ನಿಮ್ಮ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ, ಹೊಸ ಮಹೀಂದ್ರ 3XO ಇವಿಗೆ ಮುಗಿಬಿದ್ದ ಜನ

Published : Jan 08, 2026, 01:13 PM IST

ನಿಮ್ಮ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ, ಹೊಸ ಮಹೀಂದ್ರ 3XO ಇವಿಗೆ ಮುಗಿಬಿದ್ದ ಜನ, 39.4 kWh ಬ್ಯಾಟರಿಯಿಂದ ಆರಂಭಗೊಳ್ಳುವ ಈ ಕಾರು ಪ್ರತಿ ದಿನ ಬಳಕೆ ಹಾಗೂ ದೀರ್ಘ ಪ್ರಯಾಣಕ್ಕೂ ಬಳಕೆ ಮಾಡುವಂತೆ ನಿರ್ಮಾಣಗೊಂಡಿದೆ. ಇದರ ಬೆಲೆ ಎಷ್ಟು 

PREV
15
ಮಹೀಂದ್ರ 3XO ಇವಿ

ಮಹೀಂದ್ರ ಭಾರತದಲ್ಲಿ ಹೊಸ ಅವತಾರದಲ್ಲಿ ಕಾರುಗಳನ್ನು ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಶೈಲಿ, ಗರಿಷ್ಠ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್ ಸೇರಿದಂತೆ ಎಲ್ಲವನ್ನು ಕೈಗೆಟುಕುವ ದರದಲ್ಲಿ ನೀಡುತ್ತಿದೆ. ಇದೀಗ ಮಹೀಂದ್ರ ಹೊಸ ಎಲೆಕ್ಟ್ರಿಕ್ ಕಾರು ಬಡುಗಡೆ ಮಾಡಿದೆ. ಮಹೀಂದ್ರ 3XO ಫ್ಯೂಯೆಲ್ ಕಾರು ಇದೀಗ ಎಲೆಕ್ಟ್ರಿಕ್ ಕಾರಾಗಿ ಬಿಡುಗಡಯಾಗಿದೆ.

25
ಮಹೀಂದ್ರ 3XO ಇವಿ ಕಾರಿನ ಬೆಲೆ

ಮಹೀಂದ್ರ 3XO ಎಲೆಕ್ಟ್ರಿಕ್ ಕಾರಿನ ಆರಂಭಿಕ ಬೆಲೆ 13.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ಸೆಗ್ಮೆಂಟ್‌ನಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಹೀಂದ್ರ 3XO ಇವಿ ಕಾರು ಬಿಡುಗಡೆಯಾಗಿದೆ

ಮಹೀಂದ್ರ 3XO ವೇರಿಯೆಂಟ್ ಹಾಗೂ ಬೆಲೆ

AX5 : 13.89 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)

AX7L : 14.96 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ)

35
ಹೊಸ ಇವಿ ಕಾರಿನ ಮೇಲೇಜ್ ಎಷ್ಟು?

ಮಹೀಂದ್ರ 3XO ಇವಿ 39.4 kWh ಬ್ಯಾಟರಿ ಪ್ಯಾಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 285 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು 110 kW ಪವರ್ ಹಾಗೂ 310 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. 0-100 ಕಿ.ಮೀ ವೇಗವನ್ನು 8.3 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ.

45
ಮಹೀಂದ್ರ 3ಎಕ್ಸ್‌ಒ ಫೀಚರ್

ಒಳಭಾಗದಲ್ಲಿ, ಬೇಸ್ ವೇರಿಯೆಂಟ್‌ನಲ್ಲಿಯೂ ಕೋಸ್ಟ್-ಟು-ಕೋಸ್ಟ್ ಟ್ರಿಪಲ್ ಸ್ಕ್ರೀನ್ ಲೇಔಟ್ ಸಿಗುತ್ತದೆ. ಆದರೆ ಇದರಲ್ಲಿ ಸನ್‌ರೂಫ್ ಇಲ್ಲ. ಅಡ್ರಿನಾಕ್ಸ್ ಕನೆಕ್ಟಿವಿಟಿ, ಅಲೆಕ್ಸಾ ಬಿಲ್ಟ್-ಇನ್ (ಚಾಟ್‌ಜಿಪಿಟಿ ಜೊತೆಗೆ), ಸ್ಮಾರ್ಟ್ ವಾಚ್ ಕನೆಕ್ಟಿವಿಟಿ, ಟೈಪ್-ಸಿ ಮತ್ತು ಟೈಪ್-ಎ ಯುಎಸ್‌ಬಿ ಚಾರ್ಜರ್‌ಗಳು ಇತರ ಪ್ರೀಮಿಯಂ ಫೀಚರ್‌ಗಳಾಗಿವೆ. ಇದಲ್ಲದೆ, ಮೂರನೇ ಸಾಲಿನಲ್ಲಿ 12V ಚಾರ್ಜಿಂಗ್ ಪೋರ್ಟ್, ಸ್ಟೋರೇಜ್ ಇರುವ ಫ್ರಂಟ್ ಆರ್ಮ್‌ರೆಸ್ಟ್, ಡೇ-ನೈಟ್ IRVM, ಎರಡನೇ ಮತ್ತು ಮೂರನೇ ಸಾಲುಗಳಲ್ಲಿ ಹಿಂಬದಿ ಎಸಿ ವೆಂಟ್‌ಗಳು ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳಿವೆ. ಡ್ರೈವರ್ ಸೀಟ್ 6-ವೇ ಮ್ಯಾನುವಲ್ ಆಗಿ ಅಡ್ಜಸ್ಟ್ ಮಾಡಬಹುದು. ಡ್ರೈವರ್ ಮತ್ತು ಮುಂಭಾಗದ ಪ್ರಯಾಣಿಕರಿಗೆ ಎತ್ತರ ಹೊಂದಿಸಬಹುದಾದ ಸೀಟ್ ಬೆಲ್ಟ್‌ಗಳನ್ನು ನೀಡಲಾಗಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಪುಶ್-ಬಟನ್ ಸ್ಟಾರ್ಟ್, ಟೈರ್ ಪೊಸಿಷನ್ ಡಿಸ್‌ಪ್ಲೇ, ನಾಲ್ಕು ಪವರ್ ವಿಂಡೋಗಳು ಮತ್ತು ಡ್ರೈವರ್-ಸೈಡ್ ಒನ್-ಟಚ್ ಡೌನ್ ಪವರ್ ವಿಂಡೋ ಇತರ ಫೀಚರ್‌ಗಳಾಗಿವೆ.

55
ಬೇಸ್ ಮಾಡೆಲ್‌ನ ಸುರಕ್ಷತಾ ಫೀಚರ್‌ಗಳು

XUV7XO ಬೇಸ್ AX ವೇರಿಯೆಂಟ್‌ಗೆ ADAS ಸಿಗುವುದಿಲ್ಲ. ಆದರೆ ಸುರಕ್ಷತಾ ಫೀಚರ್‌ಗಳು ತುಂಬಾ ಉತ್ತಮವಾಗಿವೆ. 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಇದರಲ್ಲಿ ಸ್ಟ್ಯಾಂಡರ್ಡ್ ಆಗಿ ಬರುತ್ತವೆ. ಒಟ್ಟಾರೆಯಾಗಿ, ಮಹೀಂದ್ರಾ XUV7XOದ ಬೇಸ್ AX ವೇರಿಯೆಂಟ್ ಬಜೆಟ್ ಸ್ನೇಹಿ ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ನೀಡುತ್ತದೆ. ಆದಾಗ್ಯೂ, ಹೈಯರ್ ವೇರಿಯೆಂಟ್‌ಗಳು ಹೆಚ್ಚಿನ ಫೀಚರ್‌ಗಳನ್ನು ನೀಡುತ್ತವೆ. ಟಾಪ್ ವೇರಿಯೆಂಟ್‌ಗೆ 540° ಸರೌಂಡ್ ವ್ಯೂ ಮಾನಿಟರ್, ಕ್ವಯಟ್ ಮೋಡ್, ADAS ಡೈನಾಮಿಕ್ ವಿಶ್ಯುಲೈಸೇಶನ್, 16-ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, ವಾಹನದ ಶಬ್ದ ಪರಿಹಾರ, ಡಾಲ್ಬಿ ವಿಷನ್, ಅಟ್ಮಾಸ್ ಮತ್ತು ಮಲ್ಟಿ-ಝೋನ್ ಆಂಬಿಯೆಂಟ್ ಲೈಟಿಂಗ್‌ನಂತಹ ಹೊಸ ಮತ್ತು ವಿಶೇಷ ಫೀಚರ್‌ಗಳು ಸಿಗುತ್ತವೆ.

ಬೇಸ್ ಮಾಡೆಲ್‌ನ ಸುರಕ್ಷತಾ ಫೀಚರ್‌ಗಳು

Read more Photos on
click me!

Recommended Stories