ಟಾಟಾ ಸಫಾರಿಗೆ 1 ಕೋಟಿ , ಮಾರುತಿ ಸ್ವಿಫ್ಟ್ 27 ಲಕ್ಷ ರೂ; ಭಾರತದ ಕಾರಿಗೆ ವಿದೇಶದಲ್ಲಿ ಬೆಂಕಿ ಬೆಲೆ!

First Published | Apr 8, 2023, 4:58 PM IST

ಭಾರತದಲ್ಲಿ 5 ಲಕ್ಷ ರೂಪಾಯಿಗೆ ಹೊಸ ಕಾರು ಖರೀದಿಸಿ ಓಡಾಡಬಹುದು. ಭಾರತದಲ್ಲಿ ಕೈಗೆಟುಕುವ ದರಕ್ಕೆ ಅತ್ಯುತ್ತಮ ಕಾರುಗಳು ಲಭ್ಯವಿದೆ.ಭಾರತದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಬೇಸ್ ಮಾಡೆಲ್ ಕಾರಿನ ಬೆಲೆ 5.92 ಲಕ್ಷ ರೂಪಾಯಿ ಆದರೆ ಈ ಕಾರಿಗೆ ವಿದೇಶದಲ್ಲಿ 27.74 ಲಕ್ಷ ರೂ. ಇಷ್ಟೇ ಅಲ್ಲ ಟಾಟಾ ಸಫಾರಿಗೆ 1 ಕೋಟಿ ರೂಪಾಯಿ. ಹಾಗಾದರೆ ಬೆಲೆಯಲ್ಲಿ ಇಷ್ಟೊಂದು ವ್ಯತ್ಯಾಸ ಹೇಗೆ? ಇಲ್ಲಿದೆ ವಿವರ.

ಭಾರತದಲ್ಲಿ ಕಾರು ಖರೀದಿ ಸುಲಭ. ಸರಿಸುಮಾರು 5 ಲಕ್ಷ ರೂಪಾಯಿ ಬೆಲೆಗೆ ಸಣ್ಣ ಕಾರುಗಳನ್ನು ಖರೀದಿಸಬಹುದು. ಇನ್ನು ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ 6 ಲಕ್ಷ ರೂ(ಎಕ್ಸ್ ಶೋ ರೂಂ).ಟಾಟಾ ಸಫಾರಿ ಕಾರಿನ ಬೆಲೆ 15 ರಿಂದ 25 ಲಕ್ಷ ರೂಪಾಯಿ. 7 ರಿಂದ 9 ಲಕ್ಷ ರೂಪಾಯಿ ಬೆಲೆಯಲ್ಲಿ ಹ್ಯಾಚ್‌ಬ್ಯಾಕ್, ಸಬ್ ಕಾಂಪಾಕ್ಟ್ SUV ಸೇರಿದಂತೆ ಅತ್ಯುತ್ತಮ ಕಾರು ಖರೀದಿಸಲು ಸಾಧ್ಯವಿದೆ.  

pakistan map

ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಕಾರುಗಳು ವಿದೇಶದಲ್ಲಿ ದುಬಾರಿ ಬೆಲೆ. ಅದರಲ್ಲೂ ಭಾರತದ ಕಾರುಗಳಿಗೆ ಪಾಕಿಸ್ತಾನ ಹಾಗೂ ನೇಪಾಳದಲ್ಲಿನ ಬೆಲೆ ಕೇಳಿದರೆ ತಲೆತಿರುಗುತ್ತದೆ. ಕಾರಣ ಇಲ್ಲಿ ಕೈಗೆಟುಕುವ ದರದ ಕಾರುಗಳು ಪಾಕಿಸ್ತಾನ ಹಾಗೂ ನೇಪಾಳದಲ್ಲಿ ಮರ್ಸಿಡಿಸ್ ಬೆಂಜ್, ಫೆರಾರಿ, BMW ಬೆಲೆಯನ್ನೂ ಮೀರಿಸುತ್ತದೆ.

Tap to resize

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆ ಭಾರತದಲ್ಲಿ 5.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಆದರೆ ಇದೇ ಸ್ವಿಫ್ಟ್ ಕಾರಿಗೆ ಪಾಕಿಸ್ತಾನದಲ್ಲಿ 27.74 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಅಲ್ಲಿನ 27.74 ಲಕ್ಷ ರೂಪಾಯಿ ಅಂದರೆ ಭಾರತದ 11.28 ಲಕ್ಷ ರೂಪಾಯಿ. 

ಪಾಕಿಸ್ತಾನದ ರೂಪಾಯಿ ಮೌಲ್ಯ ಹಾಗೂ ಆಮದು ಸುಂಕ ಸೇರಿದರೆ ಪಾಕಿಸ್ತಾನಿಯರಿಗೆ ಮಾರುತಿ ಸ್ವಿಫ್ಟ್ ಐಷಾರಾಮಿ ಕಾರಾಗುತ್ತಿದೆ. ಸರಿಸುಮಾರು 6 ಲಕ್ಷ ರೂಪಾಯಿ ಸ್ವಿಫ್ಟ್ ಕಾರು ಪಾಕಿಸ್ತಾನ ತಲುಪುವಾಗ 4 ಲಕ್ಷ ರೂಪಾಯಿ ಅಮದು ಸುಂಕ ಬೀಳುತ್ತಿದೆ.

ಭಾರತದಲ್ಲಿ ಟಾಟಾ ಸಫಾರಿ ಕಾರಿನ ಬೆಲೆ 15 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ. ಆದರೇ ಇದೇ ಸಫಾರಿ ಕಾರಿಗೆ ನೇಪಾಳದ ಬೆಲೆ 83.49 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 1 ಕೋಟಿ ರೂಪಾಯಿ

ಮಾರುತಿ ಸುಜುಕಿ ವ್ಯಾಗನಆರ್ ಕಾರು ಭಾರತದಲ್ಲಿ ಜನಪ್ರಿಯವಾಗಿದೆ. ಈ ಕಾರಿಗೆ ಪಾಕಿಸ್ತಾನದ ರೂಪಾಯಿಗಳಲ್ಲಿ 20.84 ಲಕ್ಷ ರೂಪಾಯಿ. ಭಾರತದಲ್ಲಿ ಬೇಸ್ ಮಾಡೆಲ್ ವ್ಯಾಗನಆರ್ ಕಾರಿನ ಬೆಲೆ 5.53 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.
 

ಸಬ್ ಕಾಂಪಾಕ್ಟ್ SUV ಕಾರಿನಲ್ಲಿ ಭಾರತದಲ್ಲಿ ಹಲವು ಆಯ್ಕೆಗಳಿವೆ. ಸರಿಸುಮಾರು 6 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುತ್ತದೆ. ಕಿಯಾ ಸೋನೆಟ್ ಕಾರಿನ ಬೆಲೆ ಭಾರತದಲ್ಲಿ7.15 ಲಕ್ಷ ರೂಪಾಯಿ. ನೇಪಾಳದಲ್ಲಿ ಈ ಕಾರಿಗೆ 36.90 ಲಕ್ಷ ರೂಪಾಯಿ(ನೇಪಾಳ ರೂಪಾಯಿ)

ನೇಪಾಳದಲ್ಲಿ ವಾಹನ ಆಮದು ಮಾಡಿಕೊಳ್ಳಲು ಬರೋಬ್ಬರಿ ಶೇಕಡಾ 298 ರಷ್ಟು ಸುಂಕ ಕಟ್ಟಬೇಕು. ಇನ್ನು ಪಾಕಿಸ್ತಾನದಲ್ಲಿ ಆಮದು ಸುಂಕ ಶೇಕಡ 75. ಈ ಕಾರಣಗಳಿಂದ ಪಾಕಿಸ್ತಾನ ಹಾಗೂ ನೇಪಾಳದಲ್ಲಿ ಕಾರಿನ ಎಕ್ಸ್ ಶೋ ರೂಂ ಬೆಲೆ ಅಧಿಕವಾಗಲಿದೆ. ಇದರ ಜೊತೆಗೆ ಎರಡೂ ದೇಶದ ರೂಪಾಯಿ ಮೌಲ್ಯ , ಭಾರತದ ರೂಪಾಯಿ ಮೌಲ್ಯಕ್ಕಿಂತ ಕಡಿಮೆ ಇದೆ.

Latest Videos

click me!