ಇಂಧನ ಕ್ರೈಸಿಸ್ ತೀವ್ರಗೊಳ್ಳುತ್ತಿದೆ. ಇವಿ ಬಳಕೆ, ಇಂಧನ ಮಿತ ಬಳಕೆಗೆ ಮೋದಿ ಕರೆ ನೀಡಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರ್ಸ್ ಫ್ಲೆಕ್ಸ್ ಫ್ಯೂಯೆಲ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಮೂರು ಕಾರುಗಳು ರಸ್ತೆಗೆ ಇಳಿಯಲಿದೆ.
ಟಾಟಾ ಮೋಟಾರ್ಸ್ ತನ್ನ ಪ್ರಾಡಕ್ಟ್ ಲೈನ್‌ಅಪ್ ಅನ್ನು ವೇಗವಾಗಿ ವಿಸ್ತರಿಸುತ್ತಿದೆ. ಸಿಎನ್‌ಜಿ, ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಡ್ರೋಜನ್ ಫ್ಯೂಯಲ್ ಸೆಲ್ ತಂತ್ರಜ್ಞಾನದಂತಹ ಪರಿಸರ ಸ್ನೇಹಿ ಮೊಬಿಲಿಟಿ ಪರಿಹಾರಗಳ ಮೇಲೆ ಕಂಪನಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ. 2030ರ ವೇಳೆಗೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ 45 ರಿಂದ 50 ಪ್ರತಿಶತದಷ್ಟು ಪಾಲು ಹೊಂದುವ ಗುರಿಯನ್ನು ಟಾಟಾ ಹೊಂದಿದೆ. ಈ ಗುರಿ ತಲುಪಲು, ಕಂಪನಿ ಈ ವರ್ಷವೇ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ಅಷ್ಟೇ ಅಲ್ಲ, ಮುಂದಿನ ವರ್ಷದ ಆರಂಭದಲ್ಲಿ ಟಾಟಾ ತನ್ನ ಮೊದಲ ಫ್ಲೆಕ್ಸ್-ಫ್ಯುಯೆಲ್ ಕಾರನ್ನೂ ಸಹ ಪರಿಚಯಿಸಲಿದೆ. ಟಾಟಾ ಮೋಟಾರ್ಸ್‌ನಿಂದ ಬರಲಿರುವ ಈ ಹೊಸ ಕಾರುಗಳ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.
24
ಟಾಟಾ ಟಿಯಾಗೊ ಇವಿ ಫೇಸ್‌ಲಿಫ್ಟ್
ಹೊಸ 2026ರ ಟಾಟಾ ಟಿಯಾಗೊ ಇವಿ ಫೇಸ್‌ಲಿಫ್ಟ್ ಕಾರಿನ ಸ್ಪೈ ಶಾಟ್‌ಗಳು ಇತ್ತೀಚೆಗೆ ಲೀಕ್ ಆಗಿವೆ. ಇದರ ಪ್ರಕಾರ, ಕಾರಿನಲ್ಲಿ ಹೊಸದಾಗಿ ಡಿಸೈನ್ ಮಾಡಿದ ಹೆಡ್‌ಲ್ಯಾಂಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು ಹಾಗೂ ಅಪ್‌ಡೇಟ್ ಆದ ಟೈಲ್‌ಲ್ಯಾಂಪ್‌ಗಳು ಇರಲಿವೆ. ಕಾರಿನ ಒಳಭಾಗದಲ್ಲಿ ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅಳವಡಿಸುವ ನಿರೀಕ್ಷೆಯಿದೆ. ಕಂಪನಿ ಹೊಸ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಸಹ ನೀಡಬಹುದು. ಆದರೆ, ಮೆಕ್ಯಾನಿಕಲ್ ಆಗಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಸದ್ಯ ಇರುವ 19.2kWh ಮತ್ತು 24kWh ಬ್ಯಾಟರಿ ಪ್ಯಾಕ್‌ಗಳೇ ಮುಂದುವರೆಯಲಿವೆ. ಇವು ಕ್ರಮವಾಗಿ 250 ಕಿ.ಮೀ ಮತ್ತು 315 ಕಿ.ಮೀ ರೇಂಜ್ ನೀಡುತ್ತವೆ. ಇದರ ಲಾಂಗ್ ರೇಂಜ್ ಆವೃತ್ತಿ ಕೇವಲ 5.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪಬಲ್ಲದು ಮತ್ತು ಗಂಟೆಗೆ 120 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ.
34
ಟಾಟಾ ಸಿಯೆರಾ ಇವಿ
ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಸಿಯೆರಾ ಇವಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಕಾರು ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರಾ BE6, ಮಾರುತಿ ಎವಿಟಾರ, ಎಂಜಿ ZS ಇವಿ ಮತ್ತು ಮುಂಬರುವ ಟೊಯೊಟಾ ಎಬೆಲ್ಲಾ ಕಾರುಗಳಿಗೆ ಸ್ಪರ್ಧೆ ನೀಡಲಿದೆ. ಸಿಯೆರಾ ಇವಿ ರಿಯರ್-ವ್ಹೀಲ್ ಡ್ರೈವ್ (RWD) ಮತ್ತು ಆಲ್-ವ್ಹೀಲ್ ಡ್ರೈವ್ (AWD) ಆಯ್ಕೆಗಳಲ್ಲಿ ಲಭ್ಯವಿರಲಿದೆ ಎಂದು ಟಾಟಾ ಮೋಟಾರ್ಸ್ ಖಚಿತಪಡಿಸಿದೆ. ವರದಿಗಳ ಪ್ರಕಾರ, ಪಂಚ್ ಇವಿಯಲ್ಲಿರುವ ಇಂಟಿಗ್ರೇಟೆಡ್ ಡ್ರೈವ್ ಯೂನಿಟ್ (IDU) ಅನ್ನು ಸಿಯೆರಾ ಇವಿಯಲ್ಲೂ ಬಳಸುವ ಸಾಧ್ಯತೆಯಿದೆ. ಈ ಸೆಟಪ್‌ನಲ್ಲಿ ಎಲೆಕ್ಟ್ರಿಕ್ ಮೋಟಾರ್, ಕಂಟ್ರೋಲರ್, ಕೂಲಿಂಗ್ ಸಿಸ್ಟಮ್ ಮತ್ತು ಗೇರ್‌ಬಾಕ್ಸ್ ಇರುತ್ತದೆ. ಟಾಟಾ ಹ್ಯಾರಿಯರ್ ಇವಿಯ ಪವರ್‌ಟ್ರೇನ್ ಆಯ್ಕೆಗಳನ್ನೇ ಇದಕ್ಕೂ ನೀಡಬಹುದು. ಇದರ ರೇಂಜ್ ಸುಮಾರು 500 ಕಿ.ಮೀ ಇರಬಹುದೆಂದು ಅಂದಾಜಿಸಲಾಗಿದೆ.
2026ರ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ತನ್ನ ಮೊದಲ ಫ್ಲೆಕ್ಸ್-ಫ್ಯುಯೆಲ್ ವಾಹನವನ್ನು ಬಿಡುಗಡೆ ಮಾಡುವುದಾಗಿ ಟಾಟಾ ಇತ್ತೀಚೆಗೆ ಖಚಿತಪಡಿಸಿದೆ. 2025ರ ಇಂಡಿಯಾ ಮೊಬಿಲಿಟಿ ಶೋನಲ್ಲಿ ಪ್ರದರ್ಶಿಸಲಾದ ಟಾಟಾ ಪಂಚ್ ಫ್ಲೆಕ್ಸ್-ಫ್ಯುಯೆಲ್ ಕಾನ್ಸೆಪ್ಟ್‌ನ ಪ್ರೊಡಕ್ಷನ್ ಆವೃತ್ತಿ ಇದಾಗಿರಲಿದೆ. ಸದ್ಯ ಇರುವ ಪಂಚ್ ಕಾರಿನಲ್ಲಿರುವ 1.2-ಲೀಟರ್, 3-ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನೇ ಇದಕ್ಕೂ ಬಳಸುವ ನಿರೀಕ್ಷೆಯಿದೆ. ಆದರೆ, ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಕಾರ್ಯನಿರ್ವಹಿಸಲು ಈ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತದೆ.