ಮದುವೆ ಸಂಭ್ರಮದಲ್ಲಿರುವ ಅಂಬಾನಿ ಕುಟುಂಬದಲ್ಲಿದೆ ದುಬಾರಿ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್!

First Published Mar 3, 2024, 3:51 PM IST

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ದುಬಾರಿ ಮದುವೆ ಹಲವರನ್ನು ಅಚ್ಚರಿಗೊಳಿಸಿದೆ. ಅಂಬಾನಿ ಕುಟುಂಬದ ಆದಾಯ, ಆಸ್ತಿಗೆ ಹೋಲಿಸಿದರೆ ಇದು ಸಾಮಾನ್ಯ ಮದುವೆ. ಅಂಬಾನಿ ಕುಟುಂಬದಲ್ಲಿ ವಿಶ್ವದ ಅತೀ ದುಬಾರಿ ವಾಹನ, ವಸ್ತುಗಳಿವೆ. ಈ ಪೈಕಿ ಇಶಾ ಅಂಬಾನಿ ಬಳಿ ಇರುವ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಅತ್ಯಂತ ದುಬಾರಿ ಕಾರಾಗಿದೆ.  ಈ ಕಾರಿನ ವಿಶೇಷತೆ ಇಲ್ಲಿದೆ.
 

ಅಂಬಾನಿಯ ಆ್ಯಂಟಿಲಿಯಾ ಮನೆ ಅತ್ಯಂತ ಭವ್ಯ ಅರಮನೆ. ಈ ಮನೆಯಲ್ಲಿ ಒಂದು ಇಡೀ ಮಹಡಿಯನ್ನು ತಮ್ಮ ದುಬಾರಿ ಕಾರುಗಳ ಪಾರ್ಕಿಂಗ್‌ಗೆ ಮೀಸಲಿಡಲಾಗಿದೆ. 

ಆ್ಯಂಟಿಲಿಯಾ ಕಾರು ಪಾರ್ಕಿಂಗ್‌ನಲ್ಲಿ ವಿಶ್ವದಲ್ಲಿರುವ ಬಹುತೇಕ ಎಲ್ಲಾ ದುಬಾರಿ ಕಾರುಗಳಿವೆ. ಬೆಂಟ್ಲಿ, ಲ್ಯಾಂಬೋರ್ಗಿನಿ, ಪೊರ್ಶೆ ಸೇರಿದಂತೆ ಅತೀ ದುಬಾರಿ ಕಾರುಗಳಿವೆ. 

ಅಂಬಾನಿ ಕುಟುಂಬದ ಪೈಕಿ ಇಶಾ ಅಂಬಾನಿ ವಿಶ್ವದ ಅತೀ ದುಬಾರಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಎಸ್‌ಯುವಿ ಕಾರಿನ ಮಾಲೀಕರಾಗಿದ್ದಾರೆ. ಹಲವು ಬಾರಿ ಇಶಾ ಅಂಬಾನಿ ತಮ್ಮ ಕಲ್ಲಿನಾನ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇಶಾ ಅಂಬಾನಿ ಬಳಿ ಇರುವ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಬಣ್ಣ ಬದಲಿಸುವ ಕಾರು. ಕಾರು ದೂರದಿಂದ ಬರುತ್ತಿದ್ದರೆ, ಒಂದು ಬಣ್ಣ, ಹತ್ತಿರ ಬಂದಾಗ ಮತ್ತೊಂದು, ಹೀಗೆ ಈ ಕಾರು ಹಲವು ಬಣ್ಣದಲ್ಲಿ ಕಂಗೊಳಿಸಲಿದೆ.

ಹಲವು ಶೇಡ್‌ಗಳ ಮೂಲಕ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ಬಣ್ಣ ಬದಲಿಸುವ ಪೈಟಿಂಗ್ ಮಾಡಲಾಗುತ್ತದೆ. ರೋಲ್ಸ್ ರಾಯ್ಸ್ ತಂತ್ರಜ್ಞರು, ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಈ ರೀತಿ ಶೇಡ್ ನೀಡಲಾಗಿದೆ. ಕೇವಲ ಪೈಟಿಂಗ್ ಬೆಲೆ 1 ಕೋಟಿ ರೂಪಾಯಿಗೂ ಅಧಿಕ.

ಅಂಬಾನಿ ಕುಟುಂಬದಲ್ಲಿರುವ ಈ ರೋಲ್ಸ್ ರಾಯ್ಸ್ ಕಲ್ಲಿನಾನ್ ಈ ಕಾರಿನ ಎಕ್ಸ್ ಶೋ ರೂಂ ಬೆಲೆ ಬರೋಬ್ಬರಿ 10 ಕೋಟಿ ರೂಪಾಯಿ. ಇದು ಕಸ್ಟಮೈಸೇಶನ್ ಕಾರಾಗಿದೆ. ಗ್ರಾಹಕರಿಗೆ ಬೇಕಾದ ರೀತಿ ಮಾಡಿಫಿಕೇಶನ್ ಮಾಡಡಿಕೊಳ್ಳಲು ಸಾಧ್ಯವಿದೆ. ಹೀಗಾದರೆ ಇದರ ಬೆಲೆ 13. 14 ಕೋಟಿ ರೂಪಾಯಿ ಆಗಲಿದೆ.

ಮುಖೇಶ್ ಅಂಬಾನಿ ಕೂಡ ಕೆಲವು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಇಶಾ ಅಂಬಾನಿ ಇದೇ ಕಾರಿನಲ್ಲಿ ಕಾಣಿಸಿಕೊಂಡು ಭಾರಿ ಸದ್ದು ಮಾಡಿದ್ದರು.
 

ಮುಕೇಶ್ ಅಂಬಾನಿ ಬಳಿ ಕೇವಲ ದುಬಾರಿ ಕಾರು ಮಾತ್ರವಲ್ಲ, ಪ್ರೈವೇಟ್ ಜೆಟ್ ಕೂಡ ಹೊಂದಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕುಟುಂಬ ಇದೀಗ ಅದ್ಧೂರಿ ಮದುವೆ ಸಂಭ್ರಮದಲ್ಲಿ ಮುಳುಗಿದೆ. 
 

click me!