ಮಳೆಗಾಲದಲ್ಲಿ ಕಾರು ಓಡಿಸ್ತೀರಾ? ಕುಟುಂಬದ ಸುರಕ್ಷತೆಗೆ ಈ 3 ವಿಷಯ ತಪ್ಪದೇ ತಿಳಿದುಕೊಳ್ಳಿ!

Published : Jun 14, 2026, 02:05 PM IST

ಮಳೆಗಾಲದಲ್ಲಿ ಸುರಕ್ಷಿತವಾಗಿ ಕಾರು ಚಾಲನೆ ಮಾಡಲು ಟೈರ್‌ಗಳ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಟೈರ್‌ಗಳು ಸವೆದುಹೋಗಿದ್ದರೆ, ಹೊಸ ಟೈರ್‌ಗಳನ್ನ ಖರೀದಿಸುವ ಮುನ್ನ ಈ ಮೂರು ವಿಷಯಗಳನ್ನ ತಿಳಿಯಿರಿ 

PREV
15
ಮಳೆಗಾಲದಲ್ಲಿ ಸುರಕ್ಶಿತವಾಗಿ ಕಾರು ಡ್ರೈವಿಂಗ್ ಮಾಡುವುದು ಹೇಗೆ?

ಮುಂಗಾರು ಮಳೆ ಶುರುವಾಗಿದೆ. ಬಿಸಿಲಿಗೆ ಬೆವೆ ಬಸವಳಿದ ದೇಹಕ್ಕೆ ಮಳೆರಾಯ ಮಳೆ ಸುರಿಸಿ ತಂಪು ನೀಡಿದ್ದಾನೆ. ಮಳೆಗಾಲ ನಮಗೆ ಶಾಖದಿಂದ ಪರಿಹಾರ ನೀಡುತ್ತೆ. ಬೇಸಿಗೆಗಿಂತ ಮಳೆಗಾಲ ಆಹ್ಲಾದಕರ ವಾತಾವರಣ ಪ್ರತಿಯೊಬ್ಬರು ಇಷ್ಟಪಡ್ತಾರೆ. ಹೊರಗಡೆ ತುಂತುರು ಮಳೆ, ಇಂಥ ವಾತಾವರಣದಲ್ಲಿ ಕುಟುಂಬ ಸಮೇತ ಎಲ್ಲಾದ್ರೂ ಲಾಂಗ್ ಟ್ರೀಪ್ ಹೋಗೋಣ ಎನಿಸದೆ ಇರಲಾರದು.

25
How to Safely Drive in the Rain?

ಮಳೆಗಾಲದಲ್ಲಿ ಕಾರು ಚಾಲನೆ ಸ್ವಲ್ಪ ಸವಾಲಿನ ಕೆಲಸವೇ ಸರಿ. ಜೋರು ಮಳೆಯಿಂದಾಗಿ ರಸ್ತೆಗಳೆಲ್ಲ ಒದ್ದೆಯಾಗಿ, ಕೆಲವಡೆ ಕೆಸರುಮಯವಾಗುತ್ತೆ. ಇಂಥ ರಸ್ತೆಯಲ್ಲಿ ಕಾರು ಚಾಲನೆ ತುಂಬಾ ಚಾಲೆಂಜ್ ಆಗಿರುತ್ತೆ. ಕಾರು ಡ್ರೈವ್ ಮಾಡುವಲ್ಲಿ ನೀವೇಷ್ಟೇ ಪರಿಣತರಾಗಿದ್ದರು. ಕಾರಿನ ಟೈರ್‌ಗಳೇ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಬಹಳಷ್ಟು ಜನರು ಮಳೆಗಾಲದಲ್ಲಿ ಕಾರು ಚಾಲನೆಗೆ ಮುನ್ನ ಇಂಜಿನ್, ಡೋರ್, ಎಲ್ಲ ಪರೀಕ್ಷಿಸುತ್ತಾರೆ ಹೊರತು ಟೈರ್ ಬಗ್ಗೆ ಬಹುತೇಕರು ಗಮನ ಕೊಡಲ್ಲ. ಈ ಸಣ್ಣ ತಪ್ಪು ಮಳೆಯ ಸಮಯದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗುತ್ತೆ. ಒದ್ದೆಯಾದ ರಸ್ತೆಗಳಲ್ಲಿ ಕಾರಿನ ಹಿಡಿತವು(Tyre Grip) ಸಂಪೂರ್ಣವಾಗಿ ಟೈರ್‌ಗಳನ್ನ ಅವಲಂಬಿಸಿರುತ್ತೆ.

35
ಟೈರ್ ಗ್ರಿಪ್ ಪರಿಶೀಲಿಸಿ

ಟೈರ್‌ಗಳು ಸವೆದುಹೋಗಿದ್ದರೆ, ಗ್ರಿಪ್ ಇಲ್ಲದಿದ್ದರೆ, ರಸ್ತೆಯಲ್ಲಿ ಸ್ಕಿಡ್ಡಿಂಗ್ ಮತ್ತು ಅಪಘಾತವಾಗುವ ಆಪಾಯ ಹೆಚ್ಚು. ಹೀಗಾಗಿ ಮಳೆಗಾಲ ಪ್ರಾರಂಭವಾಗುವ ಮೊದಲು ನಿಮ್ಮ ಕಾರಿನ ಟೈರ್ಗಳನ್ನೊಮ್ಮೆ ಪರೀಕ್ಷಿಸಿ. ಕೊನೆ ಬಾರಿ ಯಾವಾಗ ಟೈರ್ ಬದಲಾಯಿಸಿದ್ದೀರಿ, ನಿಮ್ಮ ಕಾರಿನ ಟೈರ್‌ಗಳು ಪೂರ್ತಿ ಸವೆದು ಹೋಗಿವೆಯೇ? ಟೈರ್ ಗ್ರಿಪ್ ಸ್ಥಿತಿ ಹೇಗಿದೆ ಅನ್ನೋದು ತಿಳಿಯಿರಿ. ಅಗತ್ಯ ಬಿದ್ದರೆ ಅವುಗಳನ್ನ ಬದಲಾಯಿಸಿ. ಹಾ.. ಟೈರ್ ಖರೀದಿಸುವ ಮುನ್ನ ಈ ಬಾರಿ ಕೆಲವು ವಿಷಯ ತಿಳಿದುಕೊಂಡು ನಂತರ ಖರೀದಿಸಿ.

 ಟೈರ್ ಟ್ರೆಡ್, ಗ್ರಿಪ್ ಪರಿಶೀಲಿಸಿ:

ಮಳೆಗಾಲದಲ್ಲಿ ಟೈರ್ ಟ್ರೆಡ್ ಬಹಳ ಮುಖ್ಯ. ಟ್ರೆಡ್ ಎಂದರೆ ಟೈರ್ ಮೇಲ್ಮೈಯಲ್ಲಿ ಕೆತ್ತಲಾದ ಮಾದರಿಯಾಗಿದ್ದು ಅದು ನೀರನ್ನು ಹೊರಹಾಕಲು ಸಹಾಯ ಮಾಡುತ್ತದೆ. ಟ್ರೆಡ್ ಸವೆದಿದ್ದರೆ, ಟೈರ್ ರಸ್ತೆಯನ್ನು ಸರಿಯಾಗಿ ಗ್ರಿಪ್ ಮಾಡಲು ಸಾಧ್ಯವಿಲ್ಲ, ಇದು ಸ್ಕಿಡ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೊಸ ಟೈರ್‌ಗಳನ್ನು ಖರೀದಿಸುವಾಗ, ಉತ್ತಮ ಟ್ರೆಡ್, ಗ್ರಿಪ್ ಟೈರ್‌ಗಳನ್ನೇ ಖರೀದಿಸಿ.

45
ಟೈರ್‌ಗಳಲ್ಲಿ ಇವು ಉತ್ತಮ

ಉತ್ತಮ ಗ್ರಿಪ್ ಹೊಂದಿರುವ ಟೈರ್‌ಗಳು ಒದ್ದೆಯಾದ ರಸ್ತೆಗಳಲ್ಲಿ ಸ್ಕಿಡ್ ಆಗದೆ ಆರಾಮವಾಗಿ ಸುರಕ್ಷಿತವಾಗಿರುತ್ತೆ. ಮಳೆಗಾಲದ ಮೊದಲು ನಿಮ್ಮ ಟೈರ್‌ಗಳ ಚಕ್ರದ ಮೇಲಿನ, ಒಳಗಿನ ಸ್ಥಿತಿ ಹೇಗಿದೆ ಅನ್ನೋದು ಪರಿಶೀಲಿಸುವುದರಿಂದ ಅನಾಹುತ ತಪ್ಪಿಸಬಹುದು.

ಸರಿಯಾದ ಗ್ರಾತ್ರದಿರಬೇಕು, ತಯಾರಿಸಿದ ದಿನಾಂಕ ಬಹಳ ಮುಖ್ಯ

ಟೈರ್‌ಗಳನ್ನು ಖರೀದಿಸುವಾಗ, ಕೇವಲ ಬ್ರ್ಯಾಂಡ್ ನೋಡಿ ಖರೀದಿಸಿದರೆ ಸಾಲದು. ವಾಹನ ತಯಾರಕರು ಶಿಫಾರಸು ಮಾಡಿದ ಸರಿಯಾದ ಟೈರ್ ಗಾತ್ರವನ್ನು ಯಾವಾಗಲೂ ಬಳಸಬೇಕು, ಹಣ ಉಳಿಸುವ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಟೈರ್ ಖರೀದಿಸಲೇಬೇಡಿ. ಇದರ ಪರಿಣಾಮ ಬ್ರೇಕ್ ಮಾಡಿದಾಗ ಕಾರು ರಸ್ತೆಯಲ್ಲಿ ಜಾರಿ ಅಪಘಾತವಾಗುವ ಸಾಧ್ಯತೆಯೇ ಹೆಚ್ಚು. 

ಇದರ ಜೊತೆಗೆ ಟೈರ್ ಯಾವಾಗ ತಯಾರಿಸಲಾಗಿದೆ ಅಂತ ತಿಳಿದುಕೊಳ್ಳೋದು ಮುಖ್ಯ. ಕೆಲವೊಮ್ಮೆ ಬಹಳ ವರ್ಷಗಳಿಂದ ಮಾರಾಟವಾಗದೆ ಉಳಿದ ಟೈರ್‌ಗಳು ಹೊಸದಾಗಿ ಕಾಣಿಸಬಹುದು. ಅವುಗಳ ರಬ್ಬರ್ ಗುಣಮಟ್ಟ ಹಾಳಾಗಿರುತ್ತೆ. ಕಡಿಮೆ ಬೆಲೆಗೂ ಕೊಡಬಹುದು. ಅಂಥ ಟೈರ್‌ಗಳನ್ನ ಖರೀದಿಸಿ ಹಣ ಉಳಿಸಿದೆ ಅಂತಾ ಬೀಗಬಾರದು. ಇದು ದೊಡ್ಡ ಸಮಸ್ಯೆ ತಂದೊಡ್ಡುತ್ತೆ ಅನ್ನೊದು ನೆನಪಿರಬೇಕು.

55
ವಿಶ್ವಾಸರ್ಹ ಬ್ರ್ಯಾಂಡ್, ಅಧಿಕೃತ ಡೀಲರ್‌ಗಳಲ್ಲೇ ಖರೀದಿಸಿ

ವಿಶ್ವಾಸಾರ್ಹ ಬ್ರ್ಯಾಂಡ್‌ಗಳು ಮತ್ತು ಅಧಿಕೃತ ಡೀಲರ್‌ಗಳಿಂದ ಟೈರ್‌ಗಳನ್ನು ಖರೀದಿಸುವುದು ಜಾಣತನ. ಸರಿಯಾದ ಟೈರ್‌ ಖರೀದಿಸಿದರೆ ಮಳೆಗಾಲದಲ್ಲೂ ಆರಾಮವಾಗಿ ಕುಟುಂಬದೊಂದಿಗೆ ಪ್ರಯಾಣಿಸಬಹುದು.ಆದ್ದರಿಂದ ಈ ಮುಂಗಾರಿನಲ್ಲಿ ಟೈರ್‌ಗಳನ್ನು ಖರೀದಿಸುವಾಗ ಈ ಮೂರು ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.

Read more Photos on
click me!

Recommended Stories