ಕೇಂದ್ರ ಸರ್ಕಾರಿ ನೌಕರರಿಗೆ ಭಲ್ಲೇ ಭಲ್ಲೇ, ಹೆಚ್ಚಾಗ್ತಿದೆ ಸಂಬಳ

Published : Apr 18, 2026, 08:57 PM IST

Dearness Allowance : ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಹುದಿನಗಳ ಆಸೆ ಈಡೇರಿದೆ. ಶೀಘ್ರವೇ ಕೇಂದ್ರ ಸರ್ಕಾರಿ ನೌಕರರ ಜೇಬು ತುಂಬಲಿದೆ. ತುಟ್ಟಿ ಭತ್ಯ ಏರಿಕೆಗೆ ಸರ್ಕಾರ ಅಸ್ತು ಎಂದಿದೆ. 

PREV
15
ಸರ್ಕಾರದಿಂದ ಖುಷಿ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಕ್ಕಿದೆ. ಭಾರತ ಸರ್ಕಾರ ಮಹತ್ವದ ಸುದ್ದಿ ನೀಡಿದೆ. ಮೂಲಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ (ಡಿಎ)ಯನ್ನು ಶೇಕಡಾ 2ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ಜೇಬು ತುಂಬಲಿದೆ.

25
ಡಿಎ ಶೇಕಡಾ 60 ಕ್ಕೆ ಏರಿಕೆ

ಸರ್ಕಾರದ ಈ ನಿರ್ಧಾರದ ನಂತ್ರ ನೌಕರರ ಒಟ್ಟು ತುಟ್ಟಿ ಭತ್ಯೆ ಈಗ ಶೇಕಡಾ 58ರಿಂದ ಶೇಕಡಾ 60 ಕ್ಕೆ ಏರಿಕೆಯಾದಂತಾಗಿದೆ. ಈ ಹೆಚ್ಚಳವು ಸರಿಸುಮಾರು 5 ಮಿಲಿಯನ್ ಸರ್ಕಾರಿ ನೌಕರರು ಮತ್ತು 6.5 ಮಿಲಿಯನ್ಗಿಂತಲೂ ಹೆಚ್ಚು ಪಿಂಚಣಿದಾರರಿಗೆ ನೇರವಾಗಿ ಲಾಭ ನೀಡಲಿದೆ. ಸರ್ಕಾರಿ ನೌಕರರ ಮಾಸಿಕ ಸಂಬಳ ಹಾಗೂ ಪಿಂಚಣಿಯಲ್ಲಿ ಏರಿಕೆಯಾಗಲಿದೆ.

35
ಎಷ್ಟು ಹೆಚ್ಚಾಗ್ಬಹುದು ಸಂಬಳ?

ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಎಲ್ಲ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಾಗಲಿದೆ. ನೌಕರರ ಸಂಬಳ ಏರಿಕೆ ಬಗ್ಗೆ ಹೇಳೋದಾದ್ರೆ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ 36,500 ಆಗಿದ್ದರೆ, ಶೇಕಡಾ 60 ರಷ್ಟು ತುಟ್ಟಿ ಭತ್ಯೆ ಅಂದ್ರೆ ಡಿಎ ರೂಪದಲ್ಲಿ ನೌಕರರಿಗೆ 21,900 ರೂಪಾಯಿ ಸಿಗಲಿದೆ. ಜನವರಿ 1, 2026 ರಿಂದಲೇ ಈ ಹೊಸ ತುಟ್ಟಿ ಭತ್ಯೆ ಹಣ ನೌಕರರಿಗೆ ಸಿಗಲಿದೆ. ನೌಕರರಿಗೆ ಮುಂದಿನ ತಿಂಗಳಿನಿಂದಲೇ ಹೆಚ್ಚಿದ ಸಂಬಳದ ಜೊತೆಗೆ ಹಿಂದಿನ ಮೂರು ತಿಂಗಳ ಬಾಕಿ ಸಂಬಳ ಕೂಡ ಸಿಗಲಿದೆ.

45
ಈಡೇರಿದ ಬಹು ದಿನಗಳ ಆಸೆ

ಕೇಂದ್ರ ಸರ್ಕಾರಿ ನೌಕರರು ಈ ದಿನಕ್ಕಾಗಿ ಕಾಯ್ತಿದ್ದರು. ಕೇಂದ್ರ ಸರ್ಕಾರ ತುಟ್ಟಿ ಭತ್ಯ ಹೆಚ್ಚಳ ಮಾಡಲಿದೆ ಎನ್ನುವ ಸುದ್ದಿ ಇತ್ತು. ಆದ್ರೆ ಅಧಿಕೃತ ಪ್ರಕಟಣೆ ಬಾಕಿ ಇತ್ತು. ಹೆಚ್ಚುತ್ತಿರುವ ಹಣದುಬ್ಬರದ ನಡುವೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಉದ್ಯೋಗಿಗಳಿಗೆ ನೆಮ್ಮದಿ ನೀಡಿದೆ. 8 ನೇ ವೇತನ ಆಯೋಗದ ಅಡಿಯಲ್ಲಿ ವೇತನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಉದ್ಯೋಗಿ ಸಂಘಟನೆಗಳು ಒತ್ತಾಯಿಸುತ್ತಿರುವ ಸಮಯದಲ್ಲಿ ಈ ಹೆಚ್ಚಳವಾಗಿದೆ.

55
ತುಟ್ಟಿಭತ್ಯೆಯನ್ನು ಏಕೆ ಹೆಚ್ಚಿಸಲಾಗಿದೆ?

ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಸರ್ಕಾರಿ ನೌಕರರ ವೆಚ್ಚಗಳನ್ನು ಸರಿದೂಗಿಸಲು, ಸರ್ಕಾರವು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಡೇಟಾ ಆಧರಿಸಿ ಲೆಕ್ಕಹಾಕಲಾಗುತ್ತದೆ. ಇದು ಅಗತ್ಯ ವಸ್ತುಗಳ ಬೆಲೆಗಳು ಎಷ್ಟು ಏರಿವೆ ಎಂಬುದನ್ನು ತೋರಿಸುತ್ತದೆ. ಮಾರುಕಟ್ಟೆ ಬೆಲೆಗಳು ಹೆಚ್ಚಾದಂತೆ ಸಂಬಳದ ಮೌಲ್ಯವನ್ನು ಕಾಪಾಡಿಕೊಳ್ಳಲು ಸರ್ಕಾರ ಈ ಭತ್ಯೆಯನ್ನು ಹೆಚ್ಚಿಸುತ್ತದೆ.

Read more Photos on
click me!

Recommended Stories