Kiara Advani luxury Life: ಕೋಟಿ ಮೊತ್ತದ ಆಡಿ ಕಾರಿಗೆ ಕಿಯಾರಾ ಒಡತಿ, ಅಂಥಾದ್ದೇನಿದೆ?

First Published | Dec 15, 2021, 4:51 PM IST

ಮುಂಬೈ(ಡಿ. 15)  ಬಾಲಿವುಡ್ (Bollywood) ಸುಂದರಿ ಕಿಯಾರಾ ಅಡ್ವಾಣಿ (Kiara Advani)ಐಷಾರಾಮಿ ಆಡಿ (Audi)ಕಾರು ಖರೀದಿಸಿದ್ದಾರೆ.  ಕಾರಿನ ಶೋ ರೂಂ ಮೊತ್ತವೇ 1.56 ಕೋಟಿ ರೂ. ನಿಂದ ಆರಂಭವಾಗುತ್ತದೆ.

ಬಾಲಿವುಡ್ (Bollywood) ಸುಂದರಿ ಕಿಯಾರಾ ಅಡ್ವಾಣಿ (Kiara Advani)ಐಷಾರಾಮಿ ಆಡಿ (Audi)ಕಾರು ಖರೀದಿಸಿದ್ದಾರೆ.  ಕಾರಿನ ಶೋ ರೂಂ ಮೊತ್ತವೇ 1.56 ಕೋಟಿ ರೂ. ನಿಂದ ಆರಂಭವಾಗುತ್ತದೆ.

ಕಿಯಾರಾ ಖರೀದಿ ಮಾಡಿರುವುದು  Audi A8 L luxury sedan ಈಗಾಗಲೇ ಅವರ ಬಳಿ f BMW X5, Mercedes-Benz E-Class and BMW 530d ಕಾರುಗಳಿವೆ.

Celebrities Luxury Cars ಈ ವರ್ಷ ಬಾಲಿವುಡ್ ಸೆಲೆಬ್ರೆಟಿಗಳನ್ನು ಮೋಡಿ ಮಾಡಿದೆ ಈ 2 ಕಾರು!

Tap to resize

ಆಡಿ ತನ್ನ ಸೋಶಿಯಲ್ ಮೀಡಿಯಾ (Social Media) ಖಾತೆಯಲ್ಲಿ ನಟಿ ಕಾರು   ಖರೀದಿ ಮಾಡಿದ ನಂತರದ ಪೋಟೋ ಶೇರ್ ಮಾಡಿಕೊಂಡಿದೆ.  ಕಂಪನಿ ಎರಡು ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದು ಒಂದರಲ್ಲಿ ನಟಿ ಪೋಸ್ ನೀಡಿದ್ದರೆ  ಇನ್ನೊಂದು ಪೋಟೋದಲ್ಲಿ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲೋನ್ ಅಡ್ವಾಣಿಯನ್ನು ಹೂ ಗುಚ್ಛ ನೀಡಿ ಅಭಿನಂದಿಸುತ್ತಿದ್ದಾರೆ.

ಆಡಿ ಅನುಭವಕ್ಕೆ ಕಿಯಾರಾ ಅವರನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಮಗೆ ಇದು ಅತ್ಯಂತ ಸಂಭ್ರಮದ ಕ್ಷಣ ಎಂದು ಬರೆದಿದ್ದಾರೆ.  ಬಾಲಿವುಡ್ ನಲ್ಲಿ ನಟಿ ಬಹುಬೇಡಿಕಡಯ ಕಲಾವಿದೆ.

ತಮ್ಮ ಅಭಿನಯದ ಮೂಲಕ ನಿಧಾನವಾಗಿ ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲಿ ನೆಲೆಯೂರುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಸಖತ್‌ ಲಕ್ಷುರಿಯಸ್‌ ಲೈಫ್ ಸ್ಟೈಲ್ ಕಿಯಾರಾ ಅವರದ್ದು.

Audi A8 L ಐಷಾರಾಮಿ ಸೆಡಾನ್ ಅನ್ನು 2020 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಯಿತು.  1.56 ಕೋಟಿ ರೂ. (ಎಕ್ಸ್ ಶೋ ರೂಂ) ಆರಂಭಿಕ ದರ! ಜರ್ಮನ್ ಕಾರು ತಯಾರಕರ ಅಲ್ಟ್ರಾ ಪ್ರೀಮಿಯಂ ಮಾದರಿಯಲ್ಲಿಯೇ ಕಾರುಗಳಿವೆ. ಇದು ಮೂರು-ಲೀಟರ್ V6 ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 10Ah ಲಿಥಿಯಂ ಐಯಾನ್ ಬ್ಯಾಟರಿಯೊಂದಿಗೆ ಎಲೆಕ್ಟ್ರಿಕ್ ಮೋಟರ್‌ ವಿಶೇಷ.

ನಾಲ್ಕನೇ ಜನರೇಶನ್  ಮಾದರಿಯು ಐಷಾರಾಮಿ ಸೆಡಾನ್‌ ಮೆಚ್ಚುಗೆ ಗಳಿಸಿಕೊಂಡಿದೆ. ಎಲ್‌ಇಡಿ ಹೆಡ್ ಲೈಟ್‌ಗಳೊಂದಿಗೆ ಸಿಂಗಲ್-ಫ್ರೇಮ್ ಗ್ರಿಲ್ ಅನ್ನು ಒಳಗೊಂಡಿದೆ. ಸೆಡಾನ್ 19-ಇಂಚಿನ ಭವ್ಯ ನೋಟ ಗಮನ ಸೆಳೆಯುತ್ತದೆ.  ಇದು ಹಿಂಭಾಗದ ಪ್ರಯಾಣಿಕರಿಗೆ ಕಸ್ಟಮೈಸ್ ಮಾಡಿದ ಫುಟ್ ಮಸಾಜರ್, ಹೀಟ್ ಫಂಕ್ಷನಲಿಟಿ, ಮುಂಭಾಗದ ಸೀಟಿನ ಹೆಡ್‌ರೆಸ್ಟ್‌ಗಳ ಹಿಂಭಾಗದಲ್ಲಿ ಎರಡು ಡಿಟ್ಯಾಚೇಬಲ್ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳು, ಆಂಬಿಯೆಂಟ್ ಲೈಟಿಂಗ್, ಪಾನೀಯಗಳಿಗಾಗಿ ಕೂಲ್ ಬಾಕ್ಸ್ ಮತ್ತು ಮಸಾಜ್ ಸೀಟ್‌ ಮತ್ತಷ್ಟು ವಿಶೇಷ.

Latest Videos

click me!