೇ ರ‍್ಯಾಂಕ್ ಪಡೆದು, ಐಪಿಎಸ್‌ಗೆ ಆಯ್ಕೆಯಾದರು.

66
ತಾಯಿಯೊಂದಿಗೆ ಅನುಚಿತ ವರ್ತನೆ

ಒಮ್ಮೆ ಆಕೆಯ ತಾಯಿ ಬಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದರು. ಈ ಘಟನೆಯ ನಂತರ, ಶಾಲಿನಿ ಅಗ್ನಿಹೋತ್ರಿ ಅಧಿಕಾರಿಯಾಗಲು ನಿರ್ಧರಿಸಿದರು. 2011 ರಲ್ಲಿ ಐಪಿಎಸ್‌ಗೆ ಆಯ್ಕೆಯಾದ ನಂತರ, ಶಾಲಿನಿ 2012 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

Read more Photos on
click me!

Recommended Stories