ಯುಪಿಎಸ್‌ಸಿ ಪಾಸಾದ 20 ಕನ್ನಡಿಗರು! ಟಾಪರ್‌ಗಳ ಶೈಕ್ಷಣಿಕ ಹಿನ್ನೆಲೆ ಇಲ್ಲಿದೆ ನೋಡಿ!

Published : Apr 22, 2025, 08:43 PM ISTUpdated : Apr 22, 2025, 10:19 PM IST

2024ರ UPSC ಪರೀಕ್ಷೆಯಲ್ಲಿ 1009 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 20 ಕನ್ನಡಿಗರು ಸೇರಿದ್ದಾರೆ. ವೈದ್ಯರು, ಇಂಜಿನಿಯರ್‌ಗಳು ಮತ್ತು ಕೃಷಿಕರೂ ಸೇರಿದಂತೆ ವಿವಿಧ ಹಿನ್ನೆಲೆಯ ಈ ಅಭ್ಯರ್ಥಿಗಳ ಶ್ರೇಣಿ, ಹಿನ್ನೆಲೆ ಮತ್ತು ಸಾಧನೆಯ ಕುರಿತು ತಿಳಿಯಿರಿ.

PREV
18
ಯುಪಿಎಸ್‌ಸಿ ಪಾಸಾದ 20 ಕನ್ನಡಿಗರು! ಟಾಪರ್‌ಗಳ ಶೈಕ್ಷಣಿಕ ಹಿನ್ನೆಲೆ ಇಲ್ಲಿದೆ ನೋಡಿ!

ಕೇಂದ್ರದ ಲೋಕ ಸೇವಾ ಆಯೋಗ (ಯುಪಿಎಸ್‌ಸಿ)ದಿಂದ ನಡೆಸಲಾದ 2024ನೇ ಸಾಲಿನ ಭಾರತೀಯ ನಾಗರೀಕ ಸೇವಾ ಹುದ್ದೆಗೆ ನಡೆಸಲಾದ ಪರೀಕ್ಷೆಯಲ್ಲಿ 1009 ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಇದರಲ್ಲಿ 20 ಕನ್ನಡಿಗರು ಕೂಡ ಸ್ಥಾನ ಪಡೆದಿದ್ದಾರೆ. ಕನ್ನಡಿಗರ ರ‍್ಯಾಂಕ್ ಮತ್ತು ಅವರ ಸ್ಥಳ, ಶೈಕ್ಷಣಿಕ ಹಿನ್ನೆಲೆ ಹಾಗೂ ವೃತ್ತಿಯ ಕುರಿತ ಮಾಹಿತಿ ಇಲ್ಲಿದೆ ನೋಡಿ..
 

28

ಹಾವೇರಿಯ ಡಾ. ಸಚಿನ್ ಬಸವರಾಜ ಗುತ್ತೂರು 41ರೇ ರ‍್ಯಾಂಕ್ :
ಯು‌.ಪಿ ಎಸ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ. 41 ನೇ ರ‍್ಯಾಂಕ್  ಪಡೆದ ಸಚಿನ್ ಬಸವರಾಜ ಗುತ್ತೂರ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿ ಸಚಿನ್. ವೃತ್ತಿಯಲ್ಲಿ ವೈದ್ಯರಾಗಿರುವ ಸಚಿನ್ ಬಸವರಾಜ ಗುತ್ತೂರ. ನಾಲ್ಕನೇ ಪ್ರಯತ್ನದಲ್ಲಿ ಯು.ಪಿ.ಎಸ್ ಸಿ ಪಾಸ್ ಆಗಿದದಾರೆ.

38

ಕೋಲಾರದ ಡಾ. ಮಾಧವಿ 446ನೇ ರ‍್ಯಾಂಕ್ :
ಕೋಲಾರದ ಶಿಕ್ಷಕ ದಂಪತಿಯ ಮಗಳು ಮಾಧವಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಆಗಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರದ ರವಿಕುಮಾರ್ ಹಾಗೂ ನಂದಿನಿ ದಂಪತಿಯ ಪುತ್ರಿ ಮಾಧವಿ 446ನೇ ರ‍್ಯಾಂಕ್  ಪಡೆದಿದ್ದಾರೆ. ಮಾಧವಿ MBBS ಮಾಡಿ, ವೈದ್ಯಕೀಯ ವೃತ್ತಿ ಮಾಡುತ್ತಿದ್ದರು. ಇದರ ಜೊತೆಗೆ ನಿರಂತರ ಅಭ್ಯಾಸದ ಮೂಲಕ ಮೂರನೇ ಪ್ರಯತ್ನದಲ್ಲಿ UPSC ಪಾಸ್ ಆಗಿದ್ದಾರೆ.

48

ವಿಜಯಪುರದ ಮಹೇಶ ಮಡಿವಾಳ 482ನೇ ರ‍್ಯಾಂಕ್:
ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಾಸಾಗುವ ಮೂಲಕ ಗಮನ ಸೆಳೆದಿದ್ದಾರೆ. ಮಹೇಶ್ ಮಡಿವಾಳ್ 482ನೇ ರ‍್ಯಾಂಕ್  ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ‌. ಕಳೆದ ನಾಲ್ಕು ವರ್ಷಗಳಿಂದ ಮಡಿಕೇಶ್ವರ ಆರೋಗ್ಯ ಕೇಂದ್ರದಲ್ಲಿ ಮಹೇಶ ಮಡಿವಾಳ್ ವೈದ್ಯಾಧಿಕಾರಿಯಾಗಿ ಕೆಲಸ ಮಾಡ್ತಿದ್ದು, ಮೂರು ಬಾರಿ UPSC ಪರೀಕ್ಷೆ ಎದುರಿಸಿ ಈಗ 482ನೇ ರ್ಯಾಂಕ್ ಪಡೆದು ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

58

ಬಾಗಲಕೋಟೆ ಪಾಂಡುರಂಗ 529ನೇ ರ‍್ಯಾಂಕ್ :
ಯುಪಿಎಸ್ಸಿ ಪರೀಕ್ಷೆ ತೇರ್ಗಡೆಯಾದ ಬಾಗಲಕೋಟೆ  ರೈತನ ಮಗ ಪಾಂಡುರಂಗ ಸದಾಶಿವ ಕಂಬಳಿ. ಯುಪಿಎಸ್ಸಿ ಪರೀಕ್ಷೆಯಲ್ಲಿ 529ನೇ ರ‍್ಯಾಂಕ್  ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅಕ್ಕಿಮರಡಿ ಗ್ರಾಮದ ಯುವಕ. ಪಾಂಡುರಂಗ ಕಂಬಳಿ ಸದ್ಯ ಬೆಂಗಳೂರಿನಲ್ಲಿದ್ದಾರೆ. ಸೈದಾಪುರ ಗ್ರಾಮದ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ನಂತರ, ಬಾದಾಮಿ ತಾಲ್ಲೂಕಿನ ಕುಳಗೇರಿಯಲ್ಲಿನ ನವೋದಯ ಶಾಲೆಯಲ್ಲಿ ಶಿಕ್ಷಣ ಮುಗಿಸಿದ್ದಾರೆ. ಬೆಂಗಳೂರಿನ ಆರ್ ವಿ ಕಾಲೇಜನಲ್ಲಿ ಎಂಜನಿಯರ್ (E&C) ಪದವಿ ಪಡೆದಿದ್ದರು. ಪಾಂಡುರಂಗ 5 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ. ಎರಡು ಬಾರಿ ವಿಫಲವಾದ ನಂತರ ಮೂರು ವರ್ಷದಿಂದ ಯುಪಿಎಸ್‌ಸಿ ಪರೀಕ್ಷೆಗೆ ಕಠಿಣ ತಯಾರಿ ನಡೆಸಿದ್ದರು. ಕಳೆದ ಬಾರಿ ಸಂದರ್ಶನಕ್ಕೆ ಹೋಗಿದ್ದರೂ ಆಯ್ಕೆ ಆಗಿರಲಿಲ್ಲ. ದೆಹಲಿ ವೈಜಾರಾಮ್ ತರಬೇತಿ ಕೇಂದ್ರದಲ್ಲಿ ಪಡೆದಿದ್ದರು.

68

ಕೋಲಾರದ ಮಧು 544ನೇ ರ‍್ಯಾಂಕ್ :
2024ನೇ ಸಾಲಿನ UPSC ಪರೀಕ್ಷೆಯಲ್ಲಿ ಕೋಲಾರ ತಾಲೂಕು ಇರಗಸಂದ್ರ ಗ್ರಾಮದ ಮಧು ಅವರು 544ನೇ ರ‍್ಯಾಂಕ್  ಪಡೆದಿದ್ದಾರೆ. ತಂದೆ ಆನಂದ್ ಹಾಗೂ ತಾಯಿ ಸುಶೀಲಮ್ಮ ಕೃಷಿಕರು. ಬಿಎಸ್ಸಿ ಅಗ್ರಿಕಲ್ಚರ್ ಮುಗಿಸಿರುವ ಮಧು. ತನ್ನ ಐದನೇ ಪ್ರಯತ್ನದಲ್ಲಿ UPSC ಪಾಸ್ ಮಾಡಿದ್ದಾರೆ.

78

ಬಳ್ಳಾರಿ ವಿಜಯ ಕುಮಾರ 894ನೇ ರ‍್ಯಾಂಕ್ 
ಬಳ್ಳಾರಿ ಮೂಲದ ವಿಜಯಕುಮಾರ ಯುಪಿಎಸ್ಸಿ ಪರೀಕ್ಷೆ ಪಾಸಾಗಿದ್ದಾರೆ. 2ನೇ ಬಾರಿ ಯುಪಿಎಸ್ಸಿ ಪಾಸ್ ಮಾಡಿರುವ ವಿಜಯಕುಮಾರ್. ಕಳೆದ ಬಾರಿ 953ನೇ ರ‍್ಯಾಂಕ್  ಪಡೆದಿದ್ದರು. ಈ ಬಾರಿ 894ನೇ ರ‍್ಯಾಂಕ್  ಪಡೆದಿದ್ದಾರೆ. ಮೊದಲು ಡಿವೈಎಸ್ಪಿಯಾಗಿ ಪ್ರೊಬೆಷನರಿ ಮಾಡಿದ್ದು, ಇದೀಗ ಲಖನೌನಲ್ಲಿ ಇಂಡಿಯನ್ ರೈಲ್ವೆಯಲ್ಲಿ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಎರಡನೇ ಬಾರಿ ಪಾಸಾಗುವ ಮೂಲಕ ಬಳ್ಳಾರಿ ಕೀರ್ತಿ ಹೆಚ್ಚಿಸಿದ್ದಾರೆ.

88

ಕರ್ನಾಟಕದ 20 ಅಭ್ಯರ್ಥಿಗಳು UPSC ಪಾಸ್!
ಆರ್.ರಂಗ ಮಂಜು - 24 ರ‍್ಯಾಂಕ್  
ಡಾ. ಸಚಿನ್ ಬಸವರಾಜ್ ಗುತ್ತೂರು - 41 ರ‍್ಯಾಂಕ್ 
ವಿಭೋರೆ ಮೆಂದಿರಟ್ಟ -   389 ರ‍್ಯಾಂಕ್
ಬಿ.ಎಂ. ಮೇಘನಾ - ರ‍್ಯಾಂಕ್  425 
ಪ್ರತಿವ ಲಮಾ - 461 ರ‍್ಯಾಂಕ್ 
ರಾಹುಲ್ ಸಿ ಯರತ್ನೇಲಿ - 462 ರ‍್ಯಾಂಕ್ 
ಪರಮಿತ ಮಲಕರ್ - 477 ರ‍್ಯಾಂಕ್ 
ಡಾ. ಭಾನುಪ್ರಕಾಶ್ -  523 ರ‍್ಯಾಂಕ್
ಅಭಿಶಿಲ್ ಜೈಶ್ವಾಲ್ -  538 ರ‍್ಯಾಂಕ್
ಎ. ಮಧು -  544 ರ‍್ಯಾಂಕ್
ವರುಣ್ ಕೆ. ಗೌಡ -  565 ರ‍್ಯಾಂಕ್
ಭಾರತ್ ಸಿ ಯಾರಮ್ - 567 ರ‍್ಯಾಂಕ್ 
ಸ್ವಪ್ನಿಲ್ ಭಾಗಲ್ - 620 ರ‍್ಯಾಂಕ್ 
ಸಂಪ್ರೀತ್ ಸಂತೋಷ್- 652 ರ‍್ಯಾಂಕ್
ನಿಖಿಲ್ ಎಂ.ಆರ್. - 724 ರ‍್ಯಾಂಕ್
ಟಿ.ವಿಜಯ್ ಕುಮಾರ್ - 894 ರ‍್ಯಾಂಕ್
ಹನುಮಂತಪ್ಪ ನಂದಿ - 910 ರ‍್ಯಾಂಕ್
ವಿಶಾಖ ಕದಂ - 962ನೇ ರ‍್ಯಾಂಕ್
ಧನ್ಯ ಕೆ.ಎಸ್. - 982 ರ‍್ಯಾಂಕ್
ಮೋಹನ್ ಪಾಟೀಲ್ - 984 ರ‍್ಯಾಂಕ್

Read more Photos on
click me!

Recommended Stories