ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್

Published : Jan 14, 2026, 08:51 PM IST

ಬೆಂಗಳೂರಿಗೆ ಬಂತು ಅಮೆರಿಕ ಟೆಸ್ಲಾ ಇವಿ ಕಾರು, ಮೊದಲ ಪಾಪ್ ಅಪ್ ಎಕ್ಸ್‌ಪೀರಿಯೆನ್ಸ್ ಆರಂಭಿಸಿದೆ. ಗ್ರಾಹಕರು ಟೆಸ್ಲಾ ಕಾರು ಡ್ರೈವ್ ಮಾಡುವ ಅವಕಾಶ ನೀಡಲಾಗಿದೆ. ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರಿನಲ್ಲಿ ಟೆಸ್ಲಾ ಕಾರಿನ ಬೆಲೆ ಎಷ್ಟು, ಮೈಲೇಜ್ ಎಷ್ಟಿದೆ? 

PREV
16
ಬೆಂಗಳೂರಿಗೆ ಎಲಾನ್ ಮಸ್ಕ್ ಟೆಸ್ಲಾ ಕಾರು ಎಂಟ್ರಿ

ಎಲಾನ್ ಮಸ್ಕ್ ಒಡೆತನ ಟೆಸ್ಲಾ ವಿಶ್ವದ ನಂಬರ್ 1 ಎಲೆಕ್ಟ್ರಿಕ್ ಕಾರು. ಇದೀಗ ಬೆಂಗಳೂರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಟೆಸ್ಲಾ ಇಂದು ಬೆಂಗಳೂರಿನಲ್ಲಿ ತನ್ನ ಮೊದಲ 'ಪಾಪ್-ಅಪ್ ಎಕ್ಸ್‌ಪೀರಿಯನ್ಸ್ ಘೋಷಿಸಿದೆ. ಈ ಮೂಲಕ ಟೆಸ್ಲಾ ಬ್ರ್ಯಾಂಡ್ ಅಧಿಕೃತವಾಗಿ ಬೆಂಗಳೂರಿಗೆ ಎಂಟ್ರಿಕೊಟ್ಟಿದೆ. ಜನವರಿ 15 ರಿಂದ ಜನವರಿ 31, 2026 ರವರೆಗೆ ಕೂಡ್ಲು ಗೇಟ್‌ನಲ್ಲಿರುವ 'ACKO ಡ್ರೈವ್ ಸರ್ವಿಸ್ ಸೆಂಟರ್'ನಲ್ಲಿ ಟೆಸ್ಲಾ ಇವಿ ಕಾರುಗಳ ಪ್ರದರ್ಶನ ನಡೆಯಲಿದ್ದು, ಗ್ರಾಹಕರು ಟೆಸ್ಲಾ ಕಾರುಗಳನ್ನು ಹತ್ತಿರದಿಂದ ನೋಡುವ ಅವಕಾಶ ಪಡೆಯಲಿದ್ದಾರೆ.

26
ನಾಲ್ಕು ಟೆಸ್ಲಾ ಮಾಡೆಲ್ ಕಾರು ಲಭ್ಯ

ಈ ಪಾಪ್-ಅಪ್‌ನಲ್ಲಿ ನಾಲ್ಕು ಟೆಸ್ಲಾ ಮಾಡೆಲ್ Y (Tesla Model Y) ಕಾರುಗಳಿರಲಿವೆ. ಪರಿಣಿತರ ಮಾರ್ಗದರ್ಶನದಲ್ಲಿ ವಾಹನಗಳ ಸಂಪೂರ್ಣ ಮಾಹಿತಿ ಮತ್ತು ಅವುಗಳ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ಟೆಸ್ಲಾದ ವಿನ್ಯಾಸ, ಎಲೆಕ್ಟ್ರಿಕ್ ತಂತ್ರಜ್ಞಾನ, ಸುರಕ್ಷತಾ ಕ್ರಮಗಳು ಮತ್ತು ಕಾರ್ಯಕ್ಷಮತೆಯ ಬಗ್ಗೆ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗುವುದು. ಭಾರತದ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾದ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕುಡ್ಲು ಗೇಟ್‌ನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

36
ಗ್ರಾಹಕರಿಗೆ ಟೆಸ್ಟ್ ಡ್ರೈವ್ ಅವಕಾಶ

ಗ್ರಾಹಕರಿಗೆ ಟೆಸ್ಲಾ ಕಾರನ್ನು ಚಾಲನೆ ಮಾಡುವ (Test Drive) ಅವಕಾಶವನ್ನೂ ಕಲ್ಪಿಸಲಾಗಿದೆ. ಆಸಕ್ತರು ಟೆಸ್ಲಾ ಇಂಡಿಯಾ ವೆಬ್‌ಸೈಟ್‌ನಲ್ಲಿ ತಮ್ಮ ಸಮಯವನ್ನು ಕಾಯ್ದಿರಿಸಬಹುದು. ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಟೆಸ್ಟ್ ಡ್ರೈವ್ ಲಭ್ಯವಿರುತ್ತದೆ. 2023 ಮತ್ತು 2024ರಲ್ಲಿ ವಿಶ್ವದ ಅತಿ ಹೆಚ್ಚು ಮಾರಾಟವಾದ ವಾಹನ ಎಂಬ ಹೆಗ್ಗಳಿಕೆ ಪಾತ್ರವಾಗಿರುವ 'ಮಾಡೆಲ್ Y', ಜಾಗತಿಕ ಸುರಕ್ಷತಾ ಸಂಸ್ಥೆಗಳಿಂದ 5-ಸ್ಟಾರ್ ರೇಟಿಂಗ್ ಪಡೆದಿದೆ.

46
15 ನಿಮಿಷದಲ್ಲಿ 267 ಕಿ.ಮಿ ಪ್ರಯಾಣಕ್ಕೆ 15 ನಿಮಿಷ ಚಾರ್ಜಿಂಗ್

ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಬಹುತೇಕರಿಗೆ ಕಿರಿಕಿರಿ. ಆದರೆ ಟೆಸ್ಲಾ ವೈ ಮಾಡೆಲ್ ಕಾರು ಕೇವಲ 15 ನಿಮಿಷ ಚಾರ್ಜ್ ಮಾಡಿದರೆ ಬರೋಬ್ಬರಿ 267 ಕಿಲೋಮೀಟರ್ ಪ್ರಯಾಣ ಮಾಡಲು ಸಾಧ್ಯವಿದೆ. ಹೀಗಾಗಿ ಇಂಧನ ತುಂಬಿಸಿಕೊಳ್ಳುವ ಸಮಯದಷ್ಟೇ ವೇಗದಲ್ಲಿ ಚಾರ್ಜ್ ಮಾಡಿ ಪ್ರಯಾಣ ಮಾಡಲು ಟೆಸ್ಲಾ ನೆರವಾಗಲಿದೆ.

56
ಕೇವಲ 22,220 ರೂಪಾಯಿಗೆ ಬುಕ್ ಮಾಡಿ ಕಾರು

ಪ್ರತಿಷ್ಠಿತ ಟೆಸ್ಲಾ ಎಲೆಕ್ಟ್ರಿಕ್ ಕಾರು ಬುಕಿಂಗ್ ಮಾಡಲು ದುಬಾರಿ ಬೆಲೆ ನೀಡಬೇಕಿಲ್ಲ. ಕೇವಲ 22,220 ರೂಪಾಯಿ ನೀಡಿ ಹೊಚ್ಚ ಹೊಸ ಟೆಸ್ಲಾ ಕಾರು ಬುಕಿಂಗ್ ಮಾಡಲು ಸಾಧ್ಯ. ವಿಶ್ವದ ನಂಬರ್ 1 ಟೆಸ್ಲಾ ಕಾರು ಇದೀಗ ಬೆಂಗಳೂರಿನಲ್ಲಿ ಲಭ್ಯವಾಗುತ್ತಿದೆ.

ಕೇವಲ 22,220 ರೂಪಾಯಿಗೆ ಬುಕ್ ಮಾಡಿ ಕಾರು

66
ಬೆಲೆ ಹಾಗೂ ಮೈಲೇಜ್ ರೇಂಜ್

ಟೆಸ್ಲಾದ ರೇರ್ ವ್ಹೀಲ್ ಡ್ರೈವ್ (RWD) ವೇರಿಯೆಂಟ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ಮೈಲೇಜ್ ನೀಡಲಿದೆ . ಇನ್ನು ಈ ಕಾರಿನ ಗರಿಷ್ಠ ವೇಗ 201 ಕಿಲೋಮೀಟರ್. ಇದರ ಬೆಲೆ 59.89 ಲಕ್ಷ ರೂಪಾಯಿ. ಇನ್ನು ಲಾಂಗ್ ರೇಂಜ್ ರೇರ್ ವ್ಹೀಲ್ ಡ್ರೈವ್ ವೇರಿಯೆಂಟ್ ಟೆಸ್ಲಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 661 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರ ಬೆಲೆ 67.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).

ಬೆಲೆ ಹಾಗೂ ಮೈಲೇಜ್ ರೇಂಜ್

Read more Photos on
click me!

Recommended Stories