ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತಿದ್ದೀರಾ? ಅಪಘಾತಕ್ಕೀಡಾದ ವಾಹನ ಪತ್ತೆಹಚ್ಚಲು ಇಲ್ಲಿವೆ ಸರಳ ಟಿಪ್ಸ್!

Published : May 09, 2026, 12:47 PM IST

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ, ಮಾರಾಟಗಾರರು ಅಪಘಾತದ ಇತಿಹಾಸವನ್ನು ಮರೆಮಾಚುವ ಸಾಧ್ಯತೆ ಇರುತ್ತದೆ. ಕಾರಿನ ಬಾಡಿ ಗ್ಯಾಪ್, ಬಣ್ಣದ ವ್ಯತ್ಯಾಸ, ಬೋಲ್ಟ್‌ಗಳು ಮತ್ತು ದಾಖಲೆಗಳನ್ನು ಪರಿಶೀಲಿಸುವ ಮೂಲಕ ವಾಹನವು ಅಪಘಾತಕ್ಕೀಡಾಗಿದೆಯೇ ಎಂದು ಪತ್ತೆಹಚ್ಚಲು ಈ ಲೇಖನವು ಪ್ರಮುಖ ಸಲಹೆಗಳನ್ನು ನೀಡುತ್ತದೆ.

PREV
18
ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ಡಿಮಾಂಡ್‌

ಇಂದಿನ ದಿನಗಳಲ್ಲಿ ಹೊಸ ಕಾರುಗಳ ಬೆಲೆ ಗಗನಕ್ಕೇರಿರುವುದರಿಂದ, ಅನೇಕರು ಸೆಕೆಂಡ್ ಹ್ಯಾಂಡ್ ಕಾರುಗಳ ಖರೀದಿಗೆ ಮೊರೆ ಹೋಗುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಕಾರು ಸಿಗುವುದು ಲಾಭದಾಯಕ ನಿರ್ಧಾರವಾದರೂ, ಮಾರಾಟಗಾರರು ವಾಹನದ ನೈಜ ಸ್ಥಿತಿಯನ್ನು ಮರೆಮಾಚಿ ವಂಚಿಸುವ ಸಾಧ್ಯತೆಗಳಿರುತ್ತವೆ.

28
ಇಲ್ಲಿವೆ ಪ್ರಮುಖ ಟಿಪ್ಸ್‌

ಅದರಲ್ಲೂ ವಿಶೇಷವಾಗಿ, ಹಿಂದೆ ಅಪಘಾತಕ್ಕೀಡಾದ ಕಾರುಗಳನ್ನು ಪೇಂಟ್ ಮಾಡಿಸಿ ಹೊಸತರಂತೆ ಮಾರಾಟ ಮಾಡುವುದು ಸಾಮಾನ್ಯವಾಗಿದೆ.ಹೊರಗಿನ ಹೊಳಪಿಗೆ ಮರುಳಾಗದೆ, ವಾಹನದ ತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಕಾರು ಹಿಂದೆ ಅಪಘಾತಕ್ಕೀಡಾಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಅಂತಹ ಕೆಲವು ಪ್ರಮುಖ ಟಿಪ್ಸ್ ಇಲ್ಲಿದೆ.

38
ಬಾಡಿ ಪ್ಯಾನಲ್ ಗ್ಯಾಪ್ ಗಮನಿಸಿ

ಕಂಪನಿಯಿಂದ ಸಿದ್ಧವಾದ ಕಾರುಗಳ ಬಾನೆಟ್, ಡೋರ್‌ ಮತ್ತು ಡಿಕ್ಕಿಯ ನಡುವಿನ ಅಂತರವು (Gap) ಎಲ್ಲಾ ಕಡೆ ಸಮಾನವಾಗಿರುತ್ತದೆ. ಒಂದು ವೇಳೆ ಕಾರಿನ ಯಾವುದಾದರೂ ಒಂದು ಬದಿಯಲ್ಲಿ ಅಂತರ ಹೆಚ್ಚಿದ್ದು, ಇನ್ನೊಂದು ಕಡೆ ಕಡಿಮೆಯಿದ್ದರೆ ಅಥವಾ ಬಾಗಿಲುಗಳು ಸರಿಯಾಗಿ ಲಾಕ್ ಆಗದಿದ್ದರೆ, ಆ ಭಾಗಕ್ಕೆ ಪೆಟ್ಟಾಗಿದ್ದು ಅದನ್ನು ರಿಪೇರಿ ಮಾಡಲಾಗಿದೆ ಎಂದರ್ಥ.

48
ಬಣ್ಣದ ವ್ಯತ್ಯಾಸ ಪತ್ತೆಹಚ್ಚಿ

ಕಾರಿನ ಬಣ್ಣವನ್ನು ಹಗಲಿನ ಬೆಳಕಿನಲ್ಲಿ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಬಾಗಿಲು, ಬಾನೆಟ್ ಅಥವಾ ಬಂಪರ್‌ನ ಬಣ್ಣವು ವಾಹನದ ಇತರ ಭಾಗಗಳ ಬಣ್ಣಕ್ಕಿಂತ ಸ್ವಲ್ಪ ಭಿನ್ನವಾಗಿದ್ದರೆ ಅಥವಾ ಹೆಚ್ಚು ಹೊಳಪಿನಿಂದ ಕೂಡಿದ್ದರೆ ಆ ಭಾಗಕ್ಕೆ ರಿಪೇಂಟ್‌ ಮಾಡಲಾಗಿದೆ ಎಂದರ್ಥ. ಅಲ್ಲದೆ, ರಬ್ಬರ್ ಲೈನಿಂಗ್‌ಗಳ ಮೇಲೆ ಪೇಂಟ್‌ನ ಕಲೆಗಳಿವೆಯೇ ಎಂದು ಪರಿಶೀಲಿಸಿ.

58
ಬೋಲ್ಟ್ ಮತ್ತು ಸ್ಕ್ರೂಗಳ ಪರೀಕ್ಷೆ

ಬಾನೆಟ್ ತೆರೆದು ಒಳಗಿನ ಹಿಂಜ್‌ಗಳು ಮತ್ತು ಫೆಂಡರ್‌ಗಳ ಮೇಲಿರುವ ಬೋಲ್ಟ್‌ಗಳನ್ನು ಪರೀಕ್ಷಿಸಿ. ಆ ಬೋಲ್ಟ್‌ಗಳ ಮೇಲಿರುವ ಪೇಂಟ್ ಕಿತ್ತುಹೋಗಿದ್ದರೆ ಅಥವಾ ಅವುಗಳ ಮೇಲೆ ಸ್ಕ್ರೂಡ್ರೈವರ್ ಬಳಸಿದ ಗುರುತುಗಳಿದ್ದರೆ, ದುರಸ್ತಿಗಾಗಿ ಆ ಭಾಗಗಳನ್ನು ಬಿಚ್ಚಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

68
ವೆಲ್ಡಿಂಗ್ ಮಾರ್ಕ್ಸ್ ಮತ್ತು ಚಾಸಿಸ್

ಎಂಜಿನ್ ಬಳಿ ಮತ್ತು ಟ್ರಂಕ್ (ಡಿಕ್ಕಿ) ಒಳಗಿನ ಭಾಗದಲ್ಲಿ ಕಬ್ಬಿಣದ ಪಟ್ಟಿಗಳು ವಕ್ರವಾಗಿದೆಯೇ ಅಥವಾ ಅಸಹಜವಾದ ವೆಲ್ಡಿಂಗ್ ಗುರುತುಗಳಿವೆಯೇ ಎಂದು ನೋಡಿ. ಪ್ರಮುಖವಾಗಿ ಸ್ಟೆಪ್ನಿ (Spare Wheel) ಇಡುವ ಜಾಗವನ್ನು ಪರೀಕ್ಷಿಸಿ; ಅಲ್ಲಿನ ಲೋಹದ ವಿನ್ಯಾಸ ಬದಲಾಗಿದ್ದರೆ ಅದು ಬಲವಾದ ಅಪಘಾತದ ಸಂಕೇತವಾಗಿದೆ.

78
ಗ್ಲಾಸ್ ಮ್ಯಾನ್ಯುಫ್ಯಾಕ್ಚರಿಂಗ್ ಡೇಟ್

ಕಾರಿನ ಎಲ್ಲಾ ಕಿಟಕಿ ಮತ್ತು ವಿಂಡ್‌ಶೀಲ್ಡ್ ಗಾಜುಗಳ ಮೇಲೆ ತಯಾರಿಕೆಯ ದಿನಾಂಕವಿರುತ್ತದೆ (ಮ್ಯಾನ್ಯುಫ್ಯಾಕ್ಚರಿಂಗ್ ಡೇಟ್). ಸಾಮಾನ್ಯವಾಗಿ ಎಲ್ಲಾ ಗಾಜುಗಳ ದಿನಾಂಕ ಒಂದೇ ಇರುತ್ತದೆ. ಒಂದು ವೇಳೆ ಯಾವುದಾದರೂ ಒಂದು ಗಾಜು ಮಾತ್ರ ಹೊಸತಾಗಿದ್ದರೆ ಅಥವಾ ದಿನಾಂಕ ಬೇರೆಯಾಗಿದ್ದರೆ, ಅದು ಅಪಘಾತದಲ್ಲಿ ಒಡೆದುಹೋಗಿ ಹೊಸದಾಗಿ ಹಾಕಿಸಿರುವ ಸಾಧ್ಯತೆ ಇರುತ್ತದೆ.

88
ದಾಖಲೆಗಳ ಪರಿಶೀಲನೆ

ಕಾರಿನ ಸರ್ವಿಸ್ ರೆಕಾರ್ಡ್ ಮತ್ತು ಇನ್ಶೂರೆನ್ಸ್ ಹಿಸ್ಟರಿಯನ್ನು ತಪ್ಪದೇ ಪರಿಶೀಲಿಸಿ. ವಾಹನದ ಮೇಲೆ ಇನ್ಶೂರೆನ್ಸ್ ಕ್ಲೈಮ್ ಮಾಡಲಾಗಿದೆಯೇ ಎಂಬುದನ್ನು ಚೆಕ್ ಮಾಡಿ. ಮಾರಾಟಗಾರ ಈ ದಾಖಲೆಗಳನ್ನು ತೋರಿಸಲು ಹಿಂಜರಿಯುತ್ತಿದ್ದರೆ ಅಲ್ಲಿ ಏನೋ ಗೋಲ್‌ಮಾಲ್ ಇದೆ ಎಂದೇ ಭಾವಿಸಬಹುದು. ನೀವು ಕಾರುಗಳ ಬಗ್ಗೆ ತಾಂತ್ರಿಕ ಜ್ಞಾನ ಹೊಂದಿಲ್ಲದಿದ್ದರೆ, ಒಬ್ಬ ನಂಬಿಕಸ್ತ ಮೆಕ್ಯಾನಿಕ್ ಅಥವಾ ಕಂಪನಿಯ ಅಧಿಕೃತ ವರ್ಕ್‌ಶಾಪ್‌ಗೆ ವಾಹನವನ್ನು ತೆಗೆದುಕೊಂಡು ಹೋಗಿ ತಪಾಸಣೆ ಮಾಡಿಸುವುದು ಉತ್ತಮ.

Read more Photos on
click me!

Recommended Stories