ಎಥೆನಾಲ್‌ನಲ್ಲಿ ಚಲಿಸುವ E85 ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಲಾಂಚ್, ಕಾರಿನ ಬೆಲೆ, ಮೈಲೇಜ್ ಎಷ್ಟು?

Published : Jun 15, 2026, 04:33 PM IST

ಇ20 ಯಿಂದ ಇ100ರ ವರೆಗೆ ಎಥೆನಾಲ್ ಮೂಲಕ ಚಲಿಸುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಾರಿನ ಬೆಲೆ, ಮೈಲೇಜ್ , ಎಂಜಿನ್ ಸೇರಿದಂತೆ ಇತರ ಮಾಹಿತಿಗಳು ಇಲ್ಲಿದೆ. ಪೆಟ್ರೋಲ್ ಕಾರಿಗಿಂತ ಕಡಿಮೆ ಇದೆಯಾ?

PREV
16
ಮಾರುತಿ ಸುಜುಕಿ ವ್ಯಾಗನ್ಆರ್ ಫ್ಲೆಕ್ಸ್ ಫ್ಯೂಯೆಲ್ ಕಾರು

ಭಾರತದ ಆಟೋಮೊಬೈಲ್ ಹಾಗೂ ಇಂಂಧನ ಕ್ಷೇತ್ರದಲ್ಲಿ ಭಾರಿ ಬದಲಾಣೆಯಾಗುತ್ತಿದೆ. ಎಥೆನಾಲ್ ಚಾಲಿತ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಶೇಕಾಡ 20 ರಿಂದ ಶೇಕಡಾ 100ರಷ್ಟು ಎಥೆನಾಲ್ ಚಾಲಿತ ಫ್ಲೆಕ್ಸ್ ಫ್ಯೂಯೆಲ್ ವಾಹನದಲ್ಲಿ ಕ್ರಾಂತಿಯಾಗಿದೆ. ಮಾರುತಿ ವ್ಯಾಗನ್ಆರ್ ಫ್ಲೆಕ್ಸ್ ಫ್ಯೂಯೆಲ್ ಕಾರು ಬಿಡುಗಡೆಯಾಗಿದೆ.

26
ಫ್ಲೆಕ್ಸ್ ಫ್ಯೂಯೆಲ್ ವ್ಯಾಗನ್ಆರ್ ಕಾರಿನ ಬೆಲೆ

ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ವ್ಯಾಗನ್ಆರ್ ಕಾರು ಇ85 ಎಥೆನಾಲ್ ಫ್ಯೂಯೆಲ್ ಮೂಲಕ ಚಲಿಸಲಿದೆ. ಹೀಗಾಗಿ ಬಹುತೇಕ ಎಥೆನಾಲ್ ಇಂಧನದಲ್ಲೇ ಚಲಿಸುವ ಈ ಕಾರಿನ ಬೆಲೆ 7.25 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇದು ಪೆಟ್ರೋಲ್ ZXi+ MT ವೇರಿಯೆಂಟ್ ಕಾರಿಗಿಂತ 86,000 ರೂಪಾಯಿ ಅಧಿಕವಾಗಿದೆ.

36
ಫ್ಲೆಕ್ಸ್ ಫ್ಯೂಯೆಲ್ ಬೆಲೆ ಹೋಲಿಕೆ

ಮಾರುತಿ ಸುಜುಕಿ ಮಾರುತಿ ವ್ಯಾಗನ್ಆರ್ ಪೆಟ್ರೋಲ್ ವೇರಿಯೆಂಟ್ ಕಾರು 4.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಸಿಎನ್‌ಜಿ ವೇರಿಯೆಂಟ್ ಕಾರಿನ ಬೆಲೆ 5.89 ಲಕ್ಷ ರೂಪಾಯಿಯಿಂದ ಆರಂಭ. ಇನ್ನು ಫ್ಲೆಕ್ಸ್ ಫ್ಯೂಯೆಲ್ ಅಂದರೆ ಎಥೆನಾಲ್ ಕಾರು 1.35 ರಿಂದ 2.25 ಲಕ್ಷ ರೂಪಾಯಿ ಅಧಿಕವಾಗಿದೆ.

46
ಎಂಜಿನ್ ಹಾಗೂ ಪವರ್ ಹೇಗಿದೆ?

ಫ್ಲೆಕ್ಸ್ ಫ್ಯೂಯೆಲ್ ಕಾರು ಪವರ್ ಇಲ್ಲ, ಪಿಕ್ಅಪ್ ಇಲ್ಲ ಎಂದುಕೊಳ್ಳುವಂತಿಲ್ಲ. ಕಾರಣ ವ್ಯಾಗನ್ಆರ್ ಬಯೋಫ್ಯೂಯೆಲ್ ಕಾರು 1.2 ಲೀಟರ್, 4 ಸಿಲಿಂಡರ್, K12N ಎಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನ್ಯೆಯಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಹೀಗಾಗಿ ಅಪ್‌ಗ್ರೇಡೆಡ್ ಫ್ಯೂಯೆಲ್ ಇಂಜೆಕ್ಟರ್ ಬಳಸಲಾಗಿದೆ.

56
ಫ್ಲೆಕ್ಸ್ ಫ್ಯೂಯೆಲ್ ಕಾರಿನ ಫೀಚರ್ಸ್

7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಹಾಗೂ ಆ್ಯಪಲ್ ಕಾರ್‌ಪ್ಲೇ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ರೇರ್ ಪಾರ್ಕಿಂಗ್ ಸೆನ್ಸರ್, ಫಾಗ್ ಲ್ಯಾಂಪ್ಸ್ ಸೇರಿದಂತೆ ಇತರ ಪೆಟ್ರೋಲ್ ವಾಹನದಲ್ಲಿರುವ ಫೀಚರ್ಸ್ ಫ್ಲೆಕ್ಸ್ ಫ್ಯೂಯೆಲ್ ಮಾರುತಿ ವ್ಯಾಗನ್ಆರ್ ಕಾರಿನಲ್ಲೂ ಲಭ್ಯವಿದೆ.

66
ಟೊಯೋಟಾ ಸೇರಿ ಹಲವು ಕಂಪನಿಗಳಿಂದ ಎಥೆನಾಲ್ ಕಾರು

ಶೇಕಡಾ 85ರಷ್ಟು ಎಥೆನಾಲ್ ಇಂಧನದ ಮೂಲಕ ಚಲಿಸುವ ಈ ಕಾರು ಭಾರತದ ಆಟೋಮೊಬೈಲ್ ಹಾಗೂ ಇಂಧನ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತರಲಿದೆ. ಕೇಂದ್ರ ಸರ್ಕಾರ ಇದೀಗ ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇತ್ತ ಟೊಯೋಟಾ ಸೇರಿದಂತೆ ಹಲವು ಕಂಪನಿಗಳು ಎಥೆನಾಲ್ ಫ್ಯೂಯೆಲ್ ಕಾರು ಬಿಡುಗಡೆ ಮಾಡುತ್ತಿದೆ.

Read more Photos on
click me!

Recommended Stories