ಮಹೀಂದ್ರ ಭಾರತದಲ್ಲಿ ಅತ್ಯಂಕ ಆಕರ್ಷಕ ಹಾಗೂ ಪವರ್‌ಫುಲ್ ಪರ್ಫಾಮೆನ್ಸ್ ಕಾರು ನೀಡುತ್ತಿದೆ. ಇದೀಗ ಈ ತಿಂಗಳಲ್ಲೇ ಹೊಸ 2 ಕಾರು ಬಿಡುಗಡೆ ಮಾಡುತ್ತಿದೆ. ವಿಶೇಷ ಇಂದರೆ ಕೈಗೆಟುಕುವ ಬೆಲೆಯಲ್ಲೇ ಹೊಸ ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ.
ಭಾರತೀಯ ಆಟೋಮೇಕರ್ ಮಹೀಂದ್ರ ಜಾಗತಿಕ ಮಟ್ಟದಲ್ಲೂ ಭಾರಿ ಸದ್ದು ಮಾಡುತ್ತಿದೆ. ಮಹೀಂದ್ರ ಬಲಿಷ್ಠ ಎಸ್‌ಯುವಿ ಕಾರುಗಳಿಗೆ ಭಾರಿ ಬೇಡಿಕೆ ಇದೆ. 5 ಸ್ಟಾರ್ ಸೇಫ್ಟಿ, ಹೊಸ ತಂತ್ರಜ್ಞಾನ, ಅತ್ಯಾತಕರ್ಷಕ ವಿನ್ಯಾಸ ಸೇರಿದಂತೆ ಹಲವು ಕಾರಣಗಳಿಂದ ಮಹೀಂದ್ರ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಈ ತಿಂಗಳಲ್ಲಿ (ಜುಲೈ 2026) ಎರಡು ಹೊಸ ಕಾರುಗಳನ್ನು ಮಹೀಂದ್ರ ಬಿಡುಗಡೆ ಮಾಡುತ್ತಿದೆ.
25
2026ರ ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್
ಜುಲೈ ತಿಂಗಳಲ್ಲಿ ಮಹೀಂದ್ರ ಬಿಡುಗಡೆ ಮಾಡಲಿರುವ ಕಾರುಗಳ ಪೈಕಿ ಒಂದು ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್. ಮಹೀಂದ್ರ ಕಾರುಗಳ ಪೈಕಿ ಗರಿಷ್ಠ ಮಾರಾಟ ದಾಖಲೆ ಹೊಂದಿರುವ ಸ್ಕಾರ್ಪಿಯೋ ಇದೀಗ ಹೊಸ ಅವತಾರ, ಹೊಸ ಫೀಚರ್ಸ್‌ನಲ್ಲಿ ಲಾಂಚ್ ಆಗುತ್ತಿದೆ. ಹೊಸ ಸ್ಟೈಲ್ ಬಂಪರ್, ಗ್ರಿಲ್, ಅಲಾಯ್ ವ್ಹೀಲ್, ಎಲ್ಇಡಿ ಲೈಟ್ಸ್ ಕಾರಿನ ಅಂದ ಮತ್ತಷ್ಟು ಹೆಚ್ಚಿಸಲಿದೆ.
35
ಪ್ರೀಮಿಯಂ ಫೀಚರ್ಸ್
ಸ್ಕಾರ್ಪಿಯೋ ಎನ್ ಫೇಸ್‌ಲಿಫ್ಟ್ ಪ್ರೀಮಿಯಂ ಫೀಚರ್ ನೀಡುತ್ತಿದೆ. ಟಚ್‌ಸ್ಕ್ರೀನ್ ಇನ್ಫೊಟೈನ್ಮೆಂಟ್, TFT ಡಿಸ್‌ಫ್ಲೇ, ಹೊಸ ಡಿಸೈನ್ ಸ್ಟೀರಿಂಗ್ ವ್ಹೀಲ್, ಪನೋರಮಿಕ್ ಸನ್‌ರೂಫ್, ರೇರ್ ಸೀಟಿನಲ್ಲೂ ವೆಂಟಿಲೇಶನ್ ಫೀಚರ್ ನೀಡಲಾಗುತ್ತಿದೆ. ಇದರ ಬೆಲೆ ಸದ್ಯಕ್ಕೆ ಬಹಿರಂಗವಾಗಿಲ್ಲ.
ಮಹೀಂದ್ರ ಈಗಾಗಲೇ ಬಿಇ ಸೀರಿಸ್ ಬಿಡುಗಡೆ ಮಾಡಿದೆ. ಇದೀಗ BE.07 ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಹೊಸ ವಿನ್ಯಾಸದಲ್ಲಿ ಈ ಕಾರು ಬಿಡುಗಡೆಯಾಗುತ್ತಿದೆ. ಮತ್ತೊಂದು ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 600 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಇದರಿಂದ ಸುದೀರ್ಘ ಪ್ರಯಾಣದ ನಡುವೆ ಚಾರ್ಜಿಂಗ್ ಅವಶ್ಯಕತೆ ಇರುವುದಿಲ್ಲ.
55
ಹೊಸ ಫೀಚರ್, ಅತ್ಯಾಧುನಿಕ ತಂತ್ರಜ್ಞಾನ
INGLO ಪ್ಲಾಟ್‌ಫಾರ್ಮ್ ಆಧಾರಿತ ಹೊಸ ಕಾರು 59 kWh ಮತ್ತು 79 kWh ಬ್ಯಾಟರಿ ಪ್ಯಾಕ್ ನೀಡಲಿದೆ. ಹೊಸ ಕಾರು ಫ್ಯೂಚರಿಸ್ಟಿಕ್ ವಿನ್ಯಾಸ ಹೊಂದಿರಲಿದೆ. ಹೀಗಾಗಿ ಹೊಸತನ, ಹೊಸ ಫೀಚರ್ಸ್, ಅತ್ಯಾಧುನಿಕ ತಂತ್ರಜ್ಞಾನ ಹೊಸ ಮಹೀಂದ್ರ BE.07 ಎಲೆಕ್ಟ್ರಿಕ್ ಕಾರಿನಲ್ಲಿ ಕಾಣಬಹುದು.