25 ಸಾವಿರ ರೂಗೆ ಬುಕ್ ಮಾಡಿ ಹೊಸ ಹ್ಯುಂಡೈ ಕ್ರೆಟಾ N ಲೈನ್, ಮಾ.11ಕ್ಕೆ ಲಾಂಚ್!

First Published | Feb 29, 2024, 5:58 PM IST

ಭಾರತದಲ್ಲಿ ಎಸ್‌ಯುವಿಗಳ ಪೈಕಿ ಹ್ಯುಂಡೈ ಕ್ರೆಟಾಗೆ ಭಾರಿ ಬೇಡಿಕೆ. ಇದೀಗ ಹ್ಯುಂಡೈ ಹೊಚ್ಚ ಹೊಸ ಕ್ರೆಟಾ ಎನ್ ಲೈನ್ ಸ್ಪೆಷಲ್ ವೇರಿಯೆಂಟ್ ಕಾರು ಬಿಡುಗಡೆ ಮಾಡುತ್ತಿದೆ. ಕೇವಲ 25,000 ರೂಪಾಯಿ ನೀಡಿ ಈ ಕಾರು ಬುಕ್ ಮಾಡಬಹುದು. 
 

ಹ್ಯುಂಡೈ ಕಾರುಗಳ ಪೈಕಿ ಕ್ರೆಟಾ ಅತೀ ಹೆಚ್ಚು ಜನಪ್ರಿಯವಾಗಿದೆ. ಇದೀಗ ಹೊಸ ವಿನ್ಯಾಸ, ಹೆಚ್ಚುವರಿ ಫೀಚರ್ಸ್, ಅತ್ಯುತ್ತಮ ಫರ್ಪಾಮೆನ್ಸ್ ಹ್ಯುಂಡೈ ಕ್ರೆಟಾ ಎನ್ ಲೈನ್ ಕಾರು ಬಿಡುಗಡೆಗೆ ಸಜ್ಜಾಗಿದೆ.

ಕ್ರೆಟಾ ಎನ್‌ ಲೈನ್ ಕಾರುಗಳ ಪೈಕಿ ಇದು 3ನೇ ಮಾಡೆಲ್ ಆಗಿದೆ. ಈಗಾಗಲೇ 2 ಎನ್ ಲೈನ್ ಮಾಡೆಲ್ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿದೆ. ಇದೀಗ ಹೊಸ ಬಣ್ಣ ಹಾಗೂ ಹಲವು ಹೊತನಗಳೊಂದಿಗೆ ಕ್ರೆಟಾ ಎನ್ ಲೈನ್ ಬಿಡುಗಡೆಯಾಗುತ್ತಿದೆ.
 

Tap to resize

ಹೊಚ್ಚ ಹೊಸ ಕ್ರೆಟಾ ಎನ್ ಲೈನ್ ಕಾರನ್ನು 25,000 ರೂಪಾಯಿ ಟೋಕನ್ ಮೊತ್ತ ಪಾವತಿ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು. ಇಂದಿನಿಂದಲೆ(ಫೆ.29) ಬುಕಿಂಗ್ ತೆರೆಯಲಾಗಿದೆ.
 

ಹ್ಯುಂಡೈ ಅಧಿಕೃತ ಡೀಲರ್‌ಶಿಪ್ ಬಳಿ ತೆರಳಿ ಕ್ರೆಟಾ ಎನ್ ಲೈನ್ ಕಾರು ಬುಕಿಂಗ್ ಮಾಡಬಹುದು. ಇನ್ನು ಹ್ಯುಂಡೈ ಅಧಿಕೃತ ವೆಬ್‌ಸೈಟ್‌ಗೆ ತೆರಳಿ ಕಾರನ್ನು ಬುಕಿಂಗ್ ಮಾಡಿಕೊಳ್ಳಲು ಸಾಧ್ಯವಿದೆ.

ಹೊಸ ಕ್ರೆಟಾ ಎನ್ ಲೈನ್ ಹೆಚ್ಚು ಸ್ಪೋರ್ಟೀವ್ ಲುಕ್ ಹೊಂದಿದೆ. ಈಗಾಗಲೇ ಕಾರಿನ ಫೋಟೋಗಳನ್ನು ಹ್ಯುಂಡೈ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕಾರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಫೆ.29 ರಿಂದ ಬುಕಿಂಗ್ ಆರಂಭಿಸಿರುವ ಹ್ಯುಂಡೈ ಕ್ರೆಟಾ ಎನ್ ಲೈನ್ ಕಾರು ಮಾರ್ಚ್ 11 ರಂದು ಬಿಡುಗಡೆಯಾಗಲಿದೆ. N ಲೈನ್ ಬ್ಯಾಡ್ಜ್ ಹೊಂದಿರುವ ಈ ಕಾರು ಹಲವು ವಿಶೇಷಗಳನ್ನು ಹೊಂದಿದೆ.
 

ಮುಂಭಾಗ ಗ್ರಿಲ್‌ನಲ್ಲಿ ಹೊಸತನ ತರಲಾಗಿದೆ. ಆ್ಯಂಗುಲರ್ ಡಿಸೈನ್ ಬಂಪರ್, ಹೆಚ್ಚು ಅಗಲವಾದ ಏರ್ ಇನ್ಲೆಟ್ಸ್ ಕಾರಿನ ಅಂದ ಹೆಚ್ಚಿಸಿದೆ. ಇನ್ನು ಹೆಡ್‌ಲ್ಯಾಂಡ್ಸ್ ಹಾಗೂ ಡೇ ಟೈಮ್ ರನ್ನಿಂಗ್ LEDಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.

ನೂತನ ಕಾರಿ ಬೆಲೆ 17.50 ಲಕ್ಷ ರೂಪಾಯಿ ಬೆಲೆಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. 1.5 ಲೀಟರ್ ಪೆಟ್ರೋಲ್ ಎಂಜಿನ್, 160 bhp ಪವರ್ ಹಾಗೂ 253 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.
 

Latest Videos

click me!