ಬೆಂಗಳೂರು ತಲುಪಿದ ಮಹೀಂದ್ರಾ XUV700 ಫ್ರೀಡಂ ಡ್ರೈವ್ ಅಭಿಯಾನ!

First Published Sep 11, 2021, 6:28 PM IST
  • ಮಹೀಂದ್ರ ಬಿಡುಗಡೆ ಮಾಡಿದೆ ಹೊಚ್ಚ ಹೊಸ XUV700 ಕಾರು
  • ಅತೀ ಕಡಿಮೆ ಬೆಲೆಯಲ್ಲಿ 7 ಸೀಟರ್ ಕಾರು ಮಾರುಕಟ್ಟೆಗೆ
  • ಬೆಂಗಳೂರಿನಲ್ಲಿ  XUV700 ಕಾರು ಫ್ರೀಡಂ ಡ್ರೈವ್ ಅಭಿಯಾನ

ಹೊಸದಾಗಿ ಅನಾವರಣಗೊಂಡಿರುವ ಮಹೀಂದ್ರಾ XUV700 ಪ್ರಚಾರ ಅಭಿಯಾನ ಫ್ರೀಡಂ ಡ್ರೈವ್ ಈಗ ಬೆಂಗಳೂರು ಮಹಾನಗರ ತಲುಪಿದೆ. ಫ್ರೀಡಂ ಡ್ರೈವ್ ಅಭಿಯಾನವು  XUV700  ಸಂಭ್ರಮಚಾರಣೆ ಉದ್ದೇಶದ ಪರಿಕಲ್ಪನೆಯಾಗಿದೆ. ಉತ್ತರ, ಪಶ್ಚಿಮ, ದಕ್ಷಿಣ ಮತ್ತು ಪೂರ್ವ ವಲಯಗಳಿಂದ ಆರಂಭಗೊಂಡಿರುವ ಒಟ್ಟು 80 ವಾಹನಗಳ ಫ್ರೀಡಂ ಡ್ರೈವ್ ಮುಂದಿನ 25 ದಿನಗಳಲ್ಲಿ ದೇಶದ 20 ಮಹಾನಗರಗಳಿಗೆ ಭೇಟಿ ನೀಡಲಿದೆ. 

ಚೆನ್ನೈ ಮಹೀಂದ್ರಾ ಸಂಶೋಧನಾ ಕೇಂದ್ರದಿಂದ 2021ರ ಸೆಪ್ಟೆಂಬರ್ 4ರಂದು ಈ ಫ್ರೀಡಂ ಡ್ರೈವ್‌ಗೆ ಚಾಲನೆ ನೀಡಲಾಗಿದೆ.  XUV700 ವಾಹನಗಳು ತಮ್ಮ ಈ ಸುದೀರ್ಘ ಪಯಣದ ಹಾದಿಯಲ್ಲಿ ಪ್ರಮುಖ ನಗರಗಳಲ್ಲಿ ತಾತ್ಕಾಲಿಕ ನಿಲುಗಡೆ ಹೊಂದಲಿವೆ. ಈ ಸಂದರ್ಭದಲ್ಲಿ ಪ್ರತಿಯೊಂದು ನಗರವು ನೀಡುವ ಅನನ್ಯ ಪ್ರಚಾರದೊಂದಿಗೆ ವಾಹನದ ವೈಭವವನ್ನು ವಾಹನ ಪ್ರೇಮಿಗಳು ಕಣ್ತುಂಬಿಕೊಳ್ಳಬಹುದು. ವಾಹನ ಲೋಕದಲ್ಲಿ ಗಮನ ಸೆಳೆಯಬೇಕೆಂಬ ಉದ್ದೇಶದಿಂದಲೇ ಇದರ ವಿನ್ಯಾಸವನ್ನು ವಿಶೇಷವಾಗಿ ಸಿದ್ಧಪಡಿಸಿ ತಯಾರಿಸಲಾಗಿದೆ. ಇದಕ್ಕೆ ದೇಶದ ಎಲ್ಲ ಭಾಗಗಳಲ್ಲಿನ ವಾಹನ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

XUV700 ಸಂವೇದನಾಶೀಲ ಮತ್ತು ಅತ್ಯಾಧುನಿಕ ಹೊರಭಾಗವು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ಗಾಗಿ (SUV) ಅತ್ಯಂತ ಗರಿಷ್ಠ ಮಟ್ಟದ  ವೈಜ್ಞಾನಿಕವಾಯುಬಲದ (ಏರೊಡೈನಮಿಕ್) ವಿನ್ಯಾಸವನ್ನು ಒದಗಿಸುತ್ತದೆ. XUV700-ಇದು ಗ್ಯಾಸೋಲಿನ್ ಮತ್ತು  ಸಂಪೂರ್ಣ ಅಲ್ಯುಮಿನಿಯಂ ಡೀಸೆಲ್ ಎಂಜಿನ್‌ಗಳಲ್ಲಿ ಹೊಸ ತಲೆಮಾರಿನ 6-ಸ್ಪೀಡ್ ಮ್ಯಾನುವಲ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. 

ಶಕ್ತಿಯುತ 2 ಲೀಟರ್ ಟರ್ಬೊ ಜಿಡಿಐ ಎಂಸ್ಟಾಲಿನ್ ಎಂಜಿನ್ (ಗ್ಯಾಸೋಲಿನ್) 1750 ಮತ್ತು 3000 RPM ನಡುವೆ 380 NM ಸ್ಪೂಲ್ಸ್ಔಟ್ ಮತ್ತು 5,000 RPMನಲ್ಲಿ 200 PS ಅಭಿವೃದ್ಧಿಪಡಿಸುತ್ತದೆ. ಈ ಎಂಜಿನ್ ಸಂಸ್ಕರಿಸಿದ ಮೋಟಾರಿಂಗ್ ಮತ್ತು ಲೀನಿಯರ್ ಶಕ್ತಿ ವಿತರಿಸುತ್ತದೆ. 2.2 ಲೀಟರ್ ಕಾಮನ್‌ರೇಲ್ ಟರ್ಬೊ ಡೀಸೆಲ್ ಎಂಹಾಕ್ ಎಂಜಿನ್ ಟಾರ್ಕ್ ಹೆಸರುವಾಸಿಯಾಗಿದೆ. ಎರಡು ಟ್ಯೂನ್‌ಗಳಲ್ಲಿ ಲಭ್ಯವಿದೆ - 185 PS ಆವೃತ್ತಿ 420 NM(ಮ್ಯಾನುವಲ್) / 450 NM (ಆಟೊಮ್ಯಾಟಿಕ್) ಮತ್ತು 155 PS ವೇರಿಯಂಟ್ 360 NM (ಮ್ಯಾನುವಲ್ ಟ್ರಾನ್ಸ್ಮಿಷನ್). XUV700 -  ಇದರ ಒಳಾಂಗಣವು ತುಂಬ ಆಕರ್ಷಕವಾಗಿದೆ.  10.25 ಇಂಚಿನ ಟ್ವಿನ್ ಫ್ಲೋಟಿಂಗ್ ಡಿಸ್‌ಪ್ಲೇ ಸಾಂಪ್ರದಾಯಿಕ ಕ್ಲಸ್ಟ್ರ್ ವಿತ್ ಬಿನ್ಯಾಕಲ್ಸ್ ಬದಲಿಸಲಿದೆ.  

ಸುರಕ್ಷತೆಯು XUV700 ಪ್ರಮುಖ ಸೌಲಭ್ಯಗಳಲ್ಲಿ ಒಂದಾಗಿದೆ. ಇದು ಹಲವಾರು ಬಗೆಯ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ. XUV700-  ಇದು, ಮಹೀಂದ್ರಾದ ಹೊಸ ತಲೆಮಾರಿನ  ಎಸ್‌ಯುವಿಗಳಲ್ಲಿ ಮೊದಲನೆಯದಾಗಿದೆ. ಇದನ್ನು XUV500 ನಂತಹ ಆದರ್ಶ ಎಸ್‌ಯುವಿಗಳಿಂದ ಸ್ಥಾಪಿತವಾದ ಪರಂಪರೆ ಆಧರಿಸಿ ತಯಾರಿಸಲಾಗಿದೆ. ಇದು ಈ ವಲಯದ ಎಸ್‌ಯುವಿಗಳಲ್ಲಿಯೇ ಮೊದಲನೇ ಬಾರಿಗೆ ಅಳವಡಿಸಿಕೊಂಡಿರುವ ಆ್ಯಡ್ರೆನಾಕ್ಸ್ ತಂತ್ರಜ್ಞಾನದಂತಹ ಹೊಸ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಇದು ತನ್ಮಯಗೊಳಿಸುವಂತಹ ವೈಜ್ಞಾನಿಕ ಅನುಭವ ನೀಡಲಿದೆ. 

click me!