ವಿಶ್ವದ ಅತ್ಯಂತ ದುಬಾರಿ, ರೋಮ್ಯಾಂಟಿಕ್ ಕಾರು, ರೋಲ್ಸ್ ರಾಯ್ಸ್ ಅರ್ಕಾಡಿಯಾ ಅನಾವರಣ!

First Published | Feb 29, 2024, 6:41 PM IST

ರೋಲ್ಸ್ ರಾಯ್ಸ್ ವಿಶ್ವದ ಅತ್ಯಂತ ದುಬಾರಿ ಕಾರು ಅನಾವರಣ ಮಾಡಿದೆ. ಇದರ ಬೆಲೆ ಊಹಿಸಲು ಅಸಾಧ್ಯ. ಕಾರು ಪ್ರಿಯರನ್ನೇ ತನ್ನ ಸೆಳೆಯುವ ಅತ್ಯುತ್ತಮ ವಿನ್ಯಾಸದ, ಪ್ರಶಾಂತತೆ ಬಯಸುವ, ವಿಶ್ರಾಂತಿಗೆ ಜಾರುವ, ಗರಿಷ್ಠ ಸುರಕ್ಷತೆ ಒದಗಿಸುವ ರೋಮ್ಯಾಂಟಿಕ್ ಕಾರನ್ನು ರೋಲ್ಸ್ ರಾಯ್ಸ್ ಅನಾವರಣ ಮಾಡಿದೆ. 

ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ ರೋಲ್ಸ್ ರಾಯ್ಸ್‌ಗೆ ಅಗ್ರಸ್ಥಾನ. ಇದೀಗ ರೋಲ್ಸ್ ರಾಯ್ಸ್ ಅತ್ಯಾಕರ್ಷಕ ಅರ್ಕಾಡಿಯಾ ಡ್ರಾಪ್‌ಟೈಲ್ ಸ್ಪೆಷಲ್ ಎಡಿಶನ್ ಕಾರು ಅನಾವರಣ ಮಾಡಿದೆ. 
 

ಇದು ವಿಶ್ವದ ಅತ್ಯಂತ ದುಬಾರಿ ಕಾರು. ಕೆಲ ವರದಿಗಳ ಪ್ರಕಾರ ಈ ಕಾರಿನ ಬೆಲೆ ಬರೋಬ್ಬರಿ £25M. ಭಾರತೀಯ ರೂಪಾಯಿಗಳಲ್ಲಿ 262 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.

Tap to resize

ರೋಲ್ಸ್ ರಾಯ್ಸ್ ಇತಿಹಾಸದಲ್ಲಿ ಅತ್ಯಂತ ಸಂಕೀರ್ಣವಾದ ಕ್ಲಾಕ್ ಫೇಸ್ ಹೊಂದಿದೆ.ಅಸೆಂಬ್ಲಿ ಮಾಡಲು ಐದು ತಿಂಗಳು ತೆಗೆದುಕೊಳ್ಳಲಾಗಿದೆ. ವುಡ್ ಸೆಕ್ಷನ್ ಗಳ ನಿರ್ಮಾಣಕ್ಕೆ 8,000 ಗಂಟೆಗಳನ್ನು ತೆಗೆದುಕೊಳ್ಳಲಾಗಿದೆ. 
 

ಅರ್ಕಾಡಿಯಾ ಅನ್ನವುದು ಪ್ರಾಚೀನ ಗ್ರೀಕ್ ಪುರಾಣಗಳಲ್ಲಿ ಬರುವ ಊರಾಗಿದ್ದು, ಹೆವೆನ್ ಆನ್ ಅರ್ಥ್' ಎಂಬ ಅರ್ಥ ಪಡೆದಿದೆ. ರೋಲ್ಸ್ ರಾಯ್ಸ್‌ನ ಆಧುನಿಕ ಇತಿಹಾಸದಲ್ಲಿ ಡ್ರಾಪ್‌ಟೈಲ್ ಮೊದಲ ರೋಡ್‌ಸ್ಟರ್ ದೇಹ ಶೈಲಿ ಹೊಂದಿದ ವಾಹನವಾಗಿದೆ.

ರೋಲ್ಸ್ ರಾಯ್ಸ್ ಅರ್ಕಾಡಿಯಾ ಡ್ರಾಪ್‌ಟೈಲ್‌ನ ವಿಶೇಷತೆ ಅದರ ಸೂಕ್ಷ್ಮತೆಯಲ್ಲಿದೆ. ಈ ಕೋಚ್ ಗ್ರಾಹಕರ ಜೀವನ ವಿಧಾನಕ್ಕೆ ಮೌಲ್ಯವನ್ನು ಸೇರಿಸುತ್ತದೆ. ಸರಳತೆ, ಪ್ರಶಾಂತತೆ ಮತ್ತು ಸೌಂದರ್ಯ ಈ ಮೂರು ಅಂಶಗಳನ್ನು ಒಳಗೊಂಡಿರುವ ಈ ಅಪೂರ್ವ ಉತ್ಪನ್ನದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ಮೋಟಾರ್ ಕಾರ್ ನಿರ್ಮಾಣ ತಂಡ ರಚಿಸಿರುವ ಈ ಉತ್ಪನ್ನವು ವೈಯಕ್ತಿಕ ಶೈಲಿಗೆ ಮತ್ತು ಸಂವೇದನೆಗೆ ಪೂರಕವಾಗಿರುತ್ತದೆ ಎಂದು ಈ ಕಾರಿನ ವಿನ್ಯಾಸ ನಿರ್ದೇಶಕ ಆಂಡರ್ಸ್ ವಾರ್ಮಿಂಗ್ ಹೇಳಿದ್ದಾರೆ.

ಈ ಕಾರು ರೋಲ್ಸ್ ರಾಯ್ಸ್ ಬ್ರ್ಯಾಂಡ್‌ನ ಅದ್ಭುತ ಉತ್ಪನ್ನವಾಗಿದೆ ಮತ್ತು ಐಷಾರಾಮಿ ಕಾರು ವಿಭಾಗದ ಅಪೂರ್ವ ಪರಿಕಲ್ಪನೆಯಾಗಿದೆ. ಈ ವಿಭಾಗದಲ್ಲಿ, ನಮ್ಮ ವಿನ್ಯಾಸಕರು, ಎಂಜಿನಿಯರ್‌ಗಳು ಮತ್ತು ಕುಶಲಕರ್ಮಿಗಳು ಸೇರಿ ಸಂಪೂರ್ಣವಾದ ಹೊಸ ಆಲೋಚನೆಗಳಿಗೆ ಜೀವ ನೀಡಲು ಶ್ರಮಿಸುತ್ತಾರೆ ಮತ್ತು ಅವರು ಸೊಗಸಾದ ಮೋಟಾರ್ ಕಾರುಗಳನ್ನು ರಚಿಸುತ್ತಾರೆ ಎಂದು ರೋಲ್ಸ್ ರಾಯ್ಸ್ ಮುಖ್ಯ ಕಾರ್ಯನಿರ್ವಾಹಕ ಕ್ರಿಸ್ ಬ್ರೌನ್‌ರಿಡ್ಜ್ ಹೇಳಿದ್ದಾರೆ.

ಪ್ರಶಾಂತತೆ ಒದಗಿಸುವ ಒಂದು ಸೊಗಸಾದ ಕಾರ್ ಆಗಿದೆ. ಆರ್ಕಾಡಿಯಾ ಡ್ರಾಪ್‌ಟೇಲ್ ಶಾಂತಿ, ಗೌರವದ ಸಂಕೇತವಾಗಿದೆ. ಗ್ರಾಹಕರ ವೈಯಕ್ತಿಕ ಅಭಿರುಚಿಗೆ ತಕ್ಕಂತೆ ರೂಪಿಸಲಾಗಿದೆ ಎಂದು ವಿನ್ಯಾಸದ ಮುಖ್ಯಸ್ಥ ಅಲೆಕ್ಸ್ ಇನ್ನೆಸ್ ಹೇಳಿದ್ದಾರೆ.

ಇದೀಗ ರೋಲ್ಸ್ ರಾಯ್ಸ್ ಆರ್ಕಾಡಿಯಾ ಡ್ರಾಪ್‌ಟೇಲ್ ಅನಾವರಣಗೊಂಡ ಬೆನ್ನಲ್ಲೇ ಬಾರಿ ಸದ್ದು ಮಾಡುತ್ತಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆಯಾಗಲಿದೆ. ಅಧಿಕೃತ ಬೆಲೆ ಕೂಡ ಬಹಿರಂಗವಾಗಲಿದೆ.
 

Latest Videos

click me!