ದೊಡ್ಡ ಟಾಟಾ ಹ್ಯಾರಿಯರ್ ಕಾರು ಇದೀಗ ಕಡಿಮೆ ಬೆಲೆಯಲ್ಲಿ, ಪೆಟ್ರೋಲ್ ಎಂಜಿನ್ ಬಿಡುಗಡೆ

Published : Jan 09, 2026, 04:14 PM IST

ದೊಡ್ಡ ಟಾಟಾ ಹ್ಯಾರಿಯರ್ ಕಾರು ಇದೀಗ ಕಡಿಮೆ ಬೆಲೆಯಲ್ಲಿ, ಇಷ್ಟು ದಿನ ಡೀಸೆಲ್ ವೇರಿಯೆಂಟ್‌ನಲ್ಲಿ ಮಾತ್ರ ಟಾಟಾ ಹ್ಯಾರಿಯರ್ ಕಾರು ಲಭ್ಯವಿತ್ತು. ಇದೀಗ ಪೆಟ್ರೋಲ್ ಎಂಜಿನ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಿದೆ. 

PREV
15
ಕಡಿಮೆ ಬೆಲೆಯಲ್ಲಿ ದೊಡ್ಡ ಕಾರು

ಟಾಟಾ ಹ್ಯಾರಿಯರ್ ಭಾರತದ ಅತೀ ಹೆಚ್ಚು ಬೇಡಿಕೆ ಇರುವ ಕಾರು. ಪ್ರೀಮಿಯಂ ಸೆಗ್ಮೆಂಟ್ ಕಾರುಗಳ ಪೈಕಿ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಟಾಟಾ ಹ್ಯಾರಿಯರ್ ಕಾರು ಅತೀ ಕಡಿಮೆ ಬೆಲೆಗೆ ಲಭ್ಯವಿದೆ. ಕಾರಣ ಇದುವರೆಗೆ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದ್ದ ಟಾಟಾ ಹ್ಯಾರಿಯರ್ ಇದೀಗ ಪೆಟ್ರೋಲ್ ವೇರಿಯೆಂಟ್‌ ಎಂಜಿನ್‌ನಲ್ಲಿ ಲಭ್ಯವಿದೆ.

25
ಪೆಟ್ರೋಲ್ ಹ್ಯಾರಿಯರ್ ಬೆಲೆ ಎಷ್ಟು

ಟಾಟಾ ಹ್ಯಾರಿಯರ್ ಇದೀಗ ಪೆಟ್ರೋಲ್ ಎಂಜಿನ್‌ನಲ್ಲಿ ಬಿಡುಗಡೆಯಾಗಿದೆ. ಇದರ ಆರಂಭಿಕ ಬೆಲೆ 12.89 ಲಕ್ಷ ರೂಪಾಯಿ. ಗರಿಷ್ಠ ಬೆಲೆ 24.69 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದರೊಂದಿಗೆ ಟಾಟಾ ಹ್ಯಾರಿಯರ್ ಕಾರು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ ಪ್ರೀಮಿಯಂ ಸೆಗ್ಮೆಂಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

35
ಪೆಟ್ರೋಲ್ ಎಂಜಿನ್

ಟಾಟಾ ಹ್ಯಾರಿಯರ್ 1.5 ಲೀಟರ್ , 4 ಸಿಲಿಂಡರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 170hp and 280Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ.

45
ಹಲವು ವೇರಿಯೆಂಟ್ ಅತ್ಯಾಧುನಿಕ ಫೀಚರ್ಸ್

ಹ್ಯಾರಿಯರ್ ಪೆಟ್ರೋಲ್ ಎಂಜಿನ್ ಕಾರು ಸ್ಮಾರ್ಟ್, ಪ್ಯೂರ್ ಎಕ್ಸ್, ಅಡ್ವೆಂಚರ್ ಎಕ್ಸ್, ಅಡ್ವೆಂಚರ್ ಎಕ್ಸ್ ಪ್ಲಸ್, ಫೀಯರ್‌ಲೆಸ್ ಎಕ್ಸ್, ಫೀಯರ್‌ವೆಸ್ ಎಕ್ಸ್ ಪ್ಲಸ್, ಫೀಯರ್‌ಲೆಸ್ ಅಲ್ಟ್ರಾ, ರೆಡ್ ಡಾರ್ಕ್ ಎಡಿಶನ್ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಸ್ಟಾಂಡರ್ಡ್ ಹಾಗೂ ಡಾರ್ಕ್ ಎಡಿಶನ್ ಕಾರು ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌ನಲ್ಲಿ ಲಭ್ಯವಿದೆ.

ಹಲವು ವೇರಿಯೆಂಟ್ ಅತ್ಯಾಧುನಿಕ ಫೀಚರ್ಸ್

55
ಮಾರುಕಟ್ಟೆಯಲ್ಲಿ ಹೆಚ್ಚಿದ ಪೈಪೋಟಿ

ಟಾಟಾ ಹ್ಯಾರಿಯರ್ ಪೆಟ್ರೋಲ್ ವರ್ಶನ್ ಕಾರು ಬಿಡುಗಡೆಯಿಂದ ಹಲವು ಬ್ರ್ಯಾಂಡ್ ಕಾರುಗಳಿಗೆ ನಡುಕು ಶುರುವಾಗಿದೆ. ಹ್ಯಾರಿಯರ್ ನೇರ ಪ್ರತಿಸ್ಪರ್ಧಿ ಎಂಜಿ ಹೆಕ್ಟರ್ ಹಾಗೂ ಇದೀಗ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹ್ಯಾರಿಯರ್ ಪೆಟ್ರೋಲ್ ಕಾರಿನ ಬೆಲೆಯಲ್ಲ ಅಜಗಜಾಂತರ ವ್ಯತ್ಯಾಸವಿದೆ. ಹ್ಯಾರಿಯರ್ ಕೈಗೆಟುಕುವ ದರದಲ್ಲಿ ಲಭ್ಯವಿದೆ.

ಮಾರುಕಟ್ಟೆಯಲ್ಲಿ ಹೆಚ್ಚಿದ ಪೈಪೋಟಿ

Read more Photos on
click me!

Recommended Stories