ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ

Published : Apr 29, 2026, 05:19 PM IST

ಪೆಟ್ರೋಲ್ ಡೀಸೆಲ್ ಕಾರಿಗೆ ಭವಿಷ್ಯವಿಲ್ಲ, ಶೀಘ್ರದಲ್ಲೇ ಯುಗಾಂತ್ಯ, ಸಂಚಲನ ಸೃಷ್ಟಿಸಿದ ನಿತಿನ್ ಗಡ್ಕರಿ, ಗಡ್ಕರಿ ಹೇಳಿದಂತೆ ಇಂಧನ ಕಾರುಗಳು ಮ್ಯೂಸಿಯಂ ಸೇರಿಕೊಳ್ಳುತ್ತಾ? ಈ ಕಾರುಗಳನ್ನು ಗುಜುರಿ ಹಾಕಬೇಕಾ?

PREV
15
ಪೆಟ್ರೋಲ್ ಡೀಸೆಲ್ ಕಾರು ಯುಗಾಂತ್ಯ

ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಫಾಸ್ಟಾಗ್, ಹೆದ್ದಾರಿ, ಎಕ್ಸ್‌ಪ್ರೆಸ್‌ವೇ, ಫ್ಲೈಓವರ್ ಸೇರಿದಂತೆ ಮೂಲಭೂತ ಸೌಕರ್ಯ ಅಭಿವೃದ್ಧಿ, ವಾಹನ ಸುರಕ್ಷತೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ನಿತಿನ್ ಗಡ್ಕರಿ ಭಾರಿ ಬದಲಾವಣೆ ತಂದಿದ್ದಾರೆ. ಇದೀಗ ನಿತಿನ್ ಗಡ್ಕರಿ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳು ಶೀಘ್ರದಲ್ಲೇ ಯುಗಾಂತ್ಯಗೊಳ್ಳಲಿದೆ ಎಂದಿದ್ದಾರೆ.

25
ಪೆಟ್ರೋಲ್ ಡೀಸೆಲ್ ಕಾರು ಸ್ಥಗಿತ

ಬಸ್ ವರ್ಲ್ಡ್ ಇಂಡಿಯಾ 2026 ಸಮ್ಮಿಟ್‌ನಲ್ಲಿ ಪಾಲ್ಗೊಂಡ ನಿತಿನ್ ಗಡ್ಕರಿ, ಭವಿಷ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳು ಇರುವುದಿಲ್ಲ. ಇದು ಮೂಲೆ ಸೇರಿಕೊಳ್ಳಲಿದೆ ಎಂದಿದ್ದಾರೆ. ಹಸಿರೀಕರಣಕ್ಕೆ ವಿಶ್ವವೇ ಒತ್ತು ನೀಡುತ್ತಿದೆ. ಇದರ ಅನಿವಾರ್ಯತೆ ಎದುರಾಗಿರುವ ಕಾರಣ ಶೀಘ್ರದಲ್ಲೇ ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳು ಸ್ಥಗಿತಗೊಳ್ಳಳಿದೆ ಎಂದಿದ್ದಾರೆ.

35
ಆಟೋಮೊಬೈಲ್ ಕಂಪನಿಗಳಿಗೆ ಸೂಚನೆ

ಆಟೋಮೊಬೈಲ್ ಕಂಪನಿಗಳು ಇಂಧನ ಕಾರುಗಳಿಗೆ ಒತ್ತು ನೀಡುವುದು ನಿಲ್ಲಿಸಬೇಕು. ಗ್ರೀನ್ ಕಾರುಗಳತ್ತ ಗಮನ ನೀಡಬೇಕು. ನಿಯಮಗಳು ಕಠಿಣಗೊಳ್ಳುತ್ತಿದೆ. ಭಾರಿ ಬದಲಾವಣೆಗೆ ನಾವು ಒಗ್ಗಿಕೊಳ್ಳಲು ಈಗಿನಿಂದಲೇ ತಯಾರಿಗಳು ಆರಂಭಗೊಳ್ಳಬೇಕು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

45
ಗ್ರೀನ್ ಮಾತ್ರವಲ್ಲ, ಆರ್ಥಿಕತೆ ಅಜೆಂಡಾ

ಕೇವಲ ಪರಿಸರಕ್ಕೆ ಪೂರಕ ಮಾತ್ರವಲ್ಲ, ಆರ್ಥಿಕತೆ ದೃಷ್ಟಿಯಿಂದಲೂ ಅಗತ್ಯ. ಮಧ್ಯಪ್ರಾಚ್ಯ ಯುದ್ಧಗಳಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ತೊಡಕುಗಳು ಎದುರಾಗುತ್ತಿದೆ. ಇದು ಆರ್ಥಕತೆ ಮೇಲೆ ಭಾರಿ ಪರಿಣಾಮ ಬೀರಲಿದೆ. ನಾವು ಅವಲಂಬನೆಯಿಂದ ಹೊರಬರಬೇಕು. ಹೀಗಾಗಿ ಡೀಸೆಲ್ ಹಾಗೂ ಪೆಟ್ರೋಲ್ ಕಾರುಗಳು ಅಂತ್ಯಗೊಂಡು,ಗ್ರೀನ್ ಕಾರುಗಳತ್ತ ಜಗತ್ತು ಸಾಗಲಿದೆ ಎಂದಿದ್ದಾರೆ.

55
ದೆಹಲಿ ಸೇರಿದಂತೆ ಪ್ರಮುಖ ನಗರದಲ್ಲಿ ಸಮಸ್ಯೆ

ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಸಮಸ್ಯೆ ತೀವ್ರಗೊಳ್ಳುತ್ತಿದೆ. ವಾಯು ಮಾಲಿನ್ಯ ತಡೆಯಲು ನಡೆಸುವ ಪ್ರಯತ್ನಗಳು ಸಮಪರ್ಕವಾಗುತ್ತಿಲ್ಲ. ಈ ಎಲ್ಲಾ ದೃಷ್ಟಿಗಳಿಂದ ಗ್ರೀನ್ ಕಾರುಗಳು ಅಂದರೆ ಎಲೆಕ್ಟ್ರಿಕ್, ಎಥೆನಾಲ್ ಅಥವಾ ಇತರ ಇಂಧನಗಳ ಕಾರುಗಳ ಬಳಕೆ ಹೆಚ್ಚಾಗಲಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ದೆಹಲಿ ಸೇರಿದಂತೆ ಪ್ರಮುಖ ನಗರದಲ್ಲಿ ಸಮಸ್ಯೆ

Read more Photos on
click me!

Recommended Stories